AI Windfall: ದೇಶದ ಪ್ರತಿ ಪ್ರಜೆಗೂ 30 ಸಾವಿರ ನಗದು, ಎಐಗೆ ಧನ್ಯವಾದ ಹೇಳುತ್ತಿರುವ ತೈವಾನ್ ಜನರು!

Published : Aug 19, 2026, 11:07 AM IST

ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ತನ್ನ ದೇಶದ ಅರ್ಹ ನಾಗರಿಕರಿಗೆ 30 ಸಾವಿರ ರೂಪಾಯಿ ನಗದು ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿಯೇ ಕಾರಣ ಎಂದು ಅವರು ಹೇಳಿದ್ದಾರೆ.

PREV
19
ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿ

ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ತನ್ನ ದೇಶದ ಅರ್ಹ ನಾಗರಿಕರಿಗೆ 30 ಸಾವಿರ ರೂಪಾಯಿ ನಗದು ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಕೃತಕ ಬುದ್ಧಿಮತ್ತೆ ನೇತೃತ್ವದ ಪ್ರಗತಿಯೇ ಕಾರಣ ಎಂದು ಅವರು ಹೇಳಿದ್ದಾರೆ. 70,700 ಕೋಟಿಗಳ ಹ್ಯಾಂಟ್‌ಔಟ್ ಹೊರತಾಗಿಯೂ ತೈವಾನ್ ನಿವ್ವಳ ಸಾಲ ಹೆಚ್ಚಳ ಕಾಣುವುದಿಲ್ಲ ಎಂದು ಲೈ ಹೇಳಿದ್ದಾರೆ.

29
ನಿರೀಕ್ಷೆಗೂ ಮೀರಿ ಜಿಡಿಪಿ ಹೆಚ್ಚಳ

ತೈವಾನ್ ದೇಶದ ಆರ್ಥಿಕತೆ ಈ ಹಿಂದೆ ಊಹಿಸಿದ್ದಕ್ಕಿಂತ ಹೆಚ್ಚು ಬಲವಾಗಿದ್ದು, ಎಐಯಿಂದ ಪಡೆದ ಸಿಕ್ಕ ಪ್ರಗತಿಯನ್ನು ದೇಶದ ನಾಗರಿಕರೊಂದಿಗೆ ಹಂಚಿಕೊಳ್ಳುವ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ತೈವಾನ್ ಪಡೆದುಕೊಳ್ಳಲಿದೆ. ಈ ಕುರಿತಂತೆ ಸಿಯೋಲ್ ಎಕಾನಮಿಕ್ ಡೈಲಿ ವರದಿ ಮಾಡಿದೆ.

39
ಫೆಬ್ರವರಿಯಲ್ಲಿ ಜನರ ಖಾತೆ ಹಣ ನಿರೀಕ್ಷೆ

ವರದಿಯಲ್ಲಿಉಲ್ಲೇಖ ಮಾಡಿರುವಂತೆ, ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಮುಂದಿನ ವರ್ಷ ಎಲ್ಲಾ ನಾಗಕರಿಗೆ ಅಂದರೆ ಪ್ರತಿ ಅರ್ಹ ವ್ಯಕ್ತಿಗೆ 10 ಸಾವಿರ ತೈವಾನೀಸ್ ಡಾಲರ್ ಅಂದರೆ ಸುಮಾರು 4,40,000 ವೋನ್‌ ಹಣವನ್ನು ವಿತರಣೆ ಮಾಡುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ವರ್ಷದೊಳಗೆ ಮುಂದಿನ ವರ್ಷದ ಬಜೆಟ್ ಅಂಗೀಕರಿಸಿದರೆ, ಫೆಬ್ರವರಿಯಲ್ಲಿ ಹೊಸ ವರ್ಷದಲ್ಲಿ ಹಣವನ್ನು ಸ್ವೀಕರಿಸಬಹುದಾಗಿದೆ.

49
ಎಐ ಮತ್ತು ಕ್ಲೌಡ್ ಸೇವೆಗಳಿಗೆ ಭಾರೀ ಡಿಮ್ಯಾಂಡ್

ಈ ವರ್ಷ ತೈವಾನ್ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಸುಮಾರು ಶೇಕಡಾ 11.05ಕ್ಕೆ ತಲುಪುವ ನಿರೀಕ್ಷೆ ಇದ್ದು, ಇದು ಕಳೆದ 39 ವರ್ಷಗಳಲ್ಲಿಯೇ ಅತ್ಯಾಧಿಕ ಎಂದು ಅಂದಾಜು ಮಾಡಲಾಗಿದೆ. ವಿಶೇಷವಾಗಿ ಎಐ ಮತ್ತು ಕ್ಲೌಡ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ವಿವರಿಸಲಾಗಿದೆ. ದೇಶದ ಬೆಳವಣಿಗೆಯ ಫಲವನ್ನು ಪ್ರತಿ ನಾಗರೀಕರಿಗೆ ತಲುಪಿಸುವ ಕ್ರಮವಾಗಿ ಸರ್ಕಾರ ಮಹತ್ವ ಯೋಜನೆಯನ್ನು ಕೈಗೊಳ್ಳುತ್ತಿದೆ.

59
ವಿರೋಧ ಪಕ್ಷಗಳಿಂದ ಟೀಕೆ, ಯಾಕೆ?

ಆದರೆ, ಈ ಯೋಜನೆಗೆ ರಾಜಕೀಯ ವಲಯದಿಂದ ಭಾರ ಟೀಕೆ ಕೇಳಿ ಬಂದಿದ್ದು, ಕಳೆದ ವರ್ಷ ಇಂತಹ ನಗದು ಯೋಜನೆಯನ್ನು ಜಾರಿ ಮಾಡಲು ಹೇಳಿದ ಸಂದರ್ಭದಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಕ್ಷ ಇದನ್ನು ಅಸಂವಿಧಾನಿಕ ಎಂದು ವಿರೋಧ ಮಾಡಿತ್ತಂತೆ. ಆದರೆ ನವೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಎದುರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ಟೀಕೆ ಮಾಡಿದೆ.

69
ಫೈನಲ್ ಆಗುತ್ತಾ ಬಜೆಟ್?

ಇದರ ನಡುವೆಯೇ ತೈವಾನ್ ಸರ್ಕಾರ ಸಮತೋಲಿತ ಆದಾಯ ಮತ್ತು ಖರ್ಚು ಹಾಗೂ ಶೂನ್ಯ ಸಾಲದ ಆಧಾರದ ಮೇಲೆ ಮುಂದಿನ ವರ್ಷದ ಬಜೆಟ್ ರೂಪಿಸಲು ಸಿದ್ಧತೆ ನಡೆಸಿದೆ. ಇದರಂತೆ 235.7 ಬಿಲಿಯನ್ ತೈವಾನೀಸ್ ಡಾಲರ್ ಬಜೆಟ್ ರೂಪಿಸಲು ಸರ್ಕಾರ ಮುಂದಾಗಿದ್ದು, ಈ ಬಜೆಟ್ ಇದೇ ತಿಂಗಳ 20ರಂದು ಫೈನಲ್ ಆಗುವ ನಿರೀಕ್ಷೆ ಇದೆ.

79
235.7 ಶತಕೋಟಿ ತೈವಾನ್ ಡಾಲರ್ ಹಣ ಹಂಚಿಕೆ

ತೈವಾನ್ ದೇಶದಲ್ಲಿ ಸೆಮಿಕಂಡಕ್ಟರ್, ಎಐ (ಕೃತಕ ಬುದ್ಧಿಮತ್ತೆ), ಐಸಿಟಿ ಕ್ಷೇತ್ರಗಳಿಗೆ ವಿಶ್ವದಾದ್ಯಂತ ಭಾರೀ ಬೇಡಿಕೆ ಹೆಚ್ಚಾಗಿದ್ದು, ಇದರಿಂದ ತೈವಾನ್ ದೇಶದ ಆರ್ಥಿಕತೆ ತೀವ್ರವಾಗಿ ಬೆಳೆದಿದೆ. 2026ರ ಆರಂಭದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 14ರಷ್ಟು ಹೆಚ್ಚಾಗಿದ್ದರೆ, ಇದು ವರ್ಷವಿಡೀ ಹೋಲಿಕೆ ಮಾಡಿದರೆ ಶೇಕಡಾ 11ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇದರಂತೆ ಸರ್ಕಾರ ಸುಮಾರು 235.7 ಶತಕೋಟಿ ತೈವಾನ್ ಡಾಲರ್ ಹಣವನ್ನು ಜನರಿಗೆ ಹಂಚಿಕೆ ಮಾಡಲು ಮುಂದಾಗಿದ್ದು, ದೇಶದ ಸುಮಾರು 2.3 ರಿಂದ 2.4 ಕೋಟಿ ಜನರಿಗೆ ಈ ನಗದು ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಅಂದಾಜು ಮಾಡಲಾಗಿದೆ.

89
ಸಾಮಾನ್ಯ ಜನರಿಗೆ ನೆರವು

ಜನರು ಈ ಹಣದಲ್ಲಿ ಶಿಕ್ಷಣ, ಕುಟುಂಬ ವೆಚ್ಚ ಅಥವಾ ಸ್ಥಳೀಯ ವ್ಯವಹಾರ ಹಾಗೂ ವೃದ್ಧರ ಆರೈಕೆಗೆ ಬಳಕೆ ಮಾಡಬಹುದು ಎಂದು ತೈವಾನ್ ಅಧ್ಯಕ್ಷ ಹೇಳಿದ್ದಾರೆ. ತೈವಾನ್‌ನಲ್ಲಿ ಈ ರೀತಿಯ ನಗದು ವಿತರಣೆ ಯೋಜನೆ ಜಾರಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ, ಈ ಹಿಂದೆ 2025ರಲ್ಲೂ ಇದೇ ರೀತಿಯ ನಗದು ಹಂಚಿಕೆ ಮಾಡಲಾಗಿತ್ತು.

99
ಚುನಾವಣಾ ಮುನ್ನ ಯೋಜನೆ ಘೋಷಣೆ?

ತೈವಾನ್‌ನ ಟಿಎಸ್‌ಎಂಸಿ ಸೇರಿದಂತೆ ಹಲವು ಕಂಪನಿಗಳು ಎಐ ಬೂಮ್‌ನಿಂದ ಭಾರೀ ಲಾಭ ಪಡೆದುಕೊಂಡಿದೆ. ರಫ್ತು ಹೆಚ್ಚಾಗಿ ಸರ್ಕಾರಕ್ಕೆ ಬರುವ ತೆರಿಗೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಈ ಕಾರಣದಿಂದಲೇ ಇದಕ್ಕೆ ಎಐ ರೆಡ್ ಪ್ಯಾಕ್ ಅಥವಾ ಲಾಭದ ಹಂಚಿಕೆ ಎಂದು ಕರೆಯಲಾಗುತ್ತಿದೆ. ಇದರಂದ ಸಣ್ಣ ವ್ಯಾಪಾರಿಗಳು, ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವ ಜನರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ. ಆದರೆ ಚುನಾವಣಾ ಮುನ್ನ ಇಂತಹ ಯೋಜನೆ ಘೋಷಣೆ ಮಾಡಿರೋದನ್ನು ವಿರೋಧ ಪಕ್ಷಗಳು ಪಾಪ್ಯುಲಿಸಂ ಎಂದು ಟೀಕೆ ಮಾಡುತ್ತಿದೆ. ಇದರಿಂದ ಜನರಲ್ಲಿ ಅಸಮಾನತೆ ಹೆಚ್ಚಾಗುತ್ತಿದೆ ಎಂದು ಟೀಕೆ ಮಾಡುತ್ತಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories