ಈ ಪುಟ್ಟ ಕಂಪನಿಗೆ ಹೂಡಿಕೆ ಮಾಡಲು ನೂರಾರು ಕೋಟಿ ರೂ. ಸುರಿದ ನಿಖಿಲ್‌ ಕಾಮತ್, ಎಸ್‌ಬಿಐ ಫಂಡ್ಸ್‌: ಕಾರಣ ಹೀಗಿದೆ..

First Published | Sep 7, 2023, 4:48 PM IST

ನಜಾರಾ ಟೆಕ್‌ ಎಂಬ ಕಂಪನಿ ಮೇಲೆ ಇತ್ತೀಚೆಗೆ ಹೆಚ್ಚು ಹೂಡಿಕೆಯಾಗ್ತಿದೆ. ಝೆರೋಧಾ 100 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಎಸ್‌ಬಿಐ ಫಂಡ್ಸ್‌ 410 ಕೋಟಿ ರೂ. ಹೂಡಿಕೆ ಮಾಡಿದೆ. ಈ ಹೊಸ ಕಂಪನಿ ಮೇಲೆ ಇಷ್ಟೊಂದು ಬಂಡವಾಳಕ್ಕೆ ಇಲ್ಲಿದೆ ಕಾರಣ.

ಇತ್ತೀಚೆಗೆ ನಜಾರಾ ಟೆಕ್‌ ಎಂಬ ಕಂಪನಿ ಹೆಚ್ಚು ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಝೆರೋಧಾ ಈ ಕಂಪನಿಯಲ್ಲಿ 100 ಕೋಟಿ ರೂ. ಹೂಡಿಕೆ ಮಾಡ್ತಾರೆಂಬ ಸುದ್ದಿ. ಆ ಸುದ್ದಿ ಇಂದು ಕೊನೆಗೂ ದೃಢವಾಗಿದೆ. ಅಷ್ಟು ಮಾತ್ರವಲ್ಲ, ಎಸ್‌ಬಿಐ ಫಂಡ್ಸ್‌ ನಜಾರಾ ಟೆಕ್‌ನಲ್ಲಿ 410 ಕೋಟಿ ರೂ. ಹೂಡಿಕೆ ಮಾಡಿದೆ. ಈ ಹಿನ್ನೆಲೆ ಪುಟ್ಟ ಕಂಪನಿಗೆ ಈಗ ನೂರಾರು ಕೋಟಿ ರೂ. ಬಂಡವಾಳ ಹರಿದು ಬರ್ತಿದೆ. ಇದಕ್ಕೆ ಕಾರಣ ಏನು ಅಂತೀರಾ.. ಮುಂದೆ ಓದಿ..

ಗೇಮಿಂಗ್ ಮತ್ತು ಸ್ಪೋರ್ಟ್ಸ್ ಮೀಡಿಯಾ ಪ್ಲಾಟ್‌ಫಾರ್ಮ್, ನಜಾರಾ ಟೆಕ್ ಮಂಡಳಿಯು 57.42 ಲಕ್ಷ ಷೇರುಗಳನ್ನು ಎಸ್‌ಬಿಐ ಫಂಡ್‌ಗಳಿಗೆ 410 ಕೋಟಿ ರೂಪಾಯಿಗಳವರೆಗೆ ಆದ್ಯತೆಯ ಆಧಾರದ ಮೇಲೆ 714 ರೂಪಾಯಿಗಳಿಗೆ ವಿತರಿಸಲು ಅನುಮೋದಿಸಿದೆ. ಒಟ್ಟು 410 ಕೋಟಿ ರೂ. ಗಳಲ್ಲಿ 200 ಕೋಟಿ ರೂ. ಮೌಲ್ಯದ ಷೇರುಗಳನ್ನು ಎಸ್‌ಬಿಐ ಮಲ್ಟಿಕ್ಯಾಪ್‌ಗೆ, 120 ಕೋಟಿ ರೂ. ಎಸ್‌ಬಿಐ ಮ್ಯಾಗ್ನಮ್ ಗ್ಲೋಬಲ್ ಫಂಡ್‌ಗೆ ಮತ್ತು 90 ಕೋಟಿ ರೂ. ಎಸ್‌ಬಿಐ ಟೆಕ್ ಆಪರ್ಚುನಿಟೀಸ್‌ಗೆ ನೀಡಲಾಗುವುದು ಎಂದು ತಿಳಿದುಬಂದಿದೆ.

Latest Videos


ಗೇಮಿಂಗ್ ಕಂಪನಿಯ ಷೇರುಗಳು ಇಂದು  1.5 ಪ್ರತಿಶತದಷ್ಟು ಕಡಿಮೆ ವಹಿವಾಟು ನಡೆಸುತ್ತಿವೆ. ಈ ಮೂಲಕ ಸತತ ಎರಡನೇ ದಿನವೂ ಕಡಿಮೆಯಾಗಿದೆ. ಆದರೂ, ಕಳೆದ ಐದು ದಿನಗಳಲ್ಲಿ ಷೇರುಗಳು ಶೇಕಡ 9.2 ರಷ್ಟು ಗಳಿಸಿವೆ. 2023 ರಲ್ಲಿ ಸ್ಟಾಕ್ ಶೇಕಡಾ 42.08 ಹೆಚ್ಚಾಗಿದೆ.

ಇನ್ನು, ನಿಖಿಲ್ ಕಾಮತ್ ಅವರಿಗೆ ನೀಡಿರುವ 100 ಕೋಟಿ ರೂ. ಮೌಲ್ಯದ 14 ಲಕ್ಷ ಷೇರುಗಳಿಗೆ ಹೆಚ್ಚುವರಿಯಾಗಿ ಎಸ್‌ಬಿಐ ಫಂಡ್ಸ್‌ಗೆ ಷೇರು ಹಂಚಿಕೆಯಾಗಿದೆ. ಈ ವಾರದ ಆರಂಭದಲ್ಲಿ, ಸೋಮವಾರ, ಕಂಪನಿಯು Zerodha ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಕಂಪನಿಗಳಿಗೆ ತಲಾ 4 ರೂಪಾಯಿ ಮುಖಬೆಲೆಯ 14 ಲಕ್ಷ ಈಕ್ವಿಟಿ ಷೇರುಗಳನ್ನು ನೀಡುವುದಾಗಿ ಘೋಷಿಸಿತು.

ಜುಲೈ 10 ರಂದು, ಗೇಮಿಂಗ್ ಸಂಸ್ಥೆಯು ತನ್ನ ನಿರ್ದೇಶಕರ ಮಂಡಳಿಯು ಈಕ್ವಿಟಿ ಷೇರುಗಳ ವಿತರಣೆಯ ಮೂಲಕ 750 ಕೋಟಿ ರೂಪಾಯಿಗಳವರೆಗೆ ಹಣವನ್ನು ಸಂಗ್ರಹಿಸಲು ಅನುಮೋದಿಸಿದೆ ಎಂದು ಘೋಷಿಸಿತು. ನಜಾರಾ ಟೆಕ್ ಈಗ ಒಟ್ಟು 540 ಕೋಟಿ ರೂ. ಹಣ ಸಂಗ್ರಹಿಸಿದೆ. 
 

ಹೂಡಿಕೆಗೆ ಕಾರಣ..

ಭಾರತೀಯ ಗೇಮಿಂಗ್ ಮಾರುಕಟ್ಟೆಯು 2022 ರಲ್ಲಿ 2.8 ಬಿಲಿಯನ್‌ ಡಾಲರ್‌ನಿಂದ 2025 ರಲ್ಲಿ 5 ಬಿಲಿಯನ್ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದೆ. ಇದು 28-30 ಶೇಕಡಾ CAGR ನಲ್ಲಿ ಬೆಳೆಯುತ್ತದೆ. ವರ್ಲ್ಡ್ ಎಕನಾಮಿಕ್ ಫೋರಮ್ (WEF) ಪ್ರಕಾರ, ಮೊಬೈಲ್ ಸಾಧನಗಳು ಭಾರತದ ಗೇಮಿಂಗ್ ಉದ್ಯಮದ ಪ್ರಾಥಮಿಕ ಚಾಲಕಗಳಾಗಿವೆ. ಕೈಗೆಟುಕುವ ಬೆಲೆಯ ಇಂಟರ್ನೆಟ್ ಮತ್ತು ಹೆಚ್ಚುವರಿ ಗೇಮಿಂಗ್ ಸಾಮರ್ಥ್ಯಗಳೊಂದಿಗೆ ವೇಗದ ಸ್ಮಾರ್ಟ್‌ಫೋನ್‌ಗಳ ಲಭ್ಯತೆ ಕೂಡ ಮಾರುಕಟ್ಟೆಯನ್ನು ಉತ್ತೇಜಿಸಿದೆ.

ಇನ್ನು, ದೇಶದಲ್ಲಿ ಗೇಮರ್‌ಗಳ ಸಂಖ್ಯೆಯು 2022 ರಲ್ಲಿ 420 ಮಿಲಿಯನ್‌ನಿಂದ 2025 ರ ವೇಳೆಗೆ 500 ಮಿಲಿಯನ್ ತಲುಪುವ ನಿರೀಕ್ಷೆಯಿದೆ. (ಅಂದರೆ 42 ಕೋಟಿಯಿಂದ 50 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ) 

click me!