ಬಳಿಕ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಅವರು 1991 ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕಗೊಂಡರು. ಅವರ ನೇತೃತ್ವದಲ್ಲಿ ಟಾಟಾ ಇಂಡಸ್ಟ್ರೀಸ್ ಹಲವಾರು ಪ್ರಮುಖ ಒಪ್ಪಂದಗಳನ್ನು ಮಾಡಿಕೊಂಡಿತು. 1990 ರಿಂದ 2012 ರವರೆಗೆ ಟಾಟಾ ಸಮೂಹದ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷತೆಯಲ್ಲಿ, ಸಮೂಹದ ಆದಾಯವು ಗಣನೀಯವಾಗಿ ಬೆಳೆಯಿತು ಮತ್ತು 2011-12 ರಲ್ಲಿ $100 ಶತಕೋಟಿಯನ್ನು ತಲುಪಿತು. ನಂತರ ಅವರು ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರವರೆಗೆ ಮಧ್ಯಂತರ ಅಧ್ಯಕ್ಷರಾಗಿದ್ದರು.
ಭಾರತದ ಎರಡನೇ ಮತ್ತು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ, ಸಮಾಜ ಸೇವೆಗಾಗಿ ಕಾರ್ನೆಗೀ ಪದಕ ಮತ್ತು ಸಿಂಗಾಪುರ ಸರ್ಕಾರ ನೀಡುವ ಗೌರವ ನಾಗರಿಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.