ಊರಿನಲ್ಲಿ ಮಾಡಬಹುದಾದ ಒಂದು ಉತ್ತಮ ವ್ಯಾಪಾರ ಎಂದರೆ ತರಕಾರಿ ವ್ಯಾಪಾರ. ನಿಮಗೆ ಸ್ವಂತ ಜಮೀನಿದ್ದರೆ ವಿವಿಧ ತರಕಾರಿಗಳನ್ನು ಬೆಳೆದು ಅವುಗಳನ್ನು ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದು. ಈ ವ್ಯಾಪಾರವನ್ನು ಇನ್ನಷ್ಟು ವೇಗವಾಗಿ ಅಭಿವೃದ್ಧಿಪಡಿಸಬೇಕೆಂದರೆ ಸಾವಯವ ವಿಧಾನಗಳಲ್ಲಿ ತರಕಾರಿಗಳನ್ನು ಬೆಳೆದರೆ ಉತ್ತಮ ಇಳುವರಿಯ ಜೊತೆಗೆ, ದುಪ್ಪಟ್ಟು ಆದಾಯ ಬರುತ್ತದೆ. ಈ ವ್ಯಾಪಾರ ಮಾಡಲು ಹೆಚ್ಚಿನ ಬಂಡವಾಳವೂ ಅಗತ್ಯವಿಲ್ಲ. ಸ್ವಂತ ಜಮೀನಿದ್ದರೆ ರೂ.50 ಸಾವಿರಕ್ಕಿಂತ ಕಡಿಮೆ ವೆಚ್ಚದಲ್ಲಿಯೇ ಈ ವ್ಯಾಪಾರ ಆರಂಭಿಸಬಹುದು. ಬಾಡಿಗೆಗೆ ಪಡೆದರೂ ಬಂಡವಾಳ ಅಷ್ಟಾಗಿ ಹೆಚ್ಚಾಗುವುದಿಲ್ಲ. ತರಕಾರಿ ವ್ಯಾಪಾರ ಚೆನ್ನಾಗಿ ನಡೆಯಬೇಕೆಂದರೆ ನೀವು ಬೆಳೆದ ತರಕಾರಿಗಳನ್ನು ನಗರಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಬೆಳೆಗೆ ಉತ್ತಮ ಬೆಲೆ ಸಿಗುವುದರ ಜೊತೆಗೆ, ಸರಕು ಕೂಡ ಬೇಗನೆ ಮಾರಾಟವಾಗುತ್ತದೆ.