ದಸರಾ ಹಬ್ಬಕ್ಕೆ ಯಮಾಹದಿಂದ ಬಂಪರ್ ಆಫರ್, ಅ.31ರ ವರೆಗೆ ಮಾತ್ರ!

First Published | Oct 15, 2023, 7:13 PM IST

ದಸರಾ ಹಬ್ಬಕ್ಕೆ ಕರ್ನಾಟಕದಲ್ಲಿ ಯಮಹಾದಿಂದ ಆಕರ್ಷಕ ಕೊಡುಗೆ ಘೋಷಣೆ ಮಾಡಿದೆ. ಈ ಆಫರ್ ಅಕ್ಟೋಬರ್ 31ರ ವರೆಗ ಮಾತ್ರ ಲಭ್ಯವಿದೆ. ಇದರೊಳಗೆ ಬುಕ್ ಮಾಡುವ ಗ್ರಾಹಕರಿಗೆ ಹಬ್ಬದ ಹಲವು ಆಫರ್ ಲಭ್ಯವಾಗಲಿದೆ.

ದಸರಾ ಹಬ್ಬದ ಸಡಗರ ಕರ್ನಾಟಕದಲ್ಲಿ ಮನೆ ಮಾಡಿದೆ. ದಸರಾ ಹಬ್ಬಕ್ಕೆ ಹೊಸ ವಾಹನ ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಇದೇ ಹಬ್ಬದ ಸಂದರ್ಭದದಲ್ಲಿ ಆಟೋಮೊಬೈಲ್ ಕಂಪನಿಗಳು ಆಫರ್ ಘೋಷಿಸಲಿದೆ. 

ಕರ್ನಾಟಕದ ದಸರಾ ಹಬ್ಬ ಸ್ವಾಗತಿಸುವ ಮತ್ತು ಆಚರಿಸುವ ನಿಟ್ಟಿನಲ್ಲಿ ಯಮಹಾ ಮೋಟರ್ಸ್ ಇಂಡಿಯಾ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. 
 

Tap to resize

ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಅಂದರೆ 31 ಅಕ್ಟೋಬರ್ 2023 ರವರೆಗೆ ದಸರಾ ಹಬ್ಬದ ಆಫರ್ ಕರ್ನಾಟಕದ ಗ್ರಾಹಕರಿಗೆ ಲಭ್ಯವಾಗಲಿದೆ.
 

ಯಮಹಾದ 150cc FZ-X , 125 Fi Hybrid ಸ್ಕೂಟರ್ ಗಳು,  RayZR ಮತ್ತು Fascino ಗಳಿಗೆ ಈ ದಸರಾ ಹಬ್ಬದ ಕೊಡುಗೆ ಅನ್ವಯವಾಗಲಿದೆ ಎಂದು ಯಮಾಹ ಹೇಳಿದೆ.

ಕೊಡುಗೆಗಳ ವಿವರಗಳು ಈ ಕೆಳಗಿನಂತಿವೆ:
1.    3,000/ ರೂಪಾಯಿಗಳ ಇನ್ ಸ್ಟಂಟ್ ಕ್ಯಾಶ್ ಬ್ಯಾಕ್
2.    ಆಕರ್ಷಕ ಹಣಕಾಸು ಯೋಜನೆಗಳು ಮತ್ತು 2,999 ರೂಪಾಯಿಗಳಿಂದ ಆರಂಭವಾಗುವ  ಅತ್ಯಂತ ಕಡಿಮೆ ಡೌನ್ ಪೇಮೆಂಟ್ ಸೌಲಭ್ಯ.

ಇದರ ಜೊತೆಗೆ ಇತರ ಕೆಲ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತದೆ. ಯಮಹಾ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರು ಹತ್ತಿರದ ಡೀಲರ್‌ಶಿಪ್ ಬಳಿ ಸಂಪರ್ಕಿಸಲು ಯಮಹಾ ಕೋರಿದೆ.

Latest Videos

click me!