ಹಬ್ಬದ ಸಂಭ್ರಮ ಡಬಲ್, ಅ.16ರಿಂದ ಹಾರ್ಲೇ ಡೇವಿಡ್ಸನ್ X440 ಬುಕಿಂಗ್ ಮತ್ತೆ ಆರಂಭ!

First Published Oct 4, 2023, 6:33 PM IST

ಸಾಲು ಸಾಲು ಹಬ್ಬಕ್ಕೆ ಹಾರ್ಲೇ ಡೇವಿಡ್ಸನ್ ಇಂಡಿಯಾ ಬಂಪರ್ ಕೊಡುಗೆ ನೀಡಿದೆ. ಮೇಡ್ ಇನ್ ಇಂಡಿಯಾ ಹಾರ್ಲೇ ಡೇವಿಡ್ಸನ್ X440 ಬೈಕ್ ಅ.16ರಿಂದ ಮತ್ತೆ ಬುಕಿಂಗ್ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಬುಕಿಂಗ್ ಮಾಡಿದ ಗ್ರಾಹಕರಿಗೆ ಅಕ್ಟೋಬರ್ 15 ರಿಂದ ಬೈಕ್ ಡೆಲಿವರಿ ಆಗಲಿದೆ. ಹಾರ್ಲೇ ಬುಕಿಂಗ್ ಹಾಗೂ ಬೈಕ್ ಮಾಹಿತಿ ಇಲ್ಲಿದೆ

ಹೀರೋ ಮೋಟೋಕಾರ್ಪ್ ನವರಾತ್ರಿ ಹಬ್ಬದ ಮೊದಲ ಶುಭ ದಿನದಂದು, ಅಂದರೆ ಅಕ್ಟೋಬರ್ 15, 2023 ರಂದು ತನ್ನ ಪ್ರಪ್ರಥಮ ಸಹಅಭಿವೃದ್ಧಿಯ ಪ್ರೀಮಿಯಮ್ ಮೋಟಾರುಸೈಕಲ್ ಹಾರ್ಲಿ-ಡೇವಿಡ್‌ಸನ್ X440 ದ ಡೆಲಿವರಿಗಳನ್ನು ಆರಂಭಿಸಲು ಸಜ್ಜಾಗಿದೆ.  

ಪ್ರಸ್ತುತ ಹಾರ್ಲಿ-ಡೇವಿಡ್‌ಸನ್ X440, ರಾಜಸ್ಥಾನದ ನೀಮ್ರಾಣಾ ಎಂಬಲ್ಲಿ ಗಾರ್ಡನ್ ಫ್ಯಾಕ್ಟರಿ ಎಂದು ಕರೆಯಲ್ಪಡುವ ಹೀರೋ ಮೋಟೋಕಾರ್ಪ್‍ನ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿದೆ. ಸೆಪ್ಟೆಂಬರ್ 1, 2023ರಿಂದಲೂ ಪೂರ್ವ-ಬುಕ್ ಮಾಡಿದ ಗ್ರಾಹಕರಿಗಾಗಿ ಸಂಸ್ಥೆಯು ಟೆಸ್ಟ್ ರೈಡ್‌ಗಳನ್ನು ಆಯೋಜಿಸುತ್ತಿದೆ. 

ಹೊಸ ಬುಕಿಂಗ್ ವಿಂಡೋ, ಅಕ್ಟೋಬರ್ 16ರಿಂದ ತೆರೆಯಲಿದ್ದು ಗ್ರಾಹಕರು ಎಲ್ಲಾ ಹಾರ್ಲಿ-ಡೇವಿಡ್‌ಸನ್ ಡೀಲರ್‌ಶಿಪ್‌ಗಳು ಮತ್ತು ದೇಶಾದ್ಯಂತ ಇರುವ ಆಯ್ದ ಹೀರೋ ಮೋಟೋಕಾರ್ಪ್ ಔಟ್‍ಲೆಟ್‍ಗಳಲ್ಲಿ ಹೊಸ ಹಾರ್ಲಿ-ಡೇವಿಡ್‌ಸನ್ X440 ಅನ್ನು ಬುಕ್ ಮಾಡಬಹುದು. ಗ್ರಾಹಕರು,ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕೂಡ ಬೈಕ್ ಬುಕ್ ಮಾಡಿಕೊಳ್ಳಬಹುದು.
 

ಹಾರ್ಲೇ ಡೇವಿಡ್ಸನ್ X440 ಬೈಕ್  ಮೂರು ವೈವಿಧ್ಯಗಳಲ್ಲಿ ಲಭ್ಯವಿದೆ – ಡೆನಿಮ್(Denim), ವಿವಿಡ್(Vivid) ಮತ್ತು ಎಸ್(S). ಕ್ರಮವಾಗಿ ಇವುಗಳ ಬೆಲೆ ರೂ. 2,39,500/- (ಡೆನಿಮ್), ರೂ. 2,59,500/- (ವಿವಿಡ್) ಮತ್ತು ರೂ. 2,79,500/- (ಎಸ್)( ಎಲ್ಲಾ ಬೆಲೆ ಎಕ್ಸ್ ಶೋ ರೂಂ)

ಜುಲೈ 2023ರಲ್ಲಿ ಅನಾವರಣಗೊಂಡಾಗಿನಿಂದಲೂ ಹಾರ್ಲಿ-ಡೇವಿಡ್‌ಸನ್ X440  ಭಾರತದಾದ್ಯಂತ ಪ್ರೀಮಿಯಮ್ ವರ್ಗದ ಗ್ರಾಹಕರನ್ನು ಸೆರೆಹಿಡಿದಿಡುವ ಮೂಲಕ ತನ್ನ ಪ್ರದರ್ಶನದ ಕೇವಲ ಒಂದು ತಿಂಗಳೊಳಗೆ 25000ಕ್ಕಿಂತ ಹೆಚ್ಚಿನ ಬುಕಿಂಗ್ ಪಡೆದುಕೊಂಡಿದೆ. ಮೊದಲ ಸೆಟ್‌ನ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೀರೋ ಮೋಟೋಕಾರ್ಪ್ ತಾತ್ಕಾಲಿಕವಾಗಿ ಆನ್‌ಲೈನ್ ಬುಕಿಂಗ್ ವಿಂಡೋವನ್ನು ಮುಚ್ಚಬೇಕಾಯಿತು. 
 

ಹಾರ್ಲಿ-ಡೇವಿಡ್‌ಸನ್ X440 ದೇಶಾದ್ಯಂತ ಕೌತುಕತೆ ಸೃಷ್ಟಿಸುತ್ತಲೇ ಇದೆ. ನಮ್ಮ ನೀಮ್ರಾಣಾ ಘಟಕದಲ್ಲಿ ಉತ್ಪಾದನೆಯು ಪೂರ್ಣಪ್ರಮಾಣದಲ್ಲಿದ್ದು ಅಪಾರ ಸಂಖ್ಯೆಯ ನಮ್ಮ ಪೂರ್ವ-ಬುಕ್ ಮಾಡಿದ ಗ್ರಾಹಕರು ಮೋಟಾರುಸೈಕಲನ್ನು ಟೆಸ್ಟ್ ರೈಡ್(ಪರೀಕ್ಷಾ ಸವಾರಿ) ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಎಂದು ಹೀರೋ ಮೋಟೋಕಾರ್ಪ್‌ನ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ನಿರಂಜನ್ ಗುಪ್ತ ಹೇಳಿದ್ದಾರೆ. ನವರಾತ್ರಿಯ ಮೊದಲ ದಿನದಿಂದಲೇ ನಮ್ಮ ಗ್ರಾಹಕರಿಗೆ   ಹಾರ್ಲಿ-ಡೇವಿಡ್‌ಸನ್ X440 ಯ ಡೆಲಿವರಿಗಳನ್ನು ಆರಂಭಿಸುವ ಮೂಲಕ ಹಬ್ಬದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲು ನಾವು ಸಜ್ಜಾಗಿದ್ದೇವೆ ಎಂದಿದ್ದಾರೆ.

click me!