ಒಂದು ತಿಂಗಳಲ್ಲಿ ದಾಖಲೆ ಬುಕಿಂಗ್ ಕಂಡ ಹೀರೋ ಕರಿಜ್ಮಾXMR , ಏನಿದರ ವಿಶೇಷತೆ?

First Published | Oct 5, 2023, 6:19 PM IST

ಹೀರೋ ಕರಿಜ್ಮಾXMR ಹೊಸ ಅವತಾರದಲ್ಲಿ ಬಿಡುಗಡೆ ಘೋಷಿಸಿದಾಗ ಬೈಕ್ ಪ್ರಿಯರು ಪುಳಕಿತರಾಗಿದ್ದರು. ಕಾರಣ ಹಲವು ವರ್ಷಗಳ ಬಳಿಕ ಮತ್ತದೇ ಕರಿಜ್ಮಾ ಬೈಕ್ ಮೋಡಿ ಮಾಡಲು ಸಜ್ಜಾಗಿತ್ತು. ಆ.29 ರಂದು ಹೊಸ ಕರಿಜ್ಮಾ ಬುಕಿಂಗ್ ಆರಂಭಗೊಂಡಿತ್ತು. ಒಂದು ತಿಂಗಳಿಗೆ ಬುಕಿಂಗ್ ಅಂತ್ಯಗೊಳಿಸಲಾಗಿದೆ. ದಾಖಲೆ ಪ್ರಮಾಣದಲ್ಲಿ ಬುಕಿಂಗ್ ಪಡೆದಿರುವ ಕರಿಜ್ಮಾ ಈ ತಿಂಗಳಿನಿಂದ ಡೆಲಿವರಿ ಆರಂಭಿಸುತ್ತಿದೆ.

ಹೀರೋ ಮೋಟೋಕಾರ್ಪ್ ಹೊಸದಾಗಿ ಬಿಡುಗಡೆ ಮಾಡಿದ ಕರಿಜ್ಮಾ ಎಕ್ಸ್ಎಂಆರ್‌ ಭಾರಿ ಮೋಡಿ ಮಾಡಿದೆ. ಒಂದೇ ತಿಂಗಳಲ್ಲಿ 13,688 ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಹೀರೋ ಮೋಟೋಕಾರ್ಪ್ ಡೀಲರ್‌ಗಳಿಗೆ ಕರಿಜ್ಮಾ ಎಕ್ಸ್ಎಂಆರ್ ರವಾನೆಗಳು ಈಗಾಗಲೇ ಪ್ರಾರಂಭವಾಗಿದ್ದು, ಈ ತಿಂಗಳ ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ವಿತರಣೆಗಳು ಪ್ರಾರಂಭವಾಗಲಿವೆ.

ಹೀರೋ ಕರಿಜ್ಮಾ ಎಕ್ಸ್ಎಂಆರ್ ಆರಂಭಿಕ ಬೆಲೆ 1,72,900 ರೂಪಾಯಿ. ಭಾರತೀಯ ರೂಗಳು ಮತ್ತು ಗ್ರಾಹಕರ ಬುಕಿಂಗ್‌ಗಳು ಆಗಸ್ಟ್ 29, 2023 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 30, 2023 ಕ್ಕೆ ಮುಕ್ತಾಯವಾಗಿದೆ. 

Tap to resize

ಹೊಸ ಕರಿಜ್ಮಾ ಎಕ್ಸ್ಎಂಆರ್ ಈಗಿನ ಬೆಲೆ 1,79,900/- ರೂಗಳು (ಎಕ್ಸ್ ಶೋ ರೂಂ ದೆಹಲಿ) ಮತ್ತು ಕಂಪನಿಯು ಶೀಘ್ರದಲ್ಲೇ ಹೊಸ ಬುಕಿಂಗ್ ವಿಂಡೋವನ್ನು ಪ್ರಾರಂಭಿಸಲಿದೆ.
 

ಹೊಸ ಕರಿಜ್ಮಾ ಎಕ್ಸ್ಎಂಆರ್‌ ತನ್ನ ವರ್ಗದಲ್ಲೇ ಅತ್ಯಂತ ಶಕ್ತಿಶಾಲಿ ಮೋಟಾರ್‌ಸೈಕಲ್ ಮತ್ತು ಅತ್ಯಧಿಕ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮೋಟಾರ್‌ಸೈಕಲ್ ಗೆ 210cc ಲಿಕ್ವಿಡ್ ಕೂಲ್ಡ್ DOHC ಇಂಜಿನ್‌ ಇದ್ದು 6-ಸ್ಪೀಡ್ ಟ್ರಾನ್ಸ್‌ಮಿಷನ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್‌ ಸಹ ಇವೆ.

ಇಂದಿನ ಗ್ರಾಹಕರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹುಡುಕುತ್ತಿರುವಾಗ, ಹೊಸ ಕರಿಜ್ಮಾ ಎಕ್ಸ್ಎಂಆರ್‌ ತನ್ನ ವರ್ಗದಲ್ಲಿಯೇ ಮೊದಲ ಹೊಂದಾಣಿಕೆಯ ವಿಂಡ್‌ಶೀಲ್ಡ್, ಇಂಟೆಲಿಜೆಂಟ್ ಇಲ್ಯುಮಿನೇಷನ್ ಹೆಡ್‌ಲ್ಯಾಂಪ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನೊಂದಿಗೆ ಖಂಡಿತವಾಗಿಯೂ ಅಪ್ರತಿಮ ಮೋಟಾರ್‌ಸೈಕ್ಲಿಂಗ್ ಅನುಭವವನ್ನು ನೀಡುತ್ತದೆ.

ಅತ್ಯುತ್ತಮ ದಕ್ಷತಾಶಾಸ್ತ್ರ, ಕ್ರೀಡಾ ಚುರುಕುತನ, ಸೌಕರ್ಯ ಮತ್ತು ಕ್ರಿಯಾತ್ಮಕ ಕಾರ್ಯಕ್ಷಮತೆಗಳಿಂದ ಹೊಸ ಕರಿಜ್ಮಾ ಎಕ್ಸ್ಎಂಆರ್‌ 210cc ವರ್ಗಕ್ಕೇ ಒಂದು ತಾಜಾತನವನ್ನು ತರಲಿದೆ. ಇದರಲ್ಲಿ, ಲವಲವಿಕೆ ಮತ್ತು ದೀರ್ಘ ಪ್ರವಾಸಕ್ಕೆ ಅಗತ್ಯವಾದ ಸಾಮರ್ಥ್ಯಗಳ ವೈವಿಧ್ಯಮಯ ಮಿಶ್ರಣವಿದೆ. ಹೀಗಾಗಿ ಸವಾರಿ , ಅನನ್ಯವಾಗಿರುತ್ತದೆ.
 

ಹೀರೋ ಕರಿಜ್ಮಾ ಎಕ್ಸ್ಎಂಆರ್‌ ಗೆ ಅದ್ಭುತ ಪ್ರತಿಕ್ರಿಯಿಂದ ರೋಮಾಂಚನಗೊಂಡಿದ್ದೇವೆ. ಅಗಾಧ ಸಂಖ್ಯೆಯ ಬುಕಿಂಗ್‌ಗಳು, ನಮ್ಮ ಈ ಪ್ರಮುಖ ಮೋಟಾರ್‌ಸೈಕಲ್‌ ಬಗ್ಗೆ ನಮ್ಮ ಗ್ರಾಹಕರಿಗೆ ಇರುವ ನಂಬಿಕೆ ಮತ್ತು ಉತ್ಸಾಹಗಳ ಬಗ್ಗೆ ಹೇಳುತ್ತವೆ. ನಿಜಕ್ಕೂ ಲೆಜೆಂಡ್, ತನ್ನ ಆಧುನಿಕ, ಸಮಕಾಲೀನ ಅವತಾರದಲ್ಲಿ ಮರಳಿದೆ ಮತ್ತು ಗ್ರಾಹಕರು ಅದನ್ನು ಪ್ರೀತಿಸುತ್ತಿದ್ದಾರೆ. ಪ್ರತಿಯೊಬ್ಬ ಕರಿಜ್ಮಾ ಮಾಲೀಕರಿಗೂ ಅಸಾಧಾರಣ ಶ್ರೇಷ್ಠ ಸವಾರಿಯ ಅನುಭವ ನೀಡುವುದಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಮುಂಬರುವ ಹಬ್ಬದ ಋತುವಿಗೆ ಮತ್ತಷ್ಟು ಮೆರಗು ನೀಡುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಹೀರೋ ಮೋಟೋಕಾರ್ಪ್‌ ನ ಚೀಫ್ ಬಿಸಿನೆಸ್ ಆಫೀಸರ್ ರಂಜಿವ್‌ಜಿತ್ ಸಿಂಗ್ ಹೇಳಿದ್ದಾರೆ. 

Latest Videos

click me!