VinFast bike news: ವಿನ್‌ಫಾಸ್ಟ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಯಶಸ್ಸಿನ ನಂತರ ಇದೀಗ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಪರಿಚಯಿಸುತ್ತಿದೆ. ಇದಕ್ಕಾಗಿ 15 ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಡೀಲರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಕಾರುಗಳ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ Vinfast ಈಗ ಭಾರತೀಯ ಮಾರುಕಟ್ಟೆಗೆ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್‌ಗಳನ್ನ ಪರಿಚಯಿಸುತ್ತಿದೆ. ಈ ಸಂಬಂಧ ಬಿಗ್ ಡೀಲ್ ನಡೆಸಿದ್ದು, ಶೀಘ್ರದಲ್ಲೇ ಕಂಪನಿ ತನ್ನ ಸ್ಕೂಟರ್‌ಗಳನ್ನ ಮಾರುಕಟ್ಟೆಗೆ ತರಲಿದೆ.
25
ಸೆಪ್ಟೆಂಬರ್‌ನಲ್ಲಿ 2964 ಕಾರುಗಳ ಮಾರಾಟ
Vinfast ಭಾರತದಲ್ಲಿ ಮೂರು ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟ ಮಾಡುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ವಿಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ವಿನ್‌ಫಾಸ್ಟ್! ಕಳೆದ ಸೆಪ್ಟೆಂಬರ್ ಒಂದರಲ್ಲೇ ಈ ಕಂಪನಿಯು ಬರೋಬ್ಬರಿ 2964 ಕಾರುಗಳನ್ನ ಮಾರಾಟ ಮಾಡಿದೆ. ಈಗ ದ್ವಿಚಕ್ರ ವಾಹನಗಳ ಮೂಲಕ ಸಂಚಲನ ಸೃಷ್ಟಿಸಲು ಮುಂದಾಗಿದೆ.
35
50ಕ್ಕೂ ಹೆಚ್ಚು ಡೀಲರ್‌ಗಳ ಜೊತೆ ಡೀಲ್
ದ್ವಿಚಕ್ರ ವಾಹನಗಳನ್ನ ರಸ್ತೆಗೆ ಇಳಿಸುವ ಸಂಬಂಧ ಅದು 50ಕ್ಕೂ ಹೆಚ್ಚು ವಾಹನಗಳ ಮಾರಾಟ ಮಾಡುವ ಡೀಲರ್‌ಗಳ ಜೊತೆ ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದೆ. ಒಪ್ಪಂದದ ಭಾಗವಾಗಿ 15 ರಾಜ್ಯಗಳಲ್ಲಿ ತನ್ನದೇ ಆಗಿರುವ ಮಳಿಗೆಗಳನ್ನ ತರೆಯಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಜೊತೆಗೆ 34 ನಗರಗಳಲ್ಲಿ 50ಕ್ಕೂ ಹೆಚ್ಚು ಶೋ ರೂಮ್ ತೆರೆಯಲು ತೀರ್ಮಾನಿಸಿದೆ.
Vinfast ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನೋಡೋದಾದರೆ.. ಭಾರತೀಯ ಮಾರುಕಟ್ಟೆಯಲ್ಲಿ ಮೂರು ಕಾರುಗಳನ್ನ ಮಾರಾಟ ಮಾಡುತ್ತಿದೆ. VF6, VF7 ಮತ್ತು MPV7 ಕಾರುಗಳನ್ನ ಮಾರಾಟ ಮಾಡ್ತಿದೆ. ಎರಡು ಎಲೆಕ್ಟ್ರಿಕ್ SUV ಗಳು, ಆದರೆ ಒಂದು ಎಲೆಕ್ಟ್ರಿಕ್ MPV. ಈ ಕಾರುಗಳು ವಿಭಿನ್ನ ಗ್ರಾಹಕ ವಿಭಾಗಗಳನ್ನು ಗುರಿಯಾಗಿಸಿಕೊಂಡು ಬ್ಯುಸಿನೆಸ್ ಮಾಡ್ತಿದೆ.