ಹೀರೋ ಸ್ಕೂಟರ್ ದೀಪಾವಳಿ ಆಫರ್, ಬರೋಬ್ಬರಿ 40 ಸಾವಿರ ರೂ ಡಿಸ್ಕೌಂಟ್!

Published : Oct 26, 2024, 12:44 PM IST

ದೀಪಾವಳಿ ಸಂಭ್ರಮದಲ್ಲಿ ಹೀರೋ ಇದೀಗ ಭರ್ಜರಿ ಆಫರ್ ನೀಡಿದೆ. ಹೀರೋ ವಿಡಾ 1 ಸ್ಕೂಟರ್ ಮೇಲೆ ಬರೋಬ್ಬರಿ 40,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ. ಈ ಮೂಲಕ ವಿಡಾ 1 ಸ್ಕೂಟರ್‌ಗಳ ಕೈಗೆಟುಕುವ ದರದಲ್ಲಿ ಲಭ್ಯವಿದೆ.

PREV
15
ಹೀರೋ ಸ್ಕೂಟರ್ ದೀಪಾವಳಿ ಆಫರ್,  ಬರೋಬ್ಬರಿ 40 ಸಾವಿರ ರೂ ಡಿಸ್ಕೌಂಟ್!

ಭಾರತದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಇದೀಗ  ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ನೀಡಿದೆ. ಹೀರೋ ಮೋಟಾರ್‌ಕಾರ್ಪ್ ಇದೀಗ ವಿಡಾ 1 ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ದೀಪಾವಳಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ವಿಡಾ 1 ಪ್ಲಸ್ ಹಾಗೂ ವಿಡಾ 1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 40,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ. ಇದರಿಂದ ಈ ಹಬ್ಬದ ಸಂಭ್ರಮದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸ್ಕೂಟರ್ ಲಭ್ಯವಿದೆ.
 

25

ಈ ಆಫರ್ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಸ್ಕೂಟರ್ ಬುಕಿಂಗ್ ಮಾಡುವ ಗ್ರಾಹಕರಿಗೆ ಲಭ್ಯವಾಗಲಿದೆ. ಹೀರೋ ವಿಡಾ 1 ಪ್ಲಸ್ ಹಾಗೂ ಪ್ಲೋ ಎರಡೂ ಸ್ಕೂಟರ್ ಬ್ಯಾಟರಿ ತೆಗೆದು ಚಾರ್ಜ್ ಮಾಡಬಲ್ಲ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಒಂದು ಬಾರಿ ಚಾರ್ಜ್ ಮಾಡಿದರೆ 165 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೀಗಾಗಿ ಗ್ರಾಹಕರು ಇದೀಗ ವಿಡಾ 1 ಸ್ಕೂಟರ್ ಖರೀದಿಸಲು ಮುಗಿ ಬೀಳುತ್ತಿದ್ದಾರೆ. 

35

ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ 40,000 ರೂಪಾಯಿ ಡಿಸ್ಕೌಂಟ್ ಆಫರ್‌ನ್ನು ಹೀರೋ ಮೋಟಾರ್‌ಕಾರ್ಪ್ ನೀಡಿದೆ. ವಿಶೇಷ ಸೂಚನೆ, ಆಫರ್ ಕುರಿತು ಹತ್ತಿರದ ಹೀರೋ ಡೀಲರ್ ಅಥವಾ ಹೀರೋ ಮೋಟಾರ್‌ಕಾರ್ಪ್ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ. ಇನ್ನು ಆಫರ್ ಮೇಲೆ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಅತೀ ಕಡಿಮೆ ಇಎಂಐನಲ್ಲಿ ಸ್ಕೂಟರ್ ಮನೆಗೆ ತರಲು ಸಾಧ್ಯ. ಕೇವಲ ತಿಂಗಳಿಗೆ 5813 ರೂಪಾಯಿ ಮಾಸಿಕ ಕಂತಿನ ಬೆಲೆಯಲ್ಲಿ ಸ್ಕೂಟರ್ ಖರೀದಿಸಲು ಸಾಧ್ಯವಾಗಲಿದೆ. ಇನ್ನು ಬ್ಯಾಂಕ್ ಕಾರ್ಡ್ ಆಫರ್ ಸೇರಿದಂತೆ ಇತರ ಆಫರ್‌ಗಳು ಗ್ರಾಹಕರ ಕೈಸೇರಲಿದೆ. 

45

ಹೀರೋ ವಿಡಾ 1 ಪ್ಲಸ್ ಸ್ಕೂಟರ್ ಬೆಲೆ 1,02,700 ರೂಪಾಯಿ(ಎಕ್ಸ್ ಶೋರೂಂ). ಇನ್ನು ವಿಡಾ 1 ಪ್ರೋ ಸ್ಕೂಟರ್ ಬೆಲೆ 1,30,200 ರೂಪಾಯಿ(ಎಕ್ಸ್ ಶೋ ರೂಂ) ಎರಡೂ ಸ್ಕೂಟರ್‌ಗೆ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ 40,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇ ಕಾಮರ್ಸ್ ಮೂಲಕ ಬುಕ್ ಮಾಡುವ ಗ್ರಾಹಕರಿಗೆ ಸ್ಕೂಟರ್‌ಗಾಗಿ ಹೆಚ್ಚು ದಿನ ಕಾಯುವ ಅಗತ್ಯವಿಲ್ಲ. ಸುಲಭವಾಗಿ ಹಾಗೂ ವೇಗವಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕೈಸೇರಲಿದೆ.

55

ವಿಡಿಯಾ 1 ಪ್ರೋ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 165 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು ವಿಡಾ 1 ಪ್ಲಸ್ ಸ್ಕೂಟರ್ 143 ಕಿ.ಮಿ ಮೈಲೇಜ್ ರೇಂಜ್ ನೀಡಲಿದೆ. ವಿಡಾ ಪ್ರೋ ಸ್ಕೂಟರ್‌ನಲ್ಲಿ 3.94kWh ಬ್ಯಾಟರಿ ಪ್ಯಾಕ್ ಬಳಸಿದರೆ, ವಿಡಾ 1 ಪ್ಲಸ್ ಸ್ಕೂಟರ್‌ನಲ್ಲಿ 3.44 kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಎರಡೂ ಸ್ಕೂಟರ್ ಗರಿಷ್ಠ ವೇಗ 80 ಕಿ.ಮಿ ಪ್ರತಿ ಗಂಟೆಗೆ. ವಿಶೇಷ ಅಂದರೆ ಒಂದು ನಿಮಿಷ ಚಾರ್ಜ್ ಮಾಡಿದರೆ ಈ ಸ್ಕೂಟರ್ 1.2 ಕಿ.ಮಿ ಮೈಲೇಜ್ ರೇಂಜ್ ನೀಡಲಿದೆ.

Read more Photos on
click me!

Recommended Stories