ಈಗಿನ ಕಾಲದಲ್ಲಿ ಬೈಕ್, ಸ್ಕೂಟರ್ ಅತ್ಯಗತ್ಯ. ಆದರೆ ಪೆಟ್ರೋಲ್, ಡೀಸೆಲ್ ಬೆಲೆ ನೋಡಿದ್ರೆ ಜನಸಾಮಾನ್ಯರಿಗೆ ನಿರ್ವಹಣೆ ಕಷ್ಟವಾಗಲಿದೆ. ಹಾಗಾಗಿ ಎಲ್ಲರೂ ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರಿಸುತ್ತಿದ್ದಾರೆ. ಆದರೆ ಇವಿ ಬೆಲೆ ಹೆಚ್ಚಾಗಿರುವ ಕಾರಣ ಖರೀದಿಗೆ ಹಿಂದೇಟು ಹಾಕುತ್ತಾರೆ. ಅಂಥವರಿಗೆ ದೀಪಾವಳಿ ಹಬ್ಬದಲ್ಲಿ ಬಂಪರ್ ಆಫರ್ ಇದ. ಪ್ರಮುಖ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ 54% ವರೆಗೆ ಡಿಸ್ಕೌಂಟ್ ಘೋಷಿಸಿದೆ. ಯಾವ ಸ್ಕೂಟರ್‌ಗಳ ಮೇಲೆ ಆಫರ್ ಇದೆ ಅಂತ ನೋಡೋಣ.
ತುಂಬಾ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಕು ಅಂದ್ರೆ ಗ್ರೀನ್ ಇನ್ವಿಕ್ಟಾ ಬೆಸ್ಟ್ ಆಯ್ಕೆ. ನೀಲಿ ಬಣ್ಣದ ಈ ಸ್ಕೂಟರ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಒಂದು ಗಂಟೆ ಚಾರ್ಜ್‌ನಲ್ಲಿ 60 ಕಿ.ಮೀ. ವರೆಗೆ ಮೈಲೇಜ್ ರೇಂಜ್ ನೀಡಲಿದೆ. ಈ ಸ್ಕೂಟರ್ ಅರ್ಧಕ್ಕಿಂತ ಹೆಚ್ಚು ಡಿಸ್ಕೌಂಟ್ ನೀಡಲಾಗಿದೆ. ಇದು ನಗರ ಹಾಗೂ ಹಳ್ಳಿಗಳಲ್ಲಿ ದಿನ ದಿನತ್ಯ ಬಳಕೆಗೆ ಸೂಕ್ತ ಆಯ್ಕೆಯಾಗಿದೆ.
ಗ್ರೀನ್ ಇನ್ವಿಕ್ಟಾ ಎಲೆಕ್ಟ್ರಿಕ್ ಸ್ಕೂಟರ್
ಪೂರ್ತಿ ಚಾರ್ಜ್ ಆಗೋಕೆ 4 ರಿಂದ 6 ಗಂಟೆ ಬೇಕು. ರಿಮೋಟ್ ಕಂಟ್ರೋಲ್, ಎಲ್‌ಸಿಡಿ ಮೋಟಾರ್, ಬ್ಯಾಟರಿ ಲೆವೆಲ್ ಇಂಡಿಕೇಟರ್ ಇದೆ. ಅಮೆಜಾನ್ ದೀಪಾವಳಿ ಆಫರ್‌ನಲ್ಲಿ 53% ಡಿಸ್ಕೌಂಟ್‌ನಲ್ಲಿ ಸಿಗುತ್ತದೆ. ಹೀಗಾಗಿ ಅತೀ ಕಡಿಮೆ ಬೆಲೆಯಲ್ಲಿ ಸ್ಕೂಟರ್ ಖರೀದಿಸಲು ಸಾಧ್ಯವಾಗಲಿದೆ.
AMO ಎಲೆಕ್ಟ್ರಿಕ್ ಬೈಕ್
AMO ಇನ್ಸ್ಪೈರ್ ಎಲೆಕ್ಟ್ರಿಕ್ ಸ್ಕೂಟರ್ ಕೆಂಪು ಬಣ್ಣದಲ್ಲಿ ಚೆನ್ನಾಗಿ ಡಿಸೈನ್ ಆಗಿದೆ. ಪೋರ್ಟಬಲ್ ಚಾರ್ಜರ್ ಜೊತೆ ಬರುತ್ತದೆ. ಬಿಳಿ ಮತ್ತು ಬೂದು ಬಣ್ಣಗಳಲ್ಲೂ ಸಿಗುತ್ತದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳು
ಈ ಸ್ಕೂಟರ್ ಉತ್ತಮ ರೈಡಿಂಗ್ ಅನುಭವ ಮತ್ತು ಸುರಕ್ಷತೆ ನೀಡುತ್ತದೆ. ಅಮೆಜಾನ್ ದೀಪಾವಳಿ ಆಫರ್‌ನಲ್ಲಿ ಸಿಗುವ ಈ ಸ್ಕೂಟರ್ ತುಂಬಾ ಹಗುರವಾಗಿದೆ. ಸೈಡ್ ಸ್ಟ್ಯಾಂಡ್ ಸೆನ್ಸರ್ ಕೂಡ ಇದೆ.