ಟಿವಿಎಸ್‌ನಿಂದ ಅತಿ ಅಗ್ಗದ ಇ-ಸ್ಕೂಟರ್‌ ಲಾಂಚ್; 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಹೊಸ ಆರ್ಬಿಟರ್ V1!

Published : Mar 12, 2026, 08:28 PM IST

ಟಿವಿಎಸ್ ಮೋಟಾರ್ ಕಂಪನಿಯು 'ಆರ್ಬಿಟರ್ V1' ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. 'ಬ್ಯಾಟರಿ-ಆಸ್-ಎ-ಸರ್ವಿಸ್' (BaaS) ಯೋಜನೆಯಡಿ ಇದು ಕೇವಲ ₹49,999 ಕ್ಕೆ ಲಭ್ಯವಿದ್ದು, 86 ಕಿ.ಮೀ ಮೈಲೇಜ್ ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ಹೊಂದಿದೆ.

PREV
17
ಅತಿ ಕಡಿಮೆ ಬೆಲೆ ಮತ್ತು ಹೊಸ ಮಾದರಿ

ಟಿವಿಎಸ್ ಮೋಟಾರ್ ಕಂಪನಿಯು ಗುರುವಾರ ಹೊಸ 'ಆರ್ಬಿಟರ್ V1' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಶ್ರೇಣಿಯಲ್ಲಿ ಇದು ಅತ್ಯಂತ ಅಗ್ಗದ ಸ್ಕೂಟರ್ ಆಗಿದ್ದು, ಇದರ ಬೆಲೆ ₹49,999 ರಿಂದ (ಎಕ್ಸ್ ಶೋರೂಂ ದೆಹಲಿ) ಆರಂಭವಾಗುತ್ತದೆ.

27
ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆ

ಡಿಮೆ ಬೆಲೆಗೆ ಈ ಸ್ಕೂಟರ್ ಸಿಗಲು ಮುಖ್ಯ ಕಾರಣ 'ಬ್ಯಾಟರಿ-ಆಸ್-ಎ-ಸರ್ವಿಸ್' (BaaS) ಮಾದರಿ. ಅಂದರೆ, ಗ್ರಾಹಕರು ಸ್ಕೂಟರ್ ಖರೀದಿಸುವಾಗ ಬ್ಯಾಟರಿಯ ಪೂರ್ಣ ಬೆಲೆಯನ್ನು ನೀಡುವ ಬದಲಿಗೆ, ಬ್ಯಾಟರಿ ಬಳಕೆಗೆ ತಿಂಗಳಿಗೆ ಕನಿಷ್ಠ ₹862 ಪಾವತಿಸಿ ಚಂದಾದಾರಿಕೆ (Subscription) ಪಡೆಯಬಹುದು. ಇದರಿಂದ ಆರಂಭಿಕ ಖರೀದಿ ದರ ಗಣನೀಯವಾಗಿ ಇಳಿಕೆಯಾಗಿದೆ.

37
ಬ್ಯಾಟರಿ ಇಲ್ಲದಿದ್ದರೆ ದರ ಎಷ್ಟು?

ಒಂದು ವೇಳೆ ಗ್ರಾಹಕರು BaaS ಯೋಜನೆ ಬೇಡವೆಂದು ಬ್ಯಾಟರಿ ಸಮೇತ ಸ್ಕೂಟರ್ ಖರೀದಿಸಲು ಬಯಸಿದರೆ, ಅದರ ಬೆಲೆ ₹84,500 ಆಗಲಿದೆ. ಆರ್ಬಿಟರ್ ಸರಣಿಯು ಈಗ ಎರಡು ಆಯ್ಕೆಗಳಲ್ಲಿ ಲಭ್ಯವಿದೆ: 1.8 kWh ಬ್ಯಾಟರಿ ಹೊಂದಿರುವ V1 ಮತ್ತು 3.1 kWh ಬ್ಯಾಟರಿ ಹೊಂದಿರುವ V2 ಮಾದರಿ.

47
ಮೈಲೇಜ್ ಮತ್ತು ಚಾರ್ಜಿಂಗ್ ಸಾಮರ್ಥ್ಯ

ಆರ್ಬಿಟರ್ V1 ಸ್ಕೂಟರ್ 1.8 kWh ಬ್ಯಾಟರಿ ಹೊಂದಿದ್ದು, ನಗರದ ದೈನಂದಿನ ಸಂಚಾರಕ್ಕೆ ಸೂಕ್ತವಾಗಿದೆ. ಇದು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 86 ಕಿ.ಮೀ (Certified IDC range) ಚಲಿಸುತ್ತದೆ. ವಿಶೇಷವೆಂದರೆ, ಕೇವಲ 2 ಗಂಟೆ 20 ನಿಮಿಷಗಳಲ್ಲಿ ಶೂನ್ಯದಿಂದ ಶೇ. 80 ರಷ್ಟು ಚಾರ್ಜ್ ಆಗುವ ಸಾಮರ್ಥ್ಯ ಹೊಂದಿದೆ.

57
ವಿನ್ಯಾಸ ಮತ್ತು ಸೌಕರ್ಯ

ದೈನಂದಿನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 845 mm ಉದ್ದದ ಫ್ಲಾಟ್ ಸೀಟ್, 290 mm ವಿಶಾಲವಾದ ಫುಟ್‌ಬೋರ್ಡ್ ಮತ್ತು ಆರಾಮದಾಯಕ ರೈಡಿಂಗ್‌ಗಾಗಿ ನೇರವಾದ ಹ್ಯಾಂಡಲ್‌ಬಾರ್ ನೀಡಲಾಗಿದೆ. ಸೀಟಿನ ಅಡಿಯಲ್ಲಿ 34 ಲೀಟರ್ ಜಾಗವಿದ್ದು, ಎರಡು ಹೆಲ್ಮೆಟ್‌ಗಳನ್ನು ಸುಲಭವಾಗಿ ಇಡಬಹುದು.

67
ಸ್ಮಾರ್ಟ್ ಫೀಚರ್ಸ್‌ ಮತ್ತು ಸುರಕ್ಷತೆ

ಈ ಸ್ಕೂಟರ್ ಕಲರ್ ಎಲ್‌ಸಿಡಿ ಕ್ಲಸ್ಟರ್ ಹೊಂದಿದ್ದು, ಇನ್ ಕಮಿಂಗ್ ಕಾಲ್ ಮತ್ತು ಎಸ್‌ಎಂಎಸ್ ಅಲರ್ಟ್ ನೀಡುತ್ತದೆ. ಮೊಬೈಲ್ ಆ್ಯಪ್ ಮೂಲಕ ಬ್ಯಾಟರಿ ಮಟ್ಟ ಚೆಕ್ ಮಾಡುವುದು, ಆಂಟಿ-ಥೆಫ್ಟ್ (ಕಳ್ಳತನ ತಡೆ), ಜಿಯೋ-ಫೆನ್ಸಿಂಗ್ ಮತ್ತು ಕ್ರ್ಯಾಶ್ ಅಲರ್ಟ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೌಲಭ್ಯವೂ ಇದೆ.

77
ರೈಡಿಂಗ್ ಮೋಡ್‌ಗಳು ಮತ್ತು ವಾರಂಟಿ

ರೈಡರ್‌ಗೆ ನೆರವಾಗಲು ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಮತ್ತು ಪಾರ್ಕಿಂಗ್ ಅಸಿಸ್ಟ್ ಫೀಚರ್‌ಗಳಿವೆ. ಇದು ಎಕೋ (Eco) ಮತ್ತು ಪವರ್ (Power) ಎಂಬ ಎರಡು ಮೋಡ್‌ಗಳನ್ನು ಹೊಂದಿದೆ. BaaS ಯೋಜನೆಯಡಿ 5 ವರ್ಷಗಳು ಅಥವಾ 70,000 ಕಿ.ಮೀ ವರೆಗೆ ವಿಸ್ತೃತ ವಾರಂಟಿ ಹಾಗೂ ಅನಿಯಮಿತ ಮಾಸಿಕ ಬಳಕೆಗೂ ಅವಕಾಶವಿದೆ.

Read more Photos on
click me!

Recommended Stories