ಯುಗಾದಿ ವಿಶೇಷ ಆಫರ್ ಘೋಷಿಸಿದ ಯಮಹಾ, ಬೈಕ್ - ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್, ಕರ್ನಾಟಕದಲ್ಲಿ ಹಬ್ಬದ ಪ್ರಯುಕ್ತ ಈ ಆಫರ್ ನೀಡಲಾಗಿದೆ. ಯಾವ ಸ್ಕೂಟರ್ ಹಾಗೂ ಬೈಕ್ ಮೇಲೆ ಆಫರ್ ನೀಡಲಾಗಿದೆ.
ಎಲ್‌ಪಿಜಿ ಗ್ಯಾಸ್ ಸಮಸ್ಯೆ ತೀವ್ರಗೊಳ್ಳುತ್ತಿರುವ ನಡುವೆ ಯುಗಾದಿ ಹಬ್ಬದ ಸಂಭ್ರಮ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕರ್ನಾಟಕದ ಗ್ರಾಹಕರಿಗೆ ಯಮಹಾ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಹಬ್ಬದ ಋತುವಿನಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಯಮಹಾ ವಾಹನಗಳಿಗೆ ನಗದು ಡಿಸ್ಕೌಂಟ್ ನೀಡಲಾಗಿದೆ. ಕರ್ನಾಟಕದಾದ್ಯಂತ R15, FZ-S Fi Hybrid, RayZR ಮತ್ತು Fascino ಗಾಡಿಗಳ ಮೇಲೆ ಯುಗಾದಿ ವಿಶೇಷ ಕೊಡುಗೆ ಘೋಷಿಸಲಾಗಿದೆ.
25
ಕರ್ನಾಟಕದಲ್ಲಿ ಯುಗಾದಿ ವಿಶೇಷ ಕೊಡುಗೆಗಳು:
ಯಮಹಾ R15 ಸರಣಿಯ ಮೇಲೆ ರಿಯಾಯಿತಿ ಕೊಡುಗೆ: ಈ ಹಬ್ಬದ ಸಂದರ್ಭವನ್ನು 70ನೇ ವಾರ್ಷಿಕೋತ್ಸವದ ವಿಶೇಷ ಬೆಲೆಯೊಂದಿಗೆ ಆಚರಿಸಬಹುದು. ಆನ್ ರೋಡ್ ಬೆಲೆಯ ಮೇಲೆ Rs. 6,000 ವರೆಗೆ ಉಳಿತಾಯ ಮಾಡುವ ಮೂಲಕ ಈ ಆಕರ್ಷಕ ಸೂಪರ್ ಸ್ಪೋರ್ಟ್ ಬೈಕ್ ಅನ್ನು ಈಗ ಮತ್ತಷ್ಟು ಸುಲಭವಾಗಿ ನಿಮ್ಮದಾಗಿಸಿಕೊಳ್ಳಬಹುದು. ಯಮಹಾ ರೇಝಡ್ಆರ್ (RayZR) 125 Fi Hybrid ಮೇಲೆ ವಿಶೇಷ ಕೊಡುಗೆ: ಕ್ರೀಡಾ ವಿನ್ಯಾಸ ಮತ್ತು ಅಸಾಧಾರಣ ಮೌಲ್ಯವನ್ನು ಹೊಂದಿರುವ ಈ ಸ್ಕೂಟರ್ ಮೇಲೆ 70ನೇ ವಾರ್ಷಿಕೋತ್ಸವದ ವಿಶೇಷ ಬೆಲೆಯ ಜೊತೆಗೆ Rs. 7,000 ವರೆಗೆ ರಿಯಾಯಿತಿ ಪಡೆಯಿರಿ.
35
ಯಮಹಾ Fascino 125
ಯಮಹಾ Fascino 125 Fi Hybrid ಮೇಲೆ ಯುಗಾದಿ ಕೊಡುಗೆ: ಯಮಹಾದ ಸ್ಟೈಲಿಶ್ ಮತ್ತು ಇಂಧನ ದಕ್ಷತೆಯ ಈ ಸ್ಕೂಟರ್ ಅನ್ನು ಕೇವಲ Rs. 4,999* ರ ಆರಂಭಿಕ ಮುಂಗಡ ಪಾವತಿಯೊಂದಿಗೆ ಈ ಹಬ್ಬದ ಋತುವಿನಲ್ಲಿ ನಿಮ್ಮದಾಗಿಸಿಕೊಳ್ಳಿ. ಯಮಹಾ FZ-S Fi Hybrid ಮೇಲೆ ಕಡಿಮೆ ಇಎಂಐ ಯೋಜನೆ: ಕಾರ್ಯಕ್ಷಮತೆ ಮತ್ತು ದಕ್ಷತೆಯ ಸಮ್ಮಿಲನವಾದ ಯಮಹಾದ ಸುಧಾರಿತ ಹೈಬ್ರಿಡ್ ಮೋಟಾರ್ ಸೈಕಲ್ ಅನ್ನು ಕೇವಲ Rs. 7,999* ರ ಆರಂಭಿಕ ಮುಂಗಡ ಪಾವತಿಯೊಂದಿಗೆ ಮನೆಗೆ ಕೊಂಡೊಯ್ಯಿರಿ.
ಈ ವಿಶೇಷ ಯುಗಾದಿ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿವೆ. ಹಬ್ಬದ ಆನಂದದ ಜೊತೆಗೆ ಯಮಹಾದ ಕಾರ್ಯಕ್ಷಮತೆ, ಹೊಸತನ ಮತ್ತು ಸವಾರಿಯ ಖುಷಿಯನ್ನು ಕಂಡುಕೊಳ್ಳಲು ಇದು ಗ್ರಾಹಕರಿಗೆ ಸೂಕ್ತ ಸಮಯವಾಗಿದೆ.
55
ಯಮಹಾ ಸ್ಕೂಟರ್ ಹಾಗೂ ಬೈಕ್
ಯಮಹಾದ ವೈವಿಧ್ಯಮಯ ಉತ್ಪನ್ನ ಪೋರ್ಟ್ ಫೋಲಿಯೋದಲ್ಲಿ YZF-R15M (155 ಸಿಸಿ), YZF-R15 V4 (155 ಸಿಸಿ), YZF-R15S V3 (155 ಸಿಸಿ), MT-15 V2 (155 ಸಿಸಿ), ಯಮಹಾ XSR155 (155ಸಿಸಿ) ನಂತಹ ಪ್ರೀಮಿಯಂ ಮೋಟಾರ್ ಸೈಕಲ್ ಗಳು ಮತ್ತು FZ-S Fi ಹೈಬ್ರಿಡ್ (149 ಸಿಸಿ), FZ-S Fi (149 ಸಿಸಿ) ಮತ್ತು FZ-X (149 ಸಿಸಿ) ಒಳಗೊಂಡ FZ ಸರಣಿಗಳು ಸೇರಿವೆ. ಹೆಚ್ಚುವರಿಯಾಗಿ, ಯಮಹಾ ಏರಾಕ್ಸ್ (Aerox) 155 ವರ್ಷನ್ S (155 ಸಿಸಿ), ಏರಾಕ್ಸ್ 155 (155ಸಿಸಿ), ಫ್ಯಾಸಿನೋ S 125 Fi ಹೈಬ್ರಿಡ್ (125ಸಿಸಿ), ಫ್ಯಾಸಿನೋ 125 Fi ಹೈಬ್ರಿಡ್ (125ಸಿಸಿ), ರೇಝಡ್ಆರ್ (RayZR) 125 Fi ಹೈಬ್ರಿಡ್ (125ಸಿಸಿ) ಮತ್ತು ರೇಝಡ್ಆರ್ ಸ್ಟ್ರೀಟ್ ರಾಲಿ 125 Fi ಹೈಬ್ರಿಡ್ (125ಸಿಸಿ) ಸೇರಿದಂತೆ ವಿವಿಧ ಶ್ರೇಣಿಯ ಸ್ಕೂಟರ್ ಗಳನ್ನು ನೀಡುತ್ತದೆ.