ರಾಯಲ್ ಎನ್‍ಫೀಲ್ಡ್ ಇಂದು ಭಾರತ, ಯೂರೋಪ್ ಮತ್ತು ಯು.ಕೆ.ಗಳಲ್ಲಿ ದಿ ನ್ಯೂ ಹಿಮಾಲಯನ್ ಬೈಕ್ ಬಿಡುಗಡೆ ಮಾಡಿದೆ. ಹೊಸ ಬಣ್ಣ, ಹೊಸ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ನೂತನ ಹಿಮಾಲಯನ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಮಾದರಿಯು ಸೀಟು, ರಿಯರ್ ಕ್ಯಾರಿಯರ್, ಫ್ರಂಟ್ ರ್ಯಾಕ್ ಮತ್ತು ಹೊಸ ವಿಂಡ್‍ಸ್ಕ್ರೀನ್‍ನಲ್ಲಿ ಹಲವಾರು ಅಪ್‍ಗ್ರೇಡ್‍ಗಳನ್ನು ಮಾಡಿದ್ದು ಮತ್ತಷ್ಟು ಸಮರ್ಥ ಮತ್ತು ಅನುಕೂಲಕರ ವೈವಿಧ್ಯಮಯ ಸಾಹಸ ರೈಡಿಂಗ್ ನೀಡಲಿದೆ.
ಸಾಹಸ ಟೂರಿಂಗ್‍ನಲ್ಲಿ ವಿಶಿಷ್ಟ ಉಪ ವಿಭಾಗವನ್ನು ಸೃಷ್ಟಿಸುವ ಉದ್ದೇಶದಿಂದ ಬಿಡುಗಡೆಯಾದ ದಿ ಹಿಮಾಲಯನ್ ಅತ್ಯಂತ ಯಶಸ್ವಿಯಾಗಿದೆ ಮತ್ತು ವಿಶ್ವದಾದ್ಯಂತ ಸಾಹಸ ರೈಡರ್ ವಿಸ್ತರಿಸುತ್ತಿರುವ ಸಮುದಾಯವಾಗಿದೆ. 2016ರಲ್ಲಿ ಮೊದಲ ಬಾರಿಗೆ ದಿ ಹಿಮಾಲಯನ್ ಬಿಡುಗಡೆಯಾಯಿತು. ಕಳೆದ 5 ವರ್ಷಗಳಿಂದ ಇದು ವಿಶ್ವದಾದ್ಯಂತ ಆಫ್ ರೋಡ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಸರಳ, ಸಮರ್ಥ ಮತ್ತು `ಗೋ-ಎನಿವೇರ್’ ಮೋಟಾರ್‍ಸೈಕಲ್ ದಿ ಹಿಮಾಲಯನ್ ಹಿಮಾಲಯಾದ್ಯಂತ 50 ವರ್ಷಗಳಿಗೂ ಮೀರಿದ ರಾಯಲ್ ಎನ್‍ಫೀಲ್ಡ್‍ನ ರೈಡಿಂಗ್ ಅನುಭವದಿಂದ ಸ್ಫೂರ್ತಿ ಪಡೆದಿದೆ. ತನ್ನ ವೈವಿಧ್ಯತೆ, ಸರಳತೆ ಮತ್ತು ಅರ್ಹತೆಯಿಂದ ದಿ ಹಿಮಾಲಯನ್ ವಿಶ್ವದಾದ್ಯಂತ ರೈಡರ್‌ಗಳಿಂದ ಅಸಾಧಾರಣ ಪ್ರತಿಕ್ರಿಯೆ ಪಡೆದಿದೆ.
ದಿ ಹಿಮಾಲಯನ್ ಇಂದು ಜಾಗತಿಕ ಮೋಟಾರ್‍ಸೈಕಲ್ ಪರಿಣಿತರಿಂದ ನೈಜ ಸಾಮಥ್ರ್ಯದ ಅಡ್ವೆಂಚರ್ ಟೂರರ್ ಆಗಿ ಮಾನ್ಯತೆ ಪಡೆದಿದೆ, ಮುಂಚೂಣಿಯ ವಾಹನೋದ್ಯಮ ಪತ್ರಿಕೆಗಳಲ್ಲಿ ಬರಹಗಳನ್ನು ಕಂಡಿದೆ ಮತ್ತು ಯೂರೋಪ್, ಅಮೆರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಆಗ್ನೇಯ ಏಷ್ಯಾ ಒಳಗೊಂಡು ಹಲವಾರು ಪ್ರದೇಶಗಳಲ್ಲಿ ರಾಯಲ್ ಎನ್‍ಫೀಲ್ಡ್ ಮೋಟಾರ್‍ಸೈಕಲ್‍ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ.
ತನ್ನ ಸಮುದಾಯ ಹಾಗೂ ರೈಡಿಂಗ್ ಉತ್ಸಾಹಿಗಳಿಂದ ಸ್ಫೂರ್ತಿ ಪಡೆದ ದಿ ಹಿಮಾಲಯನ್ ಸತತವಾಗಿ ಸೌಂದರ್ಯದ ಹಾಗೂ ಕಾರ್ಯ ನಿರ್ವಹಣೆಯ ಅಪ್‍ಗ್ರೇಡ್‍ಗಳನ್ನು ಪಡೆದುಕೊಂಡು ಆನ್ ಮತ್ತು ಆಫ್ ದಿ ರೋಡ್‍ನಲ್ಲಿ ಒಟ್ಟಾರೆ ರೈಡ್ ಅನುಭವ ಹೆಚ್ಚಿಸಿದೆ. ಹೊಸ ಹಿಮಾಲಯನ್ ತನ್ನ ಮೂಲ ವೈವಿಧ್ಯತೆ ಮತ್ತು ಉತ್ಸಾಹ ಉಳಿಸಿಕೊಂಡಿದೆ ಮತ್ತು ರೈಡ್ ಅನುಭವವನ್ನು ರಿಯಲ್-ಟೈಮ್ ದಿಕ್ಕುಗಳಿಗೆ ಕೇಂದ್ರೀಕೃತ ನ್ಯಾವುಗೇಷನ್ ಡಿಸ್ಪ್ಲೇಗಳನ್ನು ನೀಡುವ ಗೂಗಲ್ ಮ್ಯಾಒಸ್ ಪ್ಲಾಟ್‍ಫಾರಂನೊಂದಿಗೆ ನಿರ್ಮಿಸಲಾದ ರಾಯಲ್ ಎನ್‍ಫೀಲ್ಡ್ ಟ್ರಿಪ್ಪರ್ ಸೇರ್ಪಡೆ ಮಾಡುವ ಮೂಲಕ ಮತ್ತು ರೈಡರ್‍ನ ಸ್ಮಾರ್ಟ್‍ಫೋನ್ ಮೂಲಕ ರಾಯಲ್ ಎನ್‍ಫೀಲ್ಡ್ ಆ್ಯಪ್‍ಗೆ ಹೊಂದಿಸುವ ಮೂಲಕ ಹೆಚ್ಚು ಸಕ್ರಿಯಗೊಳಿಸುತ್ತದೆ.
ಈ ಬಿಡುಗಡೆಯಿಂದ ರಾಯಲ್ ಎನ್‍ಫೀಲ್ಡ್ ಎಂಐವೈ ಟೂಲ್ ಅನ್ನು ಹಿಮಾಲಯನ್‍ನಲ್ಲಿ ಪರಿಚಯಿಸಿದ್ದು ಇದನ್ನು ತಮ್ಮ ಮೋಟಾರ್‍ಸೈಕಲ್ ಅನ್ನು ವೈಯಕ್ತಿಕಗೊಳಿಸುವ ಗ್ರಾಹಕರಿಗೆ ಹೆಚ್ಚುವರಿ ಸ್ಟೈಲ್, ಅನುಕೂಲ ಮತ್ತು ರಕ್ಷಣೆಯನ್ನು ನೀಡಲು ಅಸಂಖ್ಯ ಅಕ್ಸೆಸರಿಗಳೊಂದಿಗೆ ನೀಡುತ್ತದೆ ಇದರೊಂದಿಗೆ ಟೂರಿಂಗ್ ಮಿರರ್ ಕಿಟ್, ಕಂಫರ್ಟ್ ಸೀಟ್ಸ್, ಹ್ಯಾಂಡಲ್‍ಬಾರ್ ಬ್ರೇಸ್ ಅಂಡ್ ಪ್ಯಾಡ್, ಅಲ್ಯುಮಿನಿಯಂ ಪ್ಯಾನಿಯರ್ಸ್ ಮತ್ತು ಮೌಂಟಿಂಗ್ ಕಿಟ್‍ಗಳನ್ನು ಹೊಂದಿದೆ.
ಹೊಸ ಹಿಮಾಲಯನ್ ಸುಧಾರಿತ ಸೀಟ್ ಕುಷನಿಂಗ್‍ನೊಂದಿಗೆ ರೈಡರ್‍ಗಳಿಗೆ ಮತ್ತಷ್ಟು ಸೌಖ್ಯದೊಂದಿಗೆ ವಿಸ್ತರಿಸಿದ ಸ್ಯಾಡಲ್ ಟೈಮ್ ಆನಂದಿಸಲು ಅವಕಾಶ ನೀಡುತ್ತದೆ. ಹೊಸ ವಿಂಡ್‍ಸ್ಕ್ರೀನ್ ಗಾಳಿಯನ್ನು ರೈಡರ್‍ನಿಂದ ದೂರವಿರಿಸುತ್ತದೆ, ಇದರಿಂದ ಸ್ಯಾಡಲ್‍ನಲ್ಲಿ ಹೆಚ್ಚು ಅನುಕೂಲಕರ ಮತ್ತು ಆನಂದದಾಯಕ ಮೈಲಿಗಳನ್ನು ಕ್ರಮಿಸಬಹುದು. ಹೊಸ ಹಿಮಾಲಯನ್‍ನ ರಿಯರ್ ಕ್ಯಾರಿಯರ್ ಈಗ ಹೆಚ್ಚುವರಿ ಪ್ಲೇಟ್ ಹೊಂದಿದ್ದು ಅದು ಸುರಕ್ಷಿತ ಬಿಗಿತ ಮತ್ತು ಯಾವುದೇ ಲಗೇಜ್ ಇರಿಸಲು ನೆರವಾಗುತ್ತದೆ.
ಹೆಚ್ಚುವರಿಯಾಗಿ ರಿಯರ್ ಕ್ಯಾರಿಯರ್ ಈಗ ಎತ್ತರ ಕಡಿಮೆ ಮಾಡಲಾಗಿದ್ದು ರೈಡರ್‍ಗಳಿಗೆ ಮೋಟಾರ್‍ಸೈಕಲ್ ಸವಾರಿ ಮತ್ತಷ್ಟು ಸುಲಭವಾಗಿಸಿದೆ. ಹೊಸ ಮತ್ತು ತೆಳುವಾದ ದಕ್ಷತಾಶಾಸ್ತ್ರೀಯವಾಗಿ ಹೊಂದಿಸಿದ ಫ್ರಂಟ್ ರ್ಯಾಕ್‍ನಿಂದ ರೈಡರ್ ರೈಡಿಂಗ್ ಸಮಯದಲ್ಲಿ ಕಾಲುಗಳ ನಡುವೆ ಅಡ್ಡಬರುವುದು ಕಡಿಮೆ ಮಾಡಿ ಒಟ್ಟಾರೆ ಸೌಖ್ಯ ಮತ್ತು ಅನುಭವ ಸುಧಾರಿಸುತ್ತದೆ.
ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಮೂರು ಬಣ್ಣಗಳಲ್ಲಿ ಲಭ್ಯವಿದೆ- ನ್ಯೂ ಗ್ರಾನೈಟ್ ಬ್ಲಾಕ್, ಮಿರೇಜ್ ಸಿಲ್ವರ್ ಮತ್ತು ಪೈನ್ ಗ್ರೀನ್, ಇದರೊಂದಿಗೆ ಪ್ರಸ್ತುತ ಇರುವ ಮೂರು ಬಣ್ಣಗಳು-ರಾಕ್ ರೆಡ್, ಲೇಕ್ ಬ್ಲೂ ಮತ್ತು ಗ್ರಾವೆಲ್ ಗ್ರೇ ಇವೆ. ಈ ಮೋಟಾರ್‍ಸೈಕಲ್ ಭಾರತದಲ್ಲಿ ಎಲ್ಲ ರಾಯಲ್ ಎನ್‍ಫೀಲ್ಡ್ ಮಳಿಗೆಗಳಲ್ಲಿ ಬುಕಿಂಗ್ ಮತ್ತು ಟೆಸ್ಟ್ ರೈಡ್‍ಗಳಿಗೆ ಲಭ್ಯವಿದ್ದು ಪ್ರಾರಂಭಿಕ ಬೆಲೆ ರೂ. 2,01,314 ರೂಪಾಯಿ(ಎಕ್ಸ್ ಶೋರೂಂ).
ಕೇವಲ 5 ವರ್ಷಗಳ ಅಲ್ಪ ಅವಧಿಯಲ್ಲಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಜಾಗತಿಕ ಅಡ್ವೆಂಚರ್ ಟೂರಿಂಗ್‍ನಲ್ಲಿ ಹೊಸ ವಿಭಾಗವನ್ನು ತೆರೆದಿದ್ದು ತನ್ನನ್ನು ನೈಜವಾದ ಜಾಗತಿಕ ಮೋಟಾರ್‍ಸೈಕಲ್ ಆಗಿ ಅಭಿವೃದ್ಧಿಪಡಿಸಿಕೊಂಡಿದೆ ಮತ್ತು ಹಲವಾರು ದೇಶಗಳಲ್ಲಿ ರಾಯಲ್ ಎನ್‍ಫೀಲ್ಡ್ ಅತ್ಯಂತ ಬಯಸುವ ಮೋಟಾರ್‍ಸೈಕಲ್‍ಗಳಲ್ಲಿ ಒಂದಾಗಿದೆ. ಮೂಲ 2016ರಲ್ಲಿ ಅಭಿವೃದ್ಧಿಯಾದ 2016 ಹಿಮಾಲಯನ್ ಈ ವಿಭಾಗದ ಪ್ರಥಮ ಮತ್ತು ಅತ್ಯಂತ ವೈವಿಧ್ಯಮಯ ಹಾಗೂ ಲಭ್ಯವಿರುವ ಮೋಟಾರ್‍ಸೈಕಲ್ ಆಗಿದೆ. ಹಲವು ವರ್ಷಗಳಿಂದ ನಮ್ಮ ರೈಡಿಂಗ್ ಸಮುದಾಯದ ಫೀಡ್‍ಬ್ಯಾಕ್ ಆಧರಿಸಿ ನಾವು ದಿ ಹಿಮಾಲಯನ್ ಅನ್ನು ಅದರ ವಿನ್ಯಾಸ ಮತ್ತು ಕಾರ್ಯಕ್ಷಮತೆಯೊಂದಿಗೆ ವಿಕಾಸಗೊಳಿಸುತ್ತಿದ್ದೇವೆ ಮತ್ತು ಒಟ್ಟಾರೆ ರೈಡ್ ಅನುಭವ ಸುಧಾರಿಸಿದ್ದೇವೆ. ಇದು ವಿಶ್ವದಾದ್ಯಂತ ಸಾಹಸದ ಉತ್ಸಾಹಿಗಳಲ್ಲಿ ಅನುರಣಿಸಿದ್ದು ಅವರು ಈಗ ಹೊಸ ವೇರಿಯೆಂಟ್‍ಗಳ ಆಯ್ಕೆ ಮಾಡುತ್ತಿದ್ದಾರೆ. ಇಂದಿನ ಬಿಡುಗಡೆಯಿಂದ ನಾವು ವಿಶ್ವದಾದ್ಯಂತ ಸಾಹಸ ಟೂರಿಂಗ್ ಅನ್ನು ಮತ್ತಷ್ಟು ಉತ್ತೇಜಿಸುವ ವಿಶ್ವಾಸ ಹೊಂದಿದ್ದೇವೆ ಎಂದು ದಿ ಹಿಮಾಲಯನ್ ಪ್ರಯಾಣ ಕುರಿತು ರಾಯಲ್ ಎನ್‍ಫೀಲ್ಡ್‍ನ ಸಿಇಒ ವಿನೋದ್ ಕೆ. ದಾಸರಿ ಹೇಳಿದರು.