240 KM ಮೈಲೇಜ್; ಭಾರತದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ರೋಡ್ ಟೆಸ್ಟ್ ಆರಂಭ!

First Published Feb 5, 2021, 3:01 PM IST

ಟ್ಯಾಕ್ಸಿ ಸೇವೆಯಲ್ಲಿ ಅಗ್ರನಾಜನಾಗಿರುವ ಒಲಾ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೀಗ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟಿಂಗ್ ಆರಂಭಗೊಂಡಿದೆ. ಶೀಘ್ರದಲ್ಲೇ ನೂತನ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಲಾ ಸ್ಕೂಟರ್ ಬೆಲೆ, ಮೈಲೇಜ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಒಲಾ ಎಲೆಕ್ಟ್ರಿಕ್ ಕಳೆದ ವರ್ಷ ಡಚ್ ಮೂಲದ ಎಟೆರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಪಾಲು ಖರೀದಿಸಿದೆ. ಇದೀಗ ಒಲಾ ಎಲೆಕ್ಟ್ರಿಕ್ ಹಾಗೂ ಎಟೆರ್ಗೋ ಜಂಟಿಯಾಗಿ ಭಾರತದಲ್ಲಿ ಎಲೆಕ್ಟ್ರಿಕ ಸ್ಕೂಟರ್ ಬಿಡುಗಡೆ ಮಾಡುತ್ತಿದೆ
undefined
ಭಾರತದಲ್ಲಿ ರೋಡ್ ಟೆಸ್ಟಿಂಗ್ ಆರಂಭಿಸಿರುವ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸ್ಲೀಕ್ ಬಾಡಿ, ಎಲ್ಇಡಿ ಲೈಟ್ಸ್, ಸಿಂಗಲ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಅಲೋಯ್ ವೀಲ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ.
undefined
ಸಾಮಾನ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ರೇಂಜ್ 100 ರಿಂದ 150 ಕಿ.ಮೀ ಪ್ರತಿ ಸಂಪೂರ್ಣ ಚಾರ್ಜ್‌ಗೆ ನೀಡಲಿದೆ. ಆದರೆ ಒಲಾ ಸ್ಕೂಟರ್ ವಿಶೇಷವಾಗಿದೆ. ಒಂದು ಸಂಪೂರ್ಣ ಚಾರ್ಜ್‌ಗೆ ಒಲಾ ಸ್ಕೂಟರ್ 240 ಕಿ.ಮಿ ಮೈಲೇಜ್ ನೀಡಲಿದೆ.
undefined
ಇಂಧನ ಸ್ಕೂಟರ್‌ಗಳಂತೆ ಉತ್ತಮ ವೇಗವನ್ನು ಒಲಾ ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಳ್ಳಲಿದೆ. 0-45 ಕಿ.ಮಿ ವೇಗವನ್ನು ಕೇವಲ 3.9 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ. ಇನ್ನು ಸ್ಕೂಟರ್ ಗರಿಷ್ಟ ವೇಗೆ 100 ಕಿ.ಮೀ ಪ್ರತಿ ಗಂಟಗೆ.
undefined
ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ಇತರ ಸ್ಕೂಟರ್‌ಗಳಿಗೆ ಬೆಲೆಯಲ್ಲೂ ತೀವ್ರ ಪೈಪೋಟಿ ನೀಡಲಿದೆ
undefined
ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ ಎಲೆಕ್ಟ್ರಿಕ್, ಎದರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್, ಟಿವಿಎಸ್ ಐ ಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಕೆಲ ಸ್ಕೂಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
undefined
ಒಲಾ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಕ್ಕೆ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಘಟಕವನ್ನು ಆರಂಭಿಸುತ್ತಿದೆ. ಬರೋಬ್ಬರಿ 2,400 ಕೋಟಿ ರೂಪಾಯಿ ಹಣ ಹೂಡಿಕೆ ಮಾಡುತ್ತಿದೆ
undefined
ತಮಿಳುನಾಡಿನಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ ರೆಡಿಯಾಗುತ್ತಿದೆ. ಈ ಘಟಕದಿಂದ 10,000 ಉದ್ಯೋಗ ಸೃಷ್ಟಿಯಾಗುತ್ತಿದೆ. ಈ ಮೂಲಕ ಒಲಾ ಎಲೆಕ್ಟ್ರಿಕ್ ವಾಹನದಲ್ಲೂ ಅಗ್ರಜನಾಗುವತ್ತ ಹೆಜ್ಜೆ ಹಾಕಿದೆ.
undefined
click me!