ಭಾರತದಲ್ಲಿ ಡುಕಾಟಿ BS6 ಸ್ಕ್ರಾಂಬ್ಲರ್ ಎಡಿಶನ್ ಬೈಕ್ ಬಿಡುಗಡೆ!

First Published | Jan 23, 2021, 2:33 PM IST

ಡುಕಾಟಿ ಭಾರತದಲ್ಲಿ ತನ್ನ ಬಿಎಸ್6 ಸ್ಕ್ರಾಂಬ್ಲರ್ ಎಡಿಶನ್ ಬೈಕ್‌ಗಳಾದ, ಸ್ಕ್ರಾಂಬ್ಲರ್ ಐಕಾನ್, ಐಕಾನ್ ಡಾರ್ಕ್ ಮತ್ತು ಸ್ಕ್ರಾಂಬ್ಲರ್ 1100 ಡಾರ್ಕ್ ಪ್ರೊ ಬಿಡುಗಡೆ ಮಾಡಲಾಗಿದೆ. ನೂತನ ಬೈಕ್ ಬೆಲೆ ಹಾಗೂ ಇತರ ವಿವಿರ ಇಲ್ಲಿದೆ.
 

ಐಷಾರಾಮಿ ಮೋಟಾರ್‍ಸೈಕಲ್ ಬ್ರಾಂಡ್ ಡುಕಾಟಿ ಭಾರತದಲ್ಲಿ ಹೊಚ್ಚಹೊಸ ಡುಕಾಟಿ ಸ್ಕ್ರಾಂಬ್ಲರ್ಸ್ ಬಿಡುಗಡೆ ಮಾಡಿದೆ. ಭಾರತಕ್ಕೆ MY21 ಸ್ಕ್ರಾಂಬ್ಲರ್ ಶ್ರೇಣಿಯು ಈಗ ಸ್ಕ್ರಾಂಬ್ಲರ್ ಐಕಾನ್, ಐಕಾನ್ ಡಾರ್ಕ್ ಮತ್ತು 1100 ಡಾರ್ಕ್ ಪ್ರೋಟ್ ಹೊಂದಿದ್ದು ಕ್ರಮವಾಗಿ ರೂ.8.49 ಲಕ್ಷಗಳು, ರೂ.7.99 ಲಕ್ಷಗಳು ಮತ್ತು 10.99 ಲಕ್ಷಗಳ ಬೆಲೆ(ಎಕ್ಸ್-ಶೋರೂಂ ಭಾರತದಾದ್ಯಂತ) ಹೊಂದಿದೆ. ಹೊಸ ಸೀರೀಸ್ ಹೆಚ್ಚು ಸಮಕಾಲೀನ, ಅನುಕೂಲಕರ ಮತ್ತು ಸುರಕ್ಷಿತವಾಗಿದ್ದು ಇದನ್ನು ಭಾರತದಲ್ಲಿ ಮತ್ತಷ್ಟು ಉನ್ನತಗೊಳಿಸಲಾಗಿದೆ ಮತ್ತು ಸ್ಕ್ರಾಂಬ್ಲರ್‍ನ `ಲ್ಯಾಂಡ್ ಆಫ್ ಜಾಯ್’ ಪೂರ್ಣಗೊಳಿಸುತ್ತದೆ.
ಡುಕಾಟಿ ಸ್ಕ್ರಾಂಬ್ಲರ್ ಜಾಯ್‍ವೊಲ್ಯೂಷನ್ ಮೂರು ಹೊಸ ಆವೃತ್ತಿಗಳ ಬಿಡುಗಡೆಯೊಂದಿಗೆ ಉನ್ನತಗೊಳಿಸಲಾಗಿದೆ: ಸ್ಕ್ರಾಂಬ್ಲರ್ ಐಕಾನ್ ಸಂಪ್ರದಾಯ ಮತ್ತು ಆವಿಷ್ಕಾರದ ಪರಿಪೂರ್ಣ ಸಂಯೋಜನೆಯಾಗಿರುವ ಸ್ಕ್ರಾಂಬ್ಲರ್ ಐಕಾನ್ ಡಾರ್ಕ್ “800” ಶ್ರೇಣಿಗೆ ಪರಿಪೂರ್ಣ ಹೆಬ್ಬಾಗಿಲಾಗಿ ಪ್ರತಿನಿಧಿಸುತ್ತದೆ ಮತ್ತು ಸ್ಕ್ರಾಂಬ್ಲರ್ 1100ಡಾರ್ಕ್ ಪ್ರೊ ಸೊಗಸಿನ, ಶುದ್ಧ ಮತ್ತು ಸಂಪೂರ್ಣ ಕಸ್ಟಮೈಸ್ ಮಾಡಬಲ್ಲ ಬೈಕ್ ಆಗಿದೆ. ಎಂವೈ21ಗೆ ಡುಕಾಟಿ ಸ್ಕ್ರಾಂಬ್ಲರ್ ಕುಟುಂಬದ ಎಲ್ಲ ಬೈಕ್‍ಗಳೂ ಬಿಎಸ್6 ನಿಯಮಗಳೊಂದಿಗೆ ಅನುಸರಣೆ ಹೊಂದಿವೆ.
Tap to resize

ಸ್ಕ್ರಾಂಬ್ಲರ್ ಐಕಾನ್ ಆಧುನಿಕ ಆದರೆ ಅಧಿಕೃತ ಉತ್ಪನ್ನಗಳನ್ನು ಪರಿಪೂರ್ಣತೆಗಾಗಿ ಸಂಯೋಜಿಸಲಾಗಿದೆ. ಸ್ಕ್ರಾಂಬ್ಲರ್ ಐಕಾನ್ ಮಾದರಿಯು ಹೊಸ ಸೌಂದರ್ಯಪ್ರಜ್ಞೆಯನ್ನು ಹೊಂದಿದೆ ಮತ್ತು ಬಿಎಸ್6 803 ಸಿಸಿ ಏರ್-ಕೂಲ್ಡ್ ಎಲ್-ಟ್ವಿನ್ ಎಂಜಿನ್, ಸ್ಟೀಲ್ ಟಿಯರ್‍ಡ್ರಾಪ್ ಫ್ಯೂಯೆಲ್ ಟ್ಯಾಂಕ್ ಅನ್ನು ಬದಲಾಯಿಸಬಲ್ಲ ಅಲ್ಯುಮಿನಿಯಂ ಸೈಡ್ ಪ್ಯಾನೆಲ್‍ಗಳೊಂದಿಗೆ, ಮೃದುವಾದ ಭಾವನೆಯ ಹೈಡ್ರಾಲಿಕ್ ಕ್ಲಚ್ ಕಂಟ್ರೋಲ್, ಹೊಚ್ಚಹೊಸ ಡಿಆರ್‍ಎಲ್(ಡೇಟೈಮ್ ರನ್ನಿಂಗ್ ಲೈಟ್) ಹೆಡ್‍ಲೈಟ್ ಟ್ರಾಫಿಕ್‍ನಲ್ಲೂ ಬೈಕ್ ಕಾಣುವಂತೆ ಮಾಡುತ್ತದೆ ಮತ್ತು ಎರ್ಗೊನಾಮಿಕ್ ಸ್ವಿಚ್‍ಗೇರ್ ಸುಲಭವಾಗಿ ರೈಡರ್‍ಗೆ ಎಲ್‍ಸಿಡಿ ಇನ್ಸ್‍ಟ್ರುಮೆಂಟ್ ಮೆನು ಬಳಸಲು ಅನುಕೂಲ ನೀಡುತ್ತದೆ.
ಡುಕಾಟಿ ಸ್ಕ್ರಾಂಬ್ಲರ್‍ನ ಅಗಲವಾದ ಹ್ಯಾಂಡಲ್‍ಬಾರ್ಸ್, ಫ್ಲಾಟ್ ಸೀಟ್ ಮತ್ತು ನವೀಕರಿಸಿದ ಸಸ್ಪೆನ್ಷನ್ ಸೆಟಪ್ ಮರ್ಜ್ ಹೆಚ್ಚು ಅನುಕೂಲಕರ ಮತ್ತು ವಿಶ್ರಾಂತ ರೈಡಿಂಗ್ ಸ್ಥಾನ ನೀಡುತ್ತದೆ. ಹೊಸ ಕಾರ್ನರಿಂಗ್ ಎಬಿಎಸ್ ಬ್ರೇಕಿಂಗ್ ಸಮಯದಲ್ಲಿ ಸಕ್ರಿಯ ಸುರಕ್ಷತೆ ಗರಿಷ್ಠಗೊಳಿಸಿ ರೈಡರ್‍ಗಳು ಪೂರ್ಣ ರೈಡಿಂಗ್ ಸಂತೋಷ ಪಡೆಯಲು ನೆರವಾಗುತ್ತದೆ.
ರೈಡರ್‍ಗಳು ಹೊಸ ಮಲ್ಟಿಮೀಡಿಯಾ ಸಿಸ್ಟಂ ಅನ್ನು ಶ್ಲಾಘಿಸುತ್ತಿದ್ದು ಅದು ನಿಮಗೆ ನಿಮ್ಮ ಅಚ್ಚುಮೆಚ್ಚಿನ ಮ್ಯೂಸಿಕ್ ಆಲಿಸುತ್ತಲೇ ರೈಡ್ ಮಾಡಲು, ಒಳ ಬರುವ ಕರೆಗಳಿಗೆ ಉತ್ತರಿಸಲು ಅಥವಾ ಇಂಟರ್‍ಕಾಂನಲ್ಲಿ ಪ್ರಯಾಣಿರೊಂದಿಗೆ ಮಾತನಾಡಲು ಅವಕಾಶ ನೀಡುತ್ತದೆ. ಡುಕಾಟಿ ಸ್ಕ್ರಾಂಬ್ಲರ್ ಐಕಾ ಈಗ `ಡುಕಾಟಿ ರೆಡ್’ ಪೇಂಟ್ ಸ್ಕೀಂನಲ್ಲಿ ಕ್ಲಾಸಿಕ್ “62 ಯೆಲ್ಲೋ” ಬಣ್ಣಗಳಲ್ಲಿ ಕಪ್ಪು ಫ್ರೇಮ್ ಮತ್ತು ಕಪ್ಪು ಸೀಟಯಗಳಲ್ಲಿ ಲಭ್ಯ.ಸ್ಕ್ರಾಂಬ್ಲರ್ ಐಕಾನ್ ಡಾರ್ಕ್ ಮೋಟಾರ್‍ಸೈಕಲ್‍ಗಳ ಈ ಪ್ರತಿಮಾತ್ಮಕ ಕುಟುಂಬವನ್ನು ಪ್ರತಿನಿಧಿಸುತ್ತದೆ: ಎರಡು ಚಕ್ರಗಳು, ಅಗಲ ಹ್ಯಾಂಡಲ್‍ಬಾರ್‍ಗಳು, ಸರಳ ಎಂಜಿನ್ ಮತ್ತು ಸಾಕಷ್ಟು ಮತ್ತು ಹೆಚ್ಚು ವಿನೋದ. ಸ್ಕ್ರಾಂಬ್ಲರ್ ಐಕಾನ್ ಡಾರ್ಕ್ “800” ಶ್ರೇಣಿಗೆ ಪರಿಪೂರ್ಣ ಹೆಬ್ಬಾಗಿಲಾಗಿದೆ, ಅಲ್ಲದೆ ನಿಮ್ಮ ಡುಕಾಟಿ ಸ್ಕ್ರಾಂಬ್ಲರ್ ಅನುಭವದ ವೈಯಕ್ತಿಕ ಆವೃತ್ತಿ ಸೃಷ್ಟಿಸಲು ಸೂಕ್ತವಾದ ಪ್ರಾರಂಭಿಕ ಅಂಶವಾಗುತ್ತದೆ.
ಸ್ಕ್ರಾಂಬ್ಲರ್ ಐಕಾನ್ ಡಾರ್ಕ್ ಈಗ “ಮ್ಯಾಟ್ ಬ್ಲಾಕ್” ಪೇಂಟ್ ಸ್ಕೀಂನಲ್ಲಿ ಕಪ್ಪು ಫ್ರೇಮ್ ಹಾಗೂ ಗ್ರೇ ರಿಮ್‍ನ ಕಪ್ಪು ಸೀಟಿನಲ್ಲಿ ಲಭ್ಯ.ಇದಲ್ಲದೆ, ಡುಕಾಟಿ ಸ್ಕ್ರಾಂಬ್ಲರ್ 1100 ಡಾರ್ಕ್ ಪ್ರೊ “ಲ್ಯಾಂಡ್ ಆಫ್ ಜಾಯ್” ಶ್ರೇಣಿಯ ಪ್ರವೇಶದ ಮಾದರಿಯನ್ನು ಪ್ರತಿನಿಧಿಸುತ್ತದೆ. ಸೊಗಸಾದ, ಶುದ್ಧ ಮತ್ತು ಸಂಪೂರ್ಣ ಕಸ್ಟಮೈಸ್ ಮಾಡಬಲ್ಲ ಬೈಕ್ “ಡಾರ್ಕ್ ಸ್ಟೆಲ್ತ್” ಲಿವರಿಯೊಂದಿಗೆ ಕಪ್ಪು ಬಣ್ಣದ ಟ್ಯಾಬುಲರ್ ಸ್ಟೀಲ್ ಫ್ರೇಮ್ ಮತ್ತು ರಿಯರ್ ಸಬ್ ಫ್ರೇಮ್ ಅನ್ನು ಅಲ್ಯುಮಿನಿಯಂನಲ್ಲಿ ಹೊಂದಿದೆ. 1100 ಡಾರ್ಕ್ ಪ್ರೊ ಈ ಶ್ರೇಣಿಯಲ್ಲಿನ ಇತರೆ ಎರಡು ಮಾದರಿಗಳಂತೆ ಪ್ರತಿಮಾತ್ಮಕ ಮತ್ತು ಮೂಲ ವಿನ್ಯಾಸ ಹೊಂದಿದೆ, ಆದರೆ ಇದರ “ಬಿಗ್ ಬ್ರದರ್ಸ್”ನೊಂದಿಗೆ ಭಿನ್ನವಾಗಿದ್ದು ಮ್ಯಾಟ್ ಬ್ಲಾಕ್ ಬಣ್ಣಗಳೊಂದಿಗೆ ನೈಸರ್ಗಿಕ ಅನೊಡೈಸ್ಡ್ ಅಲ್ಯುಮಿನಿಯಂ ಮತ್ತು ರಿಯರ್ ವ್ಯೂ ಮಿರರ್‍ಗಳನ್ನು ಕ್ಲಾಸಿಕ್ ಸ್ಟೈಲ್‍ನಲ್ಲಿ ಹೊಂದಿದೆ. ಶುದ್ಧತೆ, ಅಗತ್ಯತೆ ಮತ್ತು ಸ್ವಾತಂತ್ರ್ಯದ ಭಾವನೆಯೊಂದಿಗೆ 1100 ಡಾರ್ಕ್ ಪ್ರೊ ಪ್ರತಿ ರಸ್ತೆಯನ್ನೂ ಸವಾರಿಯ ಸ್ಟೈಲ್ ಮತ್ತು ಗುಣದೊಂದಿಗೆ ಆಕ್ರಮಿಸಲು ಸೂಕ್ತ ಬೈಕ್ ಆಗಿದೆ.
ಸ್ಕ್ರಾಂಬ್ಲರ್ 1100 ಡಾರ್ಕ್ ಪ್ರೊ 1,079 ಸಿಸಿ ಎಂಜಿನ್ ಅನ್ನು ಹೊಂದಿದ್ದು ಇದು ಕಡಿಮೆ ರಿವ್‍ನ ಉದಾರ ಟಾರ್ಕ್ ಹೊಂದಿದೆ ಮತ್ತು 15-ಲೀಟರ್ ಟ್ಯಾಂಕ್ ನಿಮಗೆ ಅನುಕೂಲಕರವಾಗಿ ದೂರ ಪ್ರಯಾಣವನ್ನು ಮಾಡಲು ಅವಕಾಶ ನೀಡುತ್ತದೆ. ಎಲೆಕ್ಟ್ರಾನಿಕ್ಸ್ ಅಂಶಗಳ ವಿಷಯದಲ್ಲಿ “ಲ್ಯಾಂಡ್ ಆಫ್ ಜಾಯ್” ಪ್ರವೇಶವು ಡುಕಾಟಿ ಟ್ರಾಕ್ಷನ್ ಕಂಟ್ರೋಲ್(ಡಿಟಿಸಿ) ಈ ಮಾದರಿಗೆಂದೇ ವಿನ್ಯಾಸಗೊಳಿಸಲಾಗಿದೆ ಮತ್ತು ಕಾರ್ನರಿಂಗ್ ಎಬಿಎಸ್ ಇದು ಎಲ್ಲ ಬಗೆಯ ಸುರಕ್ಷತೆಗಳಲ್ಲಿ ಗರಿಷ್ಠ ಸುರಕ್ಷತೆ ಮತ್ತು ಚುರುಕುತನ ನೀಡುತ್ತದೆ. ಇದರೊಂದಿಗೆ ಮೂರು ಸ್ಟಾಂಡರ್ಡ್ ಮೋಡ್‍ಗಳು(ಆಕ್ಟಿವ್, ಜರ್ನಿ ಮತ್ತು ಸಿಟಿ) ಕಡಿಮೆ ಅನುಭವದ ಮೋಟಾರ್‍ಸೈಕ್ಲಿಸ್ಟ್‍ಗಳಿಗೆ ಅವರದೇ ರೈಡಿಂಗ್ ಸ್ಟೈಲ್ ಆಯ್ಕೆ ಮಾಡಿಕೊಂಡು ಎಲೆಕ್ಟ್ರಾನಿಕ್ ಉಪಕರಣಗಳ ಸರಿಯಾದ ಸಮತೋಲನ ಕಂಡುಕೊಳ್ಳಲು ನೆರವಾಗುತ್ತದೆ.
2021ರ ಮಾದರಿಗಳು ಬಲವಾದ ಪ್ರಾರಂಭಿಕ ಅಂಶವಾಗಿದ್ದು ಮೂಲ ಡುಕಾಟಿ ಅಕ್ಸೆಸರಿಗಳನ್ನು ಡುಕಾಟಿ ಸ್ಕ್ರಾಂಬ್ಲರ್‍ನ ಸೃಜನಶೀಲ ಸ್ಫೂರ್ತಿಯೊಂದಿಗೆ ಉನ್ನತೀಕರಿಸಲಾಗಿದ್ದು ಅವು ಡುಕಾಟಿ ಮಳಿಗೆಗಳಲ್ಲಿ ಲಭ್ಯವಿವೆ. ಸ್ಕ್ರಾಂಬ್ಲರ್ ಶ್ರೇಣಿಯು ಹೊಸ ಅಪೇರೆಲ್ ಸರಣಿಯೊಂದಿಗೆ ಬಂದಿದ್ದು ಜಾಕೆಟ್‍ಗಳಿಂದ ಟಿ-ಶರ್ಟ್‍ಗಳವರೆಗೆ ಹೊಂದಿದ್ದು ಹೊಸ ಮೋಟಾರ್‍ಸೈಕಲ್‍ಗಳನ್ನು ಸ್ಟೈಲ್‍ನಿಂದ ಆನಂದಿಸಬಹುದು. ಸ್ಕ್ರಾಂಬ್ಲರ್ ಸರಣಿಯೊಂದಿಗೆ ಡುಕಾಟಿ ಇಂಡಿಯಾ ಈಗಾಗಲೇ ಭಾರತದಲ್ಲಿ ಸ್ಕ್ರಾಂಬ್ಲರ್ 1100 ಪ್ರೊ ಮತ್ತು ಸ್ಕ್ರಾಂಬ್ಲರ್ 1100 ಸ್ಪೋರ್ಟ್ ಪ್ರೊ ಮಾರಾಟ ಮಾಡುತ್ತಿದೆ.
ಪ್ರಸ್ತುತದ ಅಗತ್ಯವನ್ನು ಪರಿಗಣಿಸಿ ಡುಕಾಟಿ ಡುಕಾಟಿ ಕೇರ್ಸ್ ಪ್ರೋಗ್ರಾಮ್ ಅನ್ನು ಕೂಡಾ ಪ್ರಾರಂಭಿಸಿದ್ದು ಗ್ರಾಹಕರಿಗೆ ಮತ್ತೆ ಡೀಲರ್‍ಶಿಪ್‍ಗಳಿಗೆ ಸ್ವಾಗತಿಸುತ್ತದೆ ಮತ್ತು ಕೋವಿಡ್‍ಗೆ ಸಂಬಂಧಿಸಿದ ಎಲ್ಲ ಸುರಕ್ಷತೆಯ ನಿಯಮಗಳ ಅನುಸರಣೆಯನ್ನು ಮುಂದುವರಿಸುತ್ತದೆ. ಹೊಸ ಸ್ಕ್ರಾಂಬ್ಲರ್‍ಗಳಿಗೆ ಬುಕಿಂಗ್‍ಗಳು ಈಗ ಎಲ್ಲ ಡುಕಾಟಿ ಡೀಲರ್‍ಶಿಪ್‍ಗಳಲ್ಲಿ ದೆಹಲಿ-ಎನ್‍ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಕೊಚ್ಚಿ, ಕೊಲ್ಕತಾ ಮತ್ತು ಚೆನ್ನೈಗಳಲ್ಲಿ ಪ್ರಾರಂಭವಾಗಿವೆ ಮತ್ತು ಡೆಲಿವರಿಯನ್ನು ಜನವರಿ 28, 2021ರಿಂದ ಪ್ರಾರಂಭಿಸಲಾಗುತ್ತದೆ.

Latest Videos

click me!