ರಿಲಯನ್ಸ್‌ನಲ್ಲಿ ಇದು ಇಲ್ಲ ಅದು ಇಲ್ಲ ಎಂದು ಯಾರೂ ಹೇಳದ ರೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜಿಯೋ ತನ್ನನ್ನು ತೊಡಗಿಸಿಕೊಂಡಿದೆ. ಜಿಯೋ ಫೋನ್, ಜಿಯೋ ಸಿಮ್ ಕಾರ್ಡ್, ಜಿಯೋ ಆನ್‌ಲೈನ್ ಸ್ಟ್ರೀಮಿಂಗ್, ಜಿಯೋ ಆ್ಯಪ್ ನಂತರ ಈಗ ಜಿಯೋ ಎಲೆಕ್ಟ್ರಿಕ್ ಸ್ಕೂಟರ್.
ಓಲಾ, ಏಥರ್, ಟಿವಿಎಸ್, ಓಕಿನಾವಾ, ಬಜಾಜ್, ಹೋಂಡಾ ನಂತರ ಈಗ ಜಿಯೋ ಕೂಡ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಪ್ರವೇಶಿಸಿದೆ.
ಜಿಯೋ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 110 ಕಿ.ಮೀ ವರೆಗೆ ಹೋಗಬಹುದು ಎನ್ನಲಾಗಿದೆ.
ಜಿಯೋ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು: ಕ್ಲೌಡ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, USB ಚಾರ್ಜಿಂಗ್ ಪೋರ್ಟ್, LED ಡಿಸ್ಪ್ಲೇ ಮತ್ತು ಬ್ಲೂಟೂತ್.
ಜಿಯೋ ಎಲೆಕ್ಟ್ರಿಕ್ ಸ್ಕೂಟರ್ ವೇಗ: ಒಂದು ಚಾರ್ಜ್‌ನಲ್ಲಿ 110 ಕಿ.ಮೀ. ಗರಿಷ್ಠ ವೇಗ ಗಂಟೆಗೆ 80 ಕಿ.ಮೀ.
ಜಿಯೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ: ಜಿಯೋ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ₹80,000 ಇರಬಹುದು ಎನ್ನಲಾಗಿದೆ.