ಬಂದಿದೆ ಕೇವಲ 8 ರೂಪಾಯಿ ಖರ್ಚಿನಲ್ಲಿ 100 ಕಿ.ಮಿ ಪ್ರಯಾಣದ ಸ್ಕೂಟರ್!

First Published | Nov 6, 2024, 2:15 PM IST

ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಇದೀಗ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಈ ಸ್ಕೂಟರ್ ಕೇವಲ 8 ರೂಪಾಯಿ ಖರ್ಚು ಮಾಡಿದರೆ 100 ಕಿ.ಮೀ ಪ್ರಯಾಣ ಮಾಡಲು ಸಾಧ್ಯವಿದೆ.  ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಮೂರು ಬ್ಯಾಟರಿ ಆಯ್ಕೆಗಳು, ಏಳು ಬಣ್ಣಗಳಲ್ಲಿ ಲಭ್ಯ.  ಇದರ ಬೆಲೆ ಏಷ್ಟು?

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನರು ಕಡಿಮೆ ಖರ್ಚಿನ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿದೆ. ಹಬ್ಬಗಳ ಸಂದರ್ಭದಲ್ಲಿ ಕಂಪನಿಗಳು ಭಾರಿ ರಿಯಾಯಿತಿ ನೀಡುತ್ತಿವೆ. ಓಲಾ, ಟಿವಿಎಸ್, ಬಜಾಜ್ ಕಂಪನಿಗಳು ಈಗಾಗಲೇ ಆಫರ್‌ಗಳನ್ನು ನೀಡಿ ಮಾರಾಟ ಹೆಚ್ಚಿಸಿಕೊಂಡಿವೆ. ಈಗ ಫ್ರಾಂಕ್ಲಿನ್ EV ಕೂಡ ಕಡಿಮೆ ಬೆಲೆಯ ಸ್ಕೂಟರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಕೇವಲ 1.5 ಯೂನಿಟ್ ವಿದ್ಯುತ್‌ನಲ್ಲಿ 100 ಕಿ.ಮೀ. ಓಡುವ ಸ್ಕೂಟರ್‌ ಬಿಡುಗಡೆ ಮಾಡಿದೆ. ನಿರ್ವಹಣೆ ವೆಚ್ಚ ಮಾತ್ರವಲ್ಲ, ಇದರ ಬೆಲೆಯೂ ಕಡಿಮೆ ಇದೆ.

ತೆಲಂಗಾಣ ಮೂಲದ ಫ್ರಾಂಕ್ಲಿನ್ EV ಕಂಪನಿಗೆ ದಕ್ಷಿಣ ಭಾರತದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳಿವೆ. ಈ ಕಂಪನಿಯು ವೇಗವಾಗಿ ಬೆಳೆಯುತ್ತಿದೆ. ಫ್ರಾಂಕ್ಲಿನ್ EV ಸ್ಕೂಟರ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯ. ದುಬಾರಿ ಪೆಟ್ರೋಲ್ ಹಾಗೂ ಅತೀ ಹೆಚ್ಚಿನ ನಿರ್ವಹಣೆ ವೆಚ್ಚದಿಂದ ಸ್ಕೂಟರ್, ಬೈಕ್ ಜನರ ಜೇಬು ಸುಡುತ್ತಿದೆ. ಇದರ ನಡುವೆ ಅತೀ ಕಡಿಮೆ ಖರ್ಚಿನಲ್ಲಿ ದೈನಂದಿನ ಚಟುವಟಿಕೆಗೆ ನೆರವಾಗಬಲ್ಲ ಸ್ಕೂಟರ್ ಜನರನ್ನು ಆಕರ್ಷಿಸುತ್ತಿದೆ.

Latest Videos


KORO, NIX-DLX, ಪವರ್-ಪ್ಲಸ್ ಮಾದರಿಗಳು ₹49,999, ₹64,999, ಮತ್ತು ₹74,999 ಬೆಲೆಯಲ್ಲಿ ಲಭ್ಯ. ಎಲ್ಲಾ ಮಾದರಿಗಳು ಒಂದೇ ವಿನ್ಯಾಸ ಮತ್ತು ಬಣ್ಣಗಳಲ್ಲಿ ಬರುತ್ತವೆ. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ. ಓಡುತ್ತದೆ. ಕೇವಲ ₹8 ಖರ್ಚಲ್ಲಿ 100 ಕಿ.ಮೀ. ಪ್ರಯಾಣಿಸಬಹುದು. ಗರಿಷ್ಠ 60 ಕಿ.ಮೀ. ವೇಗ. ಕ್ರೂಸ್ ಕಂಟ್ರೋಲ್ ಇದೆ. ಅಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯ ಹೊಂದಿರುವ ಈ ಸ್ಕೂಟರ್ ಇದೀಗ ಮಾರಾಟದಲ್ಲೂ ಏರಿಕೆ ಕಾಣುತ್ತಿದೆ.

60V32Ah ಬ್ಯಾಟರಿಯ KORO ₹49,999, 60V26Ah ಬ್ಯಾಟರಿಯ NIX-DLX ₹64,999, ಮತ್ತು 65V35Ah ಬ್ಯಾಟರಿಯ ಪವರ್-ಪ್ಲಸ್ ₹74,999 ಬೆಲೆಯಲ್ಲಿ ಲಭ್ಯ. BLDC ಮೋಟಾರ್, ಮೂರು ರೈಡಿಂಗ್ ಮೋಡ್‌ಗಳು, ರಿವರ್ಸ್ ಗೇರ್, ಮತ್ತು ಸೆಕ್ಯುರಿಟಿ ಸೆನ್ಸರ್‌ಗಳಿವೆ. ದುಬಾರಿ ಸ್ಕೂಟರ್‌ಗಳ ನಡುವೆ ಕಡಿಮೆ ಬೆಲೆ, ಕಡಿಮೆ ನಿರ್ವಹಣೆ ಮೂಲಕ ಪ್ರತಿ ದಿನ ಉಪಯೋಗಿಸಬಲ್ಲ ಸ್ಕೂಟರ್ ಇದಾಗಿದೆ. 

ಕಡಿಮೆ ಬೆಲೆ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಬೇಡಿಕೆಗಳು ಹೆಚ್ಚಾಗಿದೆ. ಪ್ರತಿ ದಿನ ಬಳಕೆಗೆ ಜನರು ಇದೀಗ ಇವಿ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಈ ರೀತಿಯ ಕಡಿಮೆ ನಿರ್ವಹಣೆ ವೆಚ್ಚದ ಹಾಗೂ ಕಡಿಮೆ ಬೆಲೆಯ ಇವಿಗೆ ಹೆಚ್ಚು ಬೇಡಿಕೆ. ಇತ್ತ ದೇಶದೆಲ್ಲೆಡೆ ಚಾರ್ಜಿಂಗ್ ಕೇಂದ್ರಗಳ ವ್ಯವಸ್ಥೆಗಳು ಆಗುತ್ತಿದೆ. ಹೀಗಾಗಿ ಇವಿ ಖರೀದಿಸಿದ ಗ್ರಾಹಕನಿಗೆ ಸುಲಭವಾಗಿ ಚಾರ್ಜಿಂಗ್ ಮಾಡಲು ಅನುಕೂಲತೆಗಳನ್ನು ಮಾಡಿಕೊಡಲಾಗುತ್ತಿದೆ. 

click me!