ಗರಿಷ್ಠ ಮೈಲೇಜ್ , ಹೊಸ ತಂತ್ರಜ್ಞಾನ, ಹೊಚ್ಚ ಹೊಸ ಟಿವಿಎಸ್ ರೆಡಿಯಾನ್ ರಿಫ್ರೆಶ್ ಲಾಂಚ್!

First Published | Jun 30, 2022, 5:33 PM IST
  • ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ ತಂತ್ರಜ್ಞಾನ
  • ಯುಎಸ್‌ಬಿ ಚಾರ್ಜರ್ ಸೇರಿ ಹಲವಾರು ಪ್ರಾಯೋಗಿಕ ವೈಶಿಷ್ಟ್ಯ
  • ಇಂಜಿನ್ ಅನ್ನು ಬುದ್ಧಿವಂತಿಕೆಯಿಂದ ಸ್ವಿಚ್ ಆಫ್ ಮಾಡುವ ತಂತ್ರಜ್ಞಾನ

ಮೈಸೂರು(ಜೂ.30) ಹೊಸ ವಿನ್ಯಾಸ, ಹೊಸ ತಂತ್ರಜ್ಞಾನ, ಗರಿಷ್ಠ ಮೈಲೇಜ್ ಮೂಲಕ ಭಾರಿ ಸದ್ದು ಮಾಡಿರುವ ಟಿವಿಎಸ್ ರೇಡಿಯಾನ್ ಇದೀಗ ಅಪ್‌ಡೇಟ್ ಬೈಕ್ ಬಿಡುಗಡೆ ಮಾಡಿದೆ. ಟಿವಿಎಸ್ ರೇಡಿಯಾನ್ ರಿಫ್ರೆಶ್ ಬಿಡುಗಡೆ ಮಾಡಿದೆ.ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಮಲ್ಟಿ ಕಲರ್ ರಿವರ್ಸ್ ಎಲ್‌ಸಿಡಿ ಕ್ಲಸ್ಟರ್ ಹೊಂದಿದೆ ಭಾರತದ ಮೊದಲ 110 ಸಿಸಿ ಬೈಕ್ ಇದಾಗಿದೆ.

ಹೊಸ ಟಿವಿಎಸ್ ರೇಡಿಯನ್ ಸ್ವಯಂ ಮಾಲೀಕತ್ವದ ಟಿವಿಎಸ್ ಇಂಟೆಲಿಗೊ (ಐಎಸ್‌ಜಿ ಮತ್ತು ಐಎಸ್‌ಎಸ್ ವ್ಯವಸ್ಥೆ) ಯನ್ನು ಹೊಂದಿದ್ದು, ಸಾಟಿಯಿಲ್ಲದ ಸವಾರಿ ಅನುಭವ ಮತ್ತು ಉತ್ತಮ ಮೈಲೇಜ್ ಇದು ನೀಡುತ್ತದೆ.ಇದು ವಿಶಿಷ್ಟವಾದ ಪ್ರೀಮಿಯಂ ಕ್ರೋಮ್ ಹೆಡ್‌ಲ್ಯಾಂಪ್, ಕ್ರೋಮ್ ರಿಯರ್ ವ್ಯೂ ಮಿರರ್‌ಗಳು, ಮುಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು ದೃಢವಾದ ತೊಡೆಯ ಪ್ಯಾಡ್ ವಿನ್ಯಾಸಗಳನ್ನು ಒಳಗೊಂಡಿದೆ.  

Latest Videos


ಕ್ಲಾಸ್- ಲೀಡಿಂಗ್ ರಿವರ್ಸ್ ಎಲ್‌ಸಿಡಿ ಕ್ಲಸ್ಟರ್ ರಿಯಲ್- ಟೈಮ್ ಮೈಲೇಜ್ ಇಂಡಿಕೇಟರ್  ವೈಶಿಷ್ಟ್ಯವನ್ನು ಹೊಂದಿದೆ ಮತ್ತು ಇದು ರೈಡಿಂಗ್ ಪರಿಸ್ಥಿತಿಗಳ ಪ್ರಕಾರ ಮೈಲೇಜ್ ಅನ್ನು ನಿಯಂತ್ರಿಸಲು ಬಳಕೆದಾರರನ್ನು ಶಕ್ತಗೊಳಿಸುತ್ತದೆ. ಆರ್‌ಟಿಎಂಐ ಅನ್ನು ಹೊರತುಪಡಿಸಿ, ಗಡಿಯಾರ, ಸೇವಾ ಸೂಚಕ, ಕಡಿಮೆ ಬ್ಯಾಟರಿ ಸೂಚಕ, ಉನ್ನತ ವೇಗ ಮತ್ತು ಸರಾಸರಿ ವೇಗದಂತಹ 17 ಇತರ ಉಪಯುಕ್ತ ವೈಶಿಷ್ಟ್ಯಗಳು ಡಿಜಿಟಲ್ ಕ್ಲಸ್ಟರ್‌ನಲ್ಲಿ ಅಂತರ್ನಿರ್ಮಿತವಾಗಿವೆ.

ಉತ್ಕೃಷ್ಟವಾದ ಸವಾರಿಯ ಅನುಭವ ಮತ್ತು ಮೈಲೇಜ್ ಅನ್ನು ಒದಗಿಸುವ, ಸ್ವಾಮ್ಯದ ಟಿವಿಎಸ್ ಇಂಟೆಲಿಗೊ ತಂತ್ರಜ್ಞಾನವು ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಇತರ ಕಡೆಗಳಲ್ಲಿ ತಾತ್ಕಾಲಿಕ ನಿಲುಗಡೆಗಳಂತಹ ದೀರ್ಘ ನಿಷ್ಕ್ರೀ ಯತೆಯಂಥ ಸಂದರ್ಭದಲ್ಲಿ ಇಂಜಿನ್ ಅನ್ನು ಬುದ್ಧಿವಂತಿಕೆಯಿಂದ ಸ್ವಿಚ್ ಆಫ್ ಮಾಡುತ್ತದೆ. ವಾಹನವು ಸರಳವಾದ ಥ್ರೊಟಲ್ ರೆವ್ ಮೂಲಕ ತಕ್ಷಣವೇ ಹೋಗಲು ಸಿದ್ದವಾಗಿದ್ದು ಅದು ಅನುಕೂಲತೆಯನ್ನು ಹೆಚ್ಚಿಸುತ್ತದೆ. ಈ ನಿಲ್ದಾಣಗಳಲ್ಲಿ ಇಂಧನ ವ್ಯರ್ಥವಾಗುವುದನ್ನು ತಪ್ಪಿಸಲು ಈ ತಂತ್ರಜ್ಞಾನವು ಸಹಾಯ ಮಾಡುತ್ತದೆ.

TVS Radeon duel Tone color Bike launch

ಟಿವಿಎಸ್ ರೇಡಿಯನ್, ಇಡೀ ವರ್ಗದಲ್ಲಿ ಅತಿ ಉದ್ದದ ಆಸನ ಮತ್ತು ಯುಎಸ್‌ಬಿ ಚಾರ್ಜರ್ ಸೇರಿದಂತೆ ಹಲವಾರು ಪ್ರಾಯೋಗಿಕ ವೈಶಿಷ್ಟ್ಯಗಳ ಕಾರಣದಿಂದಾಗಿ ದೂರದ ಸವಾರರಿಗೆ ಉತ್ತಮ ಸೌಕರ್ಯವನ್ನು ಖಾತ್ರಿಗೊಳಿಸುತ್ತದೆ.

टीवीएस रेडियन

ವರ್ಗದಲ್ಲೇ ಮುಂಚೂಣಿ ಮೈಲೇಜ್ ಮತ್ತು ಸವಾರಿ ಅನುಭವಕ್ಕಾಗಿ ತನ್ನದೇ ಸ್ವಾಮ್ಯದ ಟಿವಿಎಸ್ ಇಂಟೆಲಿಗೊ (ಐಎಸ್‌ಜಿ & ಐಎಸ್‌ಎಸ್ ತಂತ್ರಜ್ಞಾನ) ಪ್ರಾಯೋಗಿಕ ಅನುಕೂಲತೆ - ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಮತ್ತು ಸೌಕರ್ಯಕ್ಕಾಗಿ ಇಡೀ ವಿಭಾಗದಲ್ಲೇ ಅತ್ಯಂತ ಉದ್ದವಾದ ಆಸನ ಹೊಂದಿದೆ

click me!