ಎಲೆಕ್ಟ್ರಿಕ್ ಸ್ಕೂಟರ್ ಘಟಕದಲ್ಲಿ ರೊಬೊಟಿಕ್ಸ್ , ಆಟೋಮೇಷನ್ ಸಲ್ಯೂಶನ್ ಅಳವಡಿಸಿದ ಒಲಾ!

First Published Feb 12, 2021, 8:13 PM IST

ವಿಶ್ವದ ಅತೀ ದೊಡ್ಡ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಮುಂದಿನ ತಿಂಗಳು ಕಾರ್ಯರಂಭಗೊಳ್ಳಲಿದೆ. ಇದೀಗ ಒಲಾ ಹಾಗೂ ಎಬಿಬಿ ಸಹಯೋಗದೊಂದಿದೆ ರೊಬೊಟಿಕ್ಸ್ ಹಾಗೂ ಆಟೋಮೇಷನ್ ಸಲ್ಯೂಶನ್ ಅಳವಡಿಸಿದೆ. ಈ ಕುರಿತ ವಿವರ ಇಲ್ಲಿದೆ. 

ಒಲಾ, ಜಗತ್ತಿನ ಮುಂಚೂಣಿಯಲ್ಲಿ ಟ್ಯಾಕ್ಸಿ ಸೇವೆ ಸಂಸ್ಥೆಯಾಗಿದೆ. ಇದೀಗ ABBಯನ್ನು ತನ್ನ ಪ್ರಮುಖ ಪಾಲುದಾರರಾಗಿ ಮಾಡಿಕೊಂಡಿರುವ ಒಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಘಟಕದಲ್ಲಿ ರೊಬೊಟಿಕ್ಸ್ ಮತ್ತು ಆಟೊಮೇಷನ್ ಸಲ್ಯೂಷನ್ಸ್ ಪರಿಕ್ರಮಗಳನ್ನು ಅಳವಡಿಸುತ್ತಿದೆ. ವಿಶ್ವದ ಬೃಹತ್ ಕಾರ್ಖಾನೆ ಎಂದು ಹೇಳಲಾಗಿರುವ ಒಲಾದ ಈ ಕಾರ್ಖಾನೆಯು ಮುಂದಿನ ತಿಂಗಳಿನಲ್ಲಿ ಕಾರ್ಯನಿರ್ವಹಿಸಲಿದೆ.
undefined
ಎಬಿಬಿ ಆಟೊಮೇಷನ್ ಸಲ್ಯೂಷನ್ ಅನ್ನು ಒಲಾ ಕಾರ್ಖಾನೆಯ ಮುಖ್ಯವಾದ ಉತ್ಪಾದನಾ ಹಂತಗಳಲ್ಲಿ ಅಂದರೆ ಪೇಂಟಿಂಗ್, ವೆಲ್ಡಿಂಗ್ ಕ್ಷೇತ್ರದಲ್ಲಿ ಬಳಸಲಿದ್ದು, ಎಬಿಬಿ ರೊಬೊಟ್ಸ್ ಅನ್ನು ಬ್ಯಾಟರಿ ಮತ್ತು ಮೋಟರ್ ಜೋಡಣೆ ಹಂತದಲ್ಲಿ ಬಳಕೆ ಮಾಡಲಾಗುವುದು. ಇವುಗಳಲ್ಲಿ ಎಬಿಬಿಯ `IRB 5500’ ಪೇಂಟ್ ಮತ್ತು `IRB 2600’ ಸಮಗ್ರ ಡ್ರೆಸ್ಸಿಂಗ್ ರೊಬೊಟ್ಸ್ ಅನ್ನು ತನ್ನ ಪೇಂಟಿಂಗ್ ಮತ್ತು ವೆಲ್ಡಿಂಗ್ ಹಂತದಲ್ಲಿ ಬಳಕೆಯಾಗಲಿದೆ. ಐಆರ್‍ಬಿ 6700 ರೊಬೊಟ್ಸ್‍ಗಳನ್ನು ಮೆಟಿರಿಯಲ್ ನಿರ್ವಹಣೆ ಕಾರ್ಯಕ್ಕಾಗಿ ಬ್ಯಾಟರಿ ಮತ್ತು ಮೋಟಾರ್ ಜೋಡಣೆಯ ಕ್ಷೇತ್ರಗಳಲ್ಲಿ ಬಳಕೆಯಾಗಲಿದೆ.
undefined
ಎಬಿಬಿ ರೊಬೊಟ್ಸ್ ಅನ್ನು ಡಿಜಿಟಲ್ ಸ್ವರೂಪದಲ್ಲಿ ಒಲಾದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಬೃಹತ್ ಕಾರ್ಖಾನೆಯಲ್ಲಿ ರೊಬೊಟ್ ಸಾಧನೆ, ಉತ್ಪಾದಕತೆ, ಉತ್ಪನ್ನದ ಗುಣಮಟ್ಟ ಉತ್ತಮಪಡಿಸಲು ಬಳಕೆಯಾಗಲಿದೆ. ಎಬಿಬಿ ರೊಬೊಟ್‍ಗಳು ಮತ್ತು ಆಟೊಮೇಷನ್ ಸಲ್ಯೂಷನ್‍ಗಳ ಬಳಕೆಯು ರಿಮೋಟ್ ಸ್ವರೂಪದಲ್ಲಿ ಡಿಜಿಟಲ್ ಸಂಪರ್ಕ, ನಿರ್ವಹಣೆ ಸಾಧ್ಯವಾಗಲಿದೆ. ಇದು, ಒಲಾದ ಎಐ ಎಂಜಿನ್, ತಂತ್ರಜ್ಞಾನದ ನಿರ್ವಹಣೆ ಮಾಡಲಿದೆ.
undefined
ಒಲಾ ಬೃಹತ್ ಕಾರ್ಖಾನೆಯನ್ನು ಉದ್ಯಮದ 4.0 ಸಿದ್ಧಾಂತ ಆಧರಿಸಿ ನಿರ್ಮಿಸುತ್ತಿದೆ. ತನ್ನದೇ ಆದ ಎಐ ಎಂಜಿನ್ ಮತ್ತು ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿದೆ. ಉತ್ಪಾದನೆಯ ಪ್ರತಿ ಹಂತದಲ್ಲಿಯೂ ನಿರಂತರವಾಗಿ ಕಲಿಕೆಗೆ ಒತ್ತು ನೀಡುತ್ತಿದೆ. ಇದು, ಅಸಾಮಾನ್ಯ ನಿಯಂತ್ರಣ ಒದಗಿಸಲಿದ್ದು, ಆಟೊಮೇಷನ್ ಮತ್ತು ಗುಣಮಟ್ಟಕ್ಕೆ ಮುಖ್ಯವಾಗಿ ಅತ್ಯಾಧುನಿಕ ಐಒಇ ಸಿಸ್ಟಮ್ಸ್ ಮತ್ತು ಸೈಬರ್ ಫಿಸಿಕಲ್ ಅಳವಡಿಸಲು ಒಲಾಗೆ ಪೂರಕವಾಗಿದೆ.
undefined
ಒಲಾದ ಉದ್ದೇಶಿತ ಬೃಹತ್ ಕಾರ್ಖಾನೆಯ ಆಂತರಿಕ ಸಾಮಥ್ರ್ಯ 2 ದಶಲಕ್ಷ ಯೂನಿಟ್ ಆಗಿದ್ದು, ಈ ಮೂಲಕ 10 ಸಾವಿರ ಉದ್ಯೋಗ ಸೃಷ್ಟಿಸಲಾಗುತ್ತದೆ. ಅಲ್ಲದೆ, ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಾದ ಯೂರೋಪ್, ಬ್ರಿಟನ್, ಲ್ಯಾಟಿನ್ ಅಮೆರಿಕ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ನಾದ್ಯಂತ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ.
undefined
ಬೃಹತ್ ಕಾರ್ಖಾನೆಯು ದೇಶದ ಅತ್ಯಾಧುನಿಕ, ಸ್ವಯಂ ನಿರ್ವಹಣೆಯ ಕಾರ್ಖಾನೆಯಾಗಿರಲಿದ್ದು, ಸುಮಾರು 5,000 ರೊಬೊಟ್ಸ್ ಮತ್ತು ಆಟೊಮೇಟೆಡ್ ಆಧರಿತ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಖಾನೆಯು ಉತ್ಪಾದನೆ ಆರಂಭಿಸಿದಾಗ ಬಳಸಿಕೊಳ್ಳಲಿದೆ.
undefined
ರೊಬೊಟಿಕ್ಸ್ ಮತ್ತು ಮೆಷಿನ್ ಆಟೊಮೇಷನ್ ಮತ್ತು ಡಿಜಿಟಲ್ ಸೇವೆಯನ್ನು ಕುರಿತು ಮುಂಚೂಣಿಯಲ್ಲಿ ಇರುವ ಎಬಿಬಿ ಜೊತೆಗೆ ಒಪ್ಪಂದ ಖುಷಿಯಾಗಿದೆ. ರೊಬೊಟಿಕ್ಸ್ ಮತ್ತು ಆಟೊಮೇಷನ್ ಸಲ್ಯೂಷನ್ಸ್ ಅನ್ನು ನಮ್ಮ ಬೃಹತ್ ಸ್ಕೂಟರ್ ಕಾರ್ಖಾನೆಯಲ್ಲಿ ಅಳವಡಿಸಲಾಗುವುದು. ಎಬಿಬಿ ಸಲ್ಯೂಷನ್ಸ್ ಅನ್ನು ಒಲಾದ ತನ್ನದೇ ಎಐ ಎಂಜಿನ್ ಮತ್ತು ತಂತ್ರಜ್ಞಾನದೊಂದಿಗೆ ನಿರ್ವಹಣೆ ಆಗಲಿದೆ. ನಾವು ಈ ಮೂಲಕ ಜಾಗತಿಕ ಪರಿಣತರನ್ನು ನಮ್ಮ ಕಾರ್ಖಾನೆಯನ್ನು ಇನ್ನಷ್ಟು ದೃಢಪಡಿಸಲು ಕರೆತರುತ್ತಿದ್ದೇವೆ. ಇದು, ಮುಂದಿನ ತಿಂಗಳುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಪರಿಚಯಿಸಲು ಅನುಕೂಲವಾಗಲಿದೆ ಎಂದು ಒಲಾ ಸಮೂಹದ ಸಿಇಒ ಮತ್ತು ಅಧ್ಯಕ್ಷ ಭವಿಷ್ ಅಗರವಾಲ್ ಹೇಳಿದರು
undefined
`ಒಲಾ ಎಲೆಕ್ಟ್ರಿಕ್ ಜೊತೆಗೆ ಸಹಯೋಗ ಹೊಂದಲು ಇ.ವಿ. ವಿಷನ್ ಕಾರ್ಯರೂಪಗೊಳಿಸಲು ನೆರವಾಗುವುದು ಹಾಗೂ ಈ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ನೆರವಾಗುವುದು ಹೆಮ್ಮೆ ಎನಿಸುತ್ತದೆ. ಎಬಿಬಿಯ ಸುಸ್ಥಿರ ರೊಬೊಟಿಕ್ ಆಟೊಮೇಷನ್ ಸಲ್ಯೂಷನ್‍ಗಳು ಈ ಚಿಂತನೆಗೆ ಪೂರಕವಾಗಿದ್ದು, ಕಾರ್ಖಾನೆಯ ಪ್ರಗತಿಗೆ ನೆರವಾಗಲಿದೆ. ನಮ್ಮ ಸಮಗ್ರ ಆಟೊಮೇಷನ್ ಪ್ಯಾಕೇಜ್ ಮತ್ತು ಡಿಜಿಟಲ್ ಸಂಪರ್ಕವು ಒಲಾದ ಎ.ಐ ಪರಿಕ್ರಮವು ಭಾರತದಲ್ಲಿ ವಿಶ್ವದರ್ಜೆ ಗುಣಮಟ್ಟದ ಸ್ಕೂಟರ್‍ಗಳನ್ನು ಪರಿಚಯಿಸಲು ಸಹಕಾರ ನೀಡಲಿದೆ. ಆಟೊಮೇಷನ್ ಮತ್ತು ರೊಬೊಟಿಕ್ಸ್ ಸೇವೆ ಹೆಚ್ಚಿಸುವುದು ಕಾರ್ಖಾನೆಯ ಪರಿಸರವನ್ನು ಸುರಕ್ಷಿತವಾಗಿ ಇರಿಸಲಿದ್ದು, ಹೆಚ್ಚು ಉತ್ಪಾದಕತೆಯಾಗಿ ಇರಿಸಲಿದೆ. ಗುಣಮಟ್ಟವನ್ನು ಹೆಚ್ಚಿಸಲಿದ್ದು, ವಿಶ್ವದಲ್ಲಿಯೇ ಉನ್ನತ ತಂತ್ರಜ್ಞಾನದ ಉತ್ಪಾದನೆ, ಸ್ವಾವಲಂಬನೆ ಕುರಿತು ಭಾರತ ಮುಂಚೂಣಿಗೆ ಬರುವುದು ಸಾಧ್ಯವಾಗಲಿದೆ ಎಂದು ಎಬಿಬಿ ಇಂಡಿಯಾ ಮತ್ತು ಸೌತ್ ಏಷಿಯಾದ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಶರ್ಮಾ ಹೇಳಿದರು.
undefined
click me!