ಬಿಡುಗಡೆಯಾಯ್ತು ಓಲಾ ಎಲೆಕ್ಟ್ರಿಕ್ ಬೈಕ್; 74,999 ರೂನಿಂದ ಆರಂಭ, 579 ಕಿ.ಮಿ ಮೈಲೇಜ್!

First Published | Aug 15, 2024, 5:36 PM IST

ಓಲಾ ಎಲೆಕ್ಟ್ರಿಕ್‌ನ ಬಹು ನಿರೀಕ್ಷಿತ ಬೈಕ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಕೇವಲ 74,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಮೈಲೇಜ್ 579 ಕಿ.ಮೀ.

ಓಲಾ ಈಗಾಗಲೇ ಸ್ಕೂಟರ್ ಮೂಲಕ ದೇಶದಲ್ಲಿ ಸಂಚನಲ ಸೃಷ್ಟಿಸಿದೆ. ಓಲಾ ಸ್ಕೂಟರ್ ಭಾರತದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಒಂದಾಗಿದೆ. ಇದೀಗ ಓಲಾ ಎಲೆಕ್ಟ್ರಿಕ್ ಕ್ಷೇತ್ರದದಲ್ಲಿ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ.

ಓಲಾ ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ 74,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ಟಾಪ್ ಮಾಡೆಲ್ ಸ್ಕೂಟರ್ ಮೈಲೇಜ್ 579 ಕಿ.ಮೀ(ಒಂದು ಸಂಪೂರ್ಣ ಚಾರ್ಜ್‌ಗೆ)

Tap to resize

ಓಲಾ ರೋಡ್‌ಸ್ಟರ್, ಒಲಾ ರೋಡ್‌ಸ್ಟರ್ ಎಕ್ಸ್ ಹಾಗೂ ಒಲಾ ರೋಡ್‌ಸ್ಟರ್ ಪ್ರೋ ಅನ್ನೋ ಮೂರು ವೇರಿಯೆಂಟ್‌ಗಳಲ್ಲಿ ಅತ್ಯಾಕರ್ಷಕ ಬೈಕ್ ಲಭ್ಯವಿದೆ.

ರೋಡ್‌ಸ್ಟರ್ ಬೆಲೆ 74,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು ರೋಡ್‌ಸ್ಟರ್ ಎಕ್ಸ್ 1,04,999 ರೂಪಾಯಿ ಹಾಗೂ ಪ್ರೋ ಬೆಲೆ 1,99,999 ರೂಪಾಯಿ(ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ)

ಪ್ರತಿ ವೇರಿಯೆಂಟ್ ವಿವಿಧ ಬ್ಯಾಟರಿ ಪ್ಯಾಕ್‌ಗಳಲ್ಲಿ ಲಭ್ಯವಿದೆ. 2.5ಕೆWh, 3.5 ಕೆWh, 4.5ಕೆWh, 8ಕೆWh ಹಾಗೂ 16ಕೆWh ಬ್ಯಾಟರಿ ಪ್ಯಾಕ್ ಲಭ್ಯವಿದೆ.

ಓಲಾ ರೋಡ್‌ಸ್ಟರ್ ಪ್ರೋ ಅಂದರೆ ಟಾಪ್ ಮಾಡೆಲ್ ಬೈಕ್ ಮೈಲೇಜ್ ಬರೋಬ್ಬರಿ 579 ಕಿ.ಮೀ(IDC ರೇಂಜ್). ಒಂದು ಬಾರಿ ಚಾರ್ಜ್ ಮಾಡಿದರೆ ಪ್ರಯಾಣ ಸುಲಭ.

ರೋಡ್‌ಸ್ಟರ್ ಬೈಕ್ 200 ಕಿ.ಮಿ ಮೈಲೇಜ್ ಹಾಗೂ ಎಕ್ಸ್ 248 ಕಿ.ಮೀ ಮೈಲೇಜ್ ನೀಡಲಿದೆ. ಇದೀಗ ಹೊಸ ಬೈಕ್ ಖರೀದಿಗೆ ಗ್ರಾಹಕರು ಮುಗಿ ಬೀಳತ್ತಿದ್ದಾರೆ.

ಕೃಷ್ಣಗಿರಿಯಲ್ಲಿರುವ ಓಲಾ ಫ್ಯಾಕ್ಟರಿಯಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಿದೆ. ಇದೀಗ ಓಲಾ ಬೈಕ್ ಹೇಗಿದೆ ಅನ್ನೋ ಕುತೂಹಲ ಗ್ರಾಹಕರಲ್ಲಿ ಮನೆ ಮಾಡಿದೆ.

Latest Videos

click me!