ನಿಮ್ಮ ಲುಕ್ ಹೆಚ್ಚಿಸುವ ಅತ್ಯಾಕರ್ಷ ಹೊಸ ಜಾವಾ 42 ಬಾಬರ್ ಬೈಕ್ ಲಾಂಚ್, ಬೆಲೆ ಎಷ್ಟು?

First Published | May 24, 2024, 11:25 PM IST

ಜಾವಾ ಬೈಕ್ ಭಾರತದಲ್ಲಿ ಮತ್ತೆ ಅಬ್ಬರಿಸಲು ಆರಂಭಿಸಿ ವರ್ಷಗಳು ಉರುಳಿದೆ. ಇದೀಗ ಜಾವಾ ತನ್ನ ಬಾಬರ್ ಬೈಕ್‌ನ ಸ್ಪೆಷಲ್ ಎಡಿಶನ್ ಲಾಂಚ್ ಮಾಡಿದೆ. ಜಾವಾ 42 ಬಾಬರ್ ರೆನ್ ಶೀನ್ ಬೈಕ್‌ ನಿಮ್ಮ ಲುಕ್ ಹೆಚ್ಚಿಸುತ್ತದೆ. ಅತ್ಯಾಕರ್ಷಕ ಬೈಕ್ ಬೆಲೆ ಎಷ್ಟು?
 

ಕ್ಲಾಸಿಕ್ ಮೋಟಾರುಸೈಕಲ್ ಮೂಲಕ ಮಿಂಚುತ್ತಿರುವ ಜಾವಾ ಯೆಜ್ಡಿ ಇದೀಗ ಹೊಚ್ಚ ಹೊಸ  ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ ಮಾಡಿದೆ. ರೆಡ್ ಶೀನ್ ಜನಪ್ರಿಯ ಬ್ಲ್ಯಾಕ್ ಮಿರರ್ ಎಡಿಷನ್ ಗೆ ಹೊಸ ಸೇರ್ಪಡೆ ಆಗಿದ್ದು ಇದೀಗ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
 

ಜಾವಾ ಪೆರಾಕ್ ಮತ್ತು ವಿವಿಧ ಜಾವಾ 42 ಬಾಬರ್ ವೇರಿಯಂಟ್ ಬೈಕ್ ಬೆಲೆ(ಎಕ್ಸ್ ಶೋ ರೂಂ)
ಜಾವಾ ಪೆರಾಕ್: ರೂ 2,13,187
ಜಾವಾ 42 ಬಾಬರ್ - ಮೂನ್‌ಸ್ಟೋನ್ ವೈಟ್: ರೂ 2,09,500
ಜಾವಾ 42 ಬಾಬರ್ - ಮಿಸ್ಟಿಕ್ ಕಾಪರ್ ಸ್ಪೋಕ್ ವೀಲ್: ರೂ 2,12,500
ಜಾವಾ 42 ಬಾಬರ್ - ಮಿಸ್ಟಿಕ್ ಕಾಪರ್ ಅಲಾಯ್ ವೀಲ್: ರೂ 2,18,900
ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಸ್ಪೋಕ್ ವೀಲ್: ರೂ 2,15,187
ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಅಲಾಯ್ ವೀಲ್: ರೂ 2,19,950
ಜಾವಾ 42 ಬಾಬರ್ – ಬ್ಲ್ಯಾಕ್ ಮಿರರ್: ರೂ. 2,29,500
ಹೊಸ ಜಾವಾ 42 ಬಾಬರ್ -ರೆಡ್ ಶೀನ್: ರೂ. 2,29,500
 

Latest Videos


ಜಾವಾ 42 ಬಾಬರ್‌ನ ಯಶಸ್ಸಿನ ಬಳಿಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿಯು ಜಾವಾ 42 ರೆಡ್ ಶೀನ್ ಮೂಲಕ ತನ್ನ ಬಾಬರ್ ವೇರಿಯೆಂಟ್‌ನ್ನು ಮತ್ತಷ್ಟು ಆಕರ್ಷಕಗೊಳಿಸಿದೆ.  ಆಕರ್ಷಕವಾದ ಕೆಂಪು ಬಣ್ಣದ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿರುವ ಈ ಹೊಸ ವೇರಿಯಂಟ್ ಬೋಲ್ಡ್ ಆಗಿದೆ ಮತ್ತು ವಿಶಿಷ್ಟ ರೀತಿಯ ರೈಡ್ ಅನ್ನು ಆನಂದಿಸುವ ಕಿರಿಯ ಗ್ರಾಹಕರ ಗಮನವನ್ನು ಸೆಳೆಯಲೆಂದೇ ವಿನ್ಯಾಸ ಮಾಡಲಾಗಿದೆ.
 

ರೆಡ್ ಶೀನ್ ಬೈಕ್ ಅಪೂರ್ವವಾದ ಕ್ರೋಮ್ ಫಿನಿಶ್ ಹೊಂದಿರುವ ಟ್ಯಾಂಕ್ ಮತ್ತು ಡೈಮಂಡ್- ಕಟ್ ಅಲಾಯ್ ವೀಲ್ ಗಳನ್ನು ಹೊಂದಿದೆ. ಜೊತೆಗೆ ಈ ಬೈಕ್ ಅನುಕೂಲಕರವಾದ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಇದರ ಶಕ್ತಿಶಾಲಿ 334 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ 29.9 ಪಿಎಸ್ ಮತ್ತು 30ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 
 

ಮೃದುವಾದ ಮತ್ತು ನಿಖರವಾದ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಈ ಬೈಕ್ ಹೊಂದಿದೆ. ಅಸಿಸ್ಟ್ ಆಂಡ್ ಸ್ಲಿಪ್ ಕ್ಲಚ್, ಏಳು- ಹಂತದ ಪ್ರೀ- ಲೋಡ್ ಅಡ್ಜಸ್ಟೇಬಲ್ ರೇರ್ ಮೊನೊ- ಶಾಕ್, ಎರಡು- ಹಂತದ ಅಡ್ಜಸ್ಟೇಬಲ್ ಸೀಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಕನ್ಸೋಲ್ ಮತ್ತು ಪೂರ್ಣ ಎಲ್ಇಡಿ ಲೈಟಿಂಗ್ ಅನ್ನು ಒದಗಿಸುವ ಮೂಲಕ ರೈಡರ್ ಗಳಿಗೆ ಉತ್ತಮ ಸೌಕರ್ಯವನ್ನು ಒದಗಿಸಲಾಗಿದೆ.
 

ಜಾವಾ 42 ಬಾಬರ್ ಅದ್ಭುತವಾದ ಯಶಸ್ಸನ್ನು ಕಂಡಿದೆ ಮತ್ತು ರೆಡ್ ಶೀನ್‌ ಅನ್ನು ಪರಿಚಯ ಮಾಡುವ ಮೂಲಕ ನಮ್ಮ ಕುಟುಂಬವನ್ನು ವಿಸ್ತರಣೆ ಮಾಡುತ್ತಿದ್ದೇವೆ. ಹೊಸ ತಲೆಮಾರಿನ ಸವಾರರಿಗಾಗಿ ಈ ಬೈಕ್ ಅನ್ನು ವಿನ್ಯಾಸ ಗೊಳಿಸಲಾಗಿದೆ ಎಂದು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಸಿಇಓ ಆಶಿಶ್ ಸಿಂಗ್ ಜೋಶಿ ಹೇಳಿದ್ದಾರೆ.
 

ಆಲ್ ಯು ಕ್ಯಾನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಬಿಡುಗಡೆ ಮಾಡುವುದರ ಮೂಲಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಸ್ವಯಂ ಅಭಿವ್ಯಕ್ತಿ ಮತ್ತು ರೈಡ್ ಮೇಲಿನ ಪ್ರೀತಿಯನ್ನು ಆಚರಿಸುವ ಸಂಸ್ಕೃತಿಯನ್ನು ಪೋಷಣೆ ಮಾಡುವ ಬದ್ಧತೆಯು ಸಾಕಾರಗೊಂಡಿದೆ ಆಶಿಶ್ ಹೇಳಿದ್ದಾರೆ.

ಜಾವಾ 42 ಬಾಬರ್ ಜೊತೆಗೆ ಇತ್ತೀಚೆಗೆ ಪರಿಷ್ಕರಣೆ ಮಾಡಿದ ಜಾವಾ ಪೆರಾಕ್ ಮೂಲಕ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಪ್ರಸ್ತುತ 'ಫ್ಯಾಕ್ಟರಿ ಕಸ್ಟಮ್' ಪೋರ್ಟ್ ಪೋಲಿಯೋವನ್ನು ಒದಗಿಸುತ್ತಿದೆ. ಅವುಗಳೊಂದಿಗೆ ಜಾವಾ 350, ಜಾವಾ 42, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಅನ್ನು ಒಳಗೊಂಡಿರುವ ಆಕರ್ಷಕ ಉತ್ಪನ್ನ ಶ್ರೇಣಿಯನ್ನು ಕಂಪನಿಯು ಗ್ರಾಹಕರಿಗೆ ಒದಗಿಸುತ್ತಿದೆ.
 

click me!