ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಪೈಕಿ ಬುಲೆಟ್ ಸುದೀರ್ಘ ಇತಿಹಾಸ ಹೊಂದಿದೆ. 1932ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಬುಲೆಟ್ ಇದೀಗ 650 ಬೈಕ್ ಹೊಸ ಅವತಾರದಲ್ಲಿ ಲಾಂಚ್ ಆಗಿದೆ. ಇದರ ಬೆಲೆ, ಲಭ್ಯವಿರುವ ಬಣ್ಣ ಸೇರಿದಂತೆ ಸಂಪೂರ್ಣ ಡಿಟೇಲ್ ಇಲ್ಲಿದೆ.
ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರತದಲ್ಲಿ ಭಾರಿ ಬೇಡಿಕೆ. ಪ್ರತಿಸ್ಪರ್ಧಿಯಾಗಿ ಹಲವು ಬೈಕ್‌ಗಳು ಮಾರುಕಟ್ಟೆಯಲ್ಲಿದ್ದರೂ ರಾಯಲ್ ಎನ್‌ಫೀಲ್ಡ್ ಈಗಲೂ ಅದೇ ಮಾರುಕಟ್ಟೆ ಉಳಿಸಿಕೊಂಡಿದೆ. ಇದೀಗ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ 650 ಬೈಕ್ ಬಿಡುಗಡೆಯಾಗಿದೆ. 1932ರಲ್ಲಿ ಮೊದಲಿಗೆ ಪರಿಚಯಿಸಲಾದ ಬುಲೆಟ್ ಬಳಿಕ ಹಲವು ಅವತಾರಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದೀಗ ಅತ್ಯಂತ ಆಕರ್ಷಕ ಬುಲೆಟ್ ಬೈಕ್ ಮಾರುಕಟ್ಟೆಗೆ ಬಂದಿದೆ.
26
ಬುಲೆಟ್ 650 ಬೈಕ್ ಬೆಲೆ
ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಎರಡು ಆಕರ್ಷಕ ಬಣ್ಣಗಳಾದ ಕ್ಯಾನನ್ ಬ್ಲಾಕ್ ಮತ್ತು ಬ್ಯಾಟಲ್ ಶಿಪ್ ಬ್ಲೂಗಳಲ್ಲಿ ಲಭ್ಯವಿದೆ. ಇದರ ಬೆಲೆ 3,64,856 (ಎಕ್ಸ್-ಶೋರೂಂ)ಗೆ ಲಭ್ಯವಿದೆ. ಸತತ ಉತ್ಪಾದನೆ ಹೊಂದಿರುವ ವಿಶ್ವದ ಅತ್ಯಂತ ದೀರ್ಘಕಾಲ ಚಾಲನೆಯಲ್ಲಿರುವ ಇದು ಪ್ರಸ್ತುತ ತನ್ನ ಸದೃಢ ಪ್ರಯಾಣದ 94ನೇ ವರ್ಷದಲ್ಲಿದ್ದು ಮೋಟಾರ್ ಸೈಕ್ಲಿಂಗ್ ವಿಶ್ವದಲ್ಲಿ ತಲೆಮಾರುಗಳ ಕಾಲ ವಿಶೇಷ ಸ್ಥಾನ ಪಡೆದುಕೊಂಡಿದೆ. ಇದರ ದೋಷರಹಿತ ಸಿಲ್ಹೌಟ್, ದಿಟ್ಟ ನಿಲುವು ಮತ್ತು ಐಕಾನಿಕ್ ಥಂಪ್ ನಿಂದ ವಿಶ್ವಾಸಾರ್ಹ ಮೋಟಾರ್ ಸೈಕ್ಲಿಂಗ್ ಗೆ ಶಾರ್ಟ್ ಹ್ಯಾಂಡ್ ಎನಿಸಿದೆ.
36
650 ಸಿಸಿ ಎಂಜಿನ್ ಪವರ್
ಬುಲೆಟ್ ಇಲ್ಲಿಯವರೆಗಿನ ಅತ್ಯಂತ ಶಕ್ತಿಯುತ ಅಭಿವ್ಯಕ್ತಿಯಾಗಿದೆ: ಸದೃಢ ಹಾಗೂ ಹಿಂದೆಂದಿಗಿಂತ ಹೆಚ್ಚು ಪ್ರಭಾವಿಯಾಗಿದ್ದು ತನ್ನ ಪ್ರತಿಮಾತ್ಮಕ ಗುಣಕ್ಕೆ ಬದ್ಧವಾಗಿದೆ. ತನ್ನ ಹೊಸ 650ಸಿಸಿ ಅವತಾರದಲ್ಲಿ ಬುಲೆಟ್ ದೋಷರಹಿತ ಬ್ರಿಟಿಷ್ ಪರಂಪರೆ ಮತ್ತು ಭಾರತೀಯ ಮಣ್ಣಿನ ಅದಮ್ಯತೆಗೆ ಗೌರವ ಸಲ್ಲಿಸುತ್ತಿದ್ದು ಬುಲೆಟ್ ನಿಷ್ಠಾವಂತರಿಗೆ ಈಗ ಬ್ರಾಂಡ್ ನ ದೀರ್ಘಕಾಲದ ಪರಂಪರೆಯನ್ನು ಸಂಭ್ರಮಿಸಲು ಹೊಸ ಕಾರಣ ನೀಡುತ್ತದೆ.
ಭಾರತದಲ್ಲಿ ಮೊಟೊವರ್ಸ್ ನಲ್ಲಿ ಪ್ರದರ್ಶನಗೊಳ್ಳುವ ಮುನ್ನ ಮೊದಲಿಗೆ ಇಐಸಿಎಂಎ 2025ರಲ್ಲಿ ಬಿಡುಗಡೆಯಾದ ಬುಲೆಟ್ 650 ವಿಶ್ವದಾದ್ಯಂತ ರೈಡರ್ ಗಳಲ್ಲಿ ಬಹಳ ಬೇಗನೆ ಉತ್ಸಾಹ ಹೆಚ್ಚಿಸಿತು. ಭಾರತದಲ್ಲಿ ತನ್ನ ಅಧಿಕೃತ ಬಿಡುಗಡೆಯೊಂದಿಗೆ ರಾಯಲ್ ಎನ್ಫೀಲ್ಡ್ ಈಗ ಬುಲೆಟ್ ನಿಷ್ಠಾವಂತರಿಗೆ ಸದೃಢ ಮತ್ತು ಖ್ಯಾತ ಮೋಟಾರ್ ಸೈಕಲ್ ಬ್ರಾಂಡ್ ಅನ್ನು ಸಂಭ್ರಮಿಸಲು ಮತ್ತೊಂದು ಕಾರಣ ತಂದಿದೆ.
56
ಪ್ಯಾರಲಲ್ ಟ್ವಿನ್ ಎಂಜಿನ್
ಒಂಬತ್ತು ದಶಕಗಳಿಗೂ ಮೀರಿ ಬುಲೆಟ್ ವಿಶ್ವಾಸಾರ್ಹತೆ, ಸದೃಢತೆ ಮತ್ತು ದೋಷರಹಿತ ಲಕ್ಷಣದ ಸಂಕೇತವಾಗಿ ನಿಂತಿದ್ದು ಶುದ್ಧ ಮೋಟಾರ್ ಸೈಕ್ಲಿಂಗ್ ನ ರಾಯಲ್ ಎನ್ಫೀಲ್ಡ್ ತತ್ವವನ್ನು ವ್ಯಾಖ್ಯಾನಿಸಿದೆ. ಹೊಚ್ಚಹೊಸ ಬುಲೆಟ್ 650 ಮೂಲಕ ನಮ್ಮ ವಿಧಾನವು ಬುಲೆಟ್ ಅನ್ನು ಮರು ವ್ಯಾಖ್ಯಾನಿಸುವುದಲ್ಲ. ಈ ಐಕಾನ್ ವಿಕಾಸಗೊಳ್ಳುವುದರೊಂದಿಗೆ ನಾವು ಅದರ ವಿಶ್ವಾಸಾರ್ಹ ಗುಣ ಮತ್ತು ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿದ್ದು ನಮ್ಮ 650ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ನ ಕಾರ್ಯಕ್ಷಮತೆ ಮತ್ತು ಪರಿಷ್ಕರಣೆಯನ್ನು ಆಲೋಚನಾಯುಕ್ತವಾಗಿ ಏಕೀಕರಿಸಿದ್ದೇವೆ ಎಂದು ರಾಯಲ್ ಎನ್ಫೀಲ್ಡ್ ಸಿಇಒ ಬಿ ಗೋವಿಂದರಾಜನ್ ಹೇಳಿದ್ದಾರೆ.
66
125ನೇ ವರ್ಷದ ಸಂಭ್ರಮ
6-ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಟ್ವಿನ್-ಸಿಲಿಂಡರ್ ಪ್ಲಾಟ್ ಫಾರಂ ವಿರಾಮದ ಚಾಲನೆ ಮತ್ತು ಸ್ಫೂರ್ತಿಯುತ ರೈಡಿಂಗ್ ಎರಡಕ್ಕೂ ಮೃದುವಾದ ಶಕ್ತಿ ಮತ್ತು ಪ್ರಯತ್ನರಹಿತ ಆಕ್ಸಲರೇಷನ್ ನೀಡುತ್ತದೆ.125ನೇ ವರ್ಷದ ಸಂಭ್ರಮದಲ್ಲಿರುವ ರಾಯಲ್ ಎನ್‌ಫೀಲ್ಡ್ ಮಾರಾಟದಲ್ಲೂ ಭಾರಿ ಏರಿಕೆ ನಿರೀಕ್ಷೆಯಲ್ಲಿದೆ.