ದೀಪಾವಳಿ ಹಬ್ಬಕ್ಕೆ ಹೀರೋ ಬಂಪರ್ ಆಫರ್, ಡಿಸ್ಕೌಂಟ್ ಜೊತೆಗೆ ಗಿಫ್ಟ್ ಸ್ಕೀಮ್ !

Published : Oct 19, 2023, 05:22 PM IST

ದೀಪಾವಳಿ ಹಬ್ಬಕ್ಕೆ ಹೀರೋ ಮೋಟೋಕಾರ್ಪ್ ಗಿಫ್ಟ್ ಸ್ಕೀಮ್ ಘೋಷಿಸಿದೆ. ಈ ಯೋಜನೆ ಮೂಲಕ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರು ಭರ್ಜರಿ ಡಿಸ್ಕೌಂಟ್ ಪಡೆಯಲಿದ್ದಾರೆ. ಇದು ಸೀಮಿತ ಅವಧಿಯ ಆಫರ್ ಆಗಿದೆ.  

PREV
17
ದೀಪಾವಳಿ ಹಬ್ಬಕ್ಕೆ ಹೀರೋ ಬಂಪರ್ ಆಫರ್, ಡಿಸ್ಕೌಂಟ್ ಜೊತೆಗೆ ಗಿಫ್ಟ್ ಸ್ಕೀಮ್ !

ಹಬ್ಬದ ಸೀಸನ್ ಹೊಸ ಕಳೆ ತಂದಿದೆ. ದಸರಾ ಹಬ್ಬದ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬದ ಸಂಭ್ರಮ, ಸಡಗರ ಆಗಮಿಸುತ್ತಿದೆ. ಇತ್ತ ಹೀರೋ ಮೋಟೋಕಾರ್ಪ್ ಭರ್ಜರಿ ಹೀರೋ ಗಿಫ್ಟ್ ಸ್ಕೀಮ್ ಘೋಷಿಸಿದೆ. 

27

ಕ್ಯಾಶ್ ಬೋನಸ್ 5,500 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 3,000 ರೂಪಾಯಿ ಸೇರಿದಂತೆ ಹಲವು ಡಿಸ್ಕೌಂಟ್ ಆಫರ್ ಹೀರೋ ಘೋಷಿಸಿದೆ. ಕೆಲ ಆಯ್ಕೆ ಬೈಕ್ ಹಾಗೂ ಸ್ಕೂಟರ್ ಮೇಲೆ ಈ ಆಫರ್ ಅನ್ವಯವಾಗಲಿದೆ.
 

37

ಶೇಕಡಾ 6.99ರ ಬಡ್ಡಿದರಲ್ಲಿ ಸುಲಭ ಸಾಲ ಸೌಲಭ್ಯ, ಅತೀ ಕಡಿಮೆ ಡೌನ್‌ಪೇಮೆಂಟ್, ಆಧಾರ್ ಕಾರ್ಡ್ ಆಧಾರಿತ ಲೋನ್, ಶೂನ್ಯ ಹೈಪೋಥಿಕೇಶನ್ ಫೀ, ಕಡಿಮೆ ಹಾಗೂ ಸುಲಭ ಇಎಂಐ ಸೌಲಭ್ಯ ಘೋಷಿಸಿದೆ.

47

ಹೀರೋ ಗಿಫ್ಟ್ ಸ್ಕೀಮ್ ಅಡಿಯಲ್ಲಿ ಸ್ಕೂಟರ್ ಅಥವಾ ಬೈಕ್ ಖರೀದಿಸುವ ಗ್ರಾಹಕರಿಗೆ ಹಲವು ಬಂಪರ್ ಕೊಡುಗೆಗಳನ್ನು ಪಡೆಯಲಿದ್ದಾರೆ. ಈ ಮೂಲಕ ಹೀರೋ ಗ್ರಾಹಕರನ್ನು ಆಕರ್ಷಿಸುತ್ತಿದೆ.

57

ದೀಪಾವಳಿ ಹಬ್ಬಕ್ಕೆ ಹೀರೋ ಮೋಟೋಕಾರ್ಪ್ ಹೀರೋ ಡಿಲಕ್ಸ್, ಹೀರೋ ಸ್ಪ್ಲೆಂಡರ್ ಎಕ್ಸ್‌ಟೆಕ್, ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್, ಪ್ಯಾಶನ್ ಪ್ಲಸ್ ಸೇರಿದಂತೆ ಕೆಲ ಟ್ರಿಮ್ ಮಾಡೆಲ್ ಕೂಡ ಬಿಡುಗಡೆ ಮಾಡುತ್ತಿದೆ.

67

ಗ್ರಾಹಕರು ಹೀರೋ ಮೇಲಿಟ್ಟಿರುವ ನಂಬಿಕೆಗೆ ನಾವು ಗೀಫ್ಟ್ ಆಫರ್ ನೀಡುತ್ತಿದ್ದೇವೆ. ಭಾರತದಲ್ಲಿ ಹೀರೋ ಮನೆಮಾತಾಗಿರುವ ಬ್ರ್ಯಾಂಡ್ ಆಗಿದೆ. ಕೋಟಿ ಕೋಟಿ ಗ್ರಾಹಕರನ್ನು ಪಡೆದಿರುವ ಹೀರೋ ಇದೀಗ ಗ್ರಾಹಕರ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತದೆ ಎಂದು ಹೀರೋ ಬ್ಯೂಸಿನೆಸ್ ಮುಖ್ಯಸ್ಥ ರಂಜಿವಿತ್ ಸಿಂಗ್ ಹೇಳಿದ್ದಾರೆ.

77

ಗೀಫ್ಟ್ ಸ್ಕೀಂ ಮೂಲಕ ಹೀರೋ ಹಲವು ದ್ವಿಚಕ್ರವಾಹನಗಳನ್ನ ಆಫರ್ ಬೆಲೆಯಲ್ಲಿ ನೀಡಲಾಗುತ್ತದೆ. ಇದರ ಜೊತೆಗೆ ಗ್ರಾಹಕರು ಹಲವು ವಾರೆಂಟಿ, ಸರ್ವೀಸ್ ಸೇರಿದಂತೆ ಇತರ ಪ್ರಯೋಜನ ಪಡೆಯಲಿದ್ದಾರೆ ಎಂದು ರಂಜಿವಿತ್ ಸಿಂಗ್ ಹೇಳಿದ್ದಾರೆ.
 

Read more Photos on
click me!

Recommended Stories