ಮೇಡ್ ಇನ್ ಇಂಡಿಯಾ ಹಾರ್ಲೆ ಡೇವಿಡನ್ಸ್ X440ಗೆ ಭಾರಿ ಬೇಡಿಕೆ, 1,000 ಬೈಕ್ ಮಾರಾಟ!

Published : Oct 18, 2023, 04:27 PM IST

ಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹೀರೋ ಮೊಟೊಕಾರ್ಪ್ ಅಕ್ಟೋಬರ್ 15 ರಿಂದ ದೇಶದಾದ್ಯಂತ ಹಾರ್ಲೆ-ಡೇವಿಡ್ಸನ್ X440 ವಿತರಣೆಯನ್ನು ಪ್ರಾರಂಭಿಸಿದೆ. 100 ಡೀಲರ್‌ಶಿಪ್‌ಗಲ್ಲಿ 1,000 ಬೈಕ್ ಮಾರಾಟಗೊಂಡಿದೆ.   

PREV
17
ಮೇಡ್ ಇನ್ ಇಂಡಿಯಾ ಹಾರ್ಲೆ ಡೇವಿಡನ್ಸ್ X440ಗೆ ಭಾರಿ ಬೇಡಿಕೆ, 1,000 ಬೈಕ್ ಮಾರಾಟ!

ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಔಟ್‌ಲೆಟ್‌ಗಳು ಸೇರಿದಂತೆ 100 ಡೀಲರ್‌ಶಿಪ್‌ಗಳಲ್ಲಿ ಹಾರ್ಲೆ-ಡೇವಿಡ್ಸನ್ X440 ಬೈಕ್ ದಾಖಲೆ ಬರೆದಿದೆ.ಇದೀಗ 100 ಡೀಲರ್‌ಶಿಪ್‌ಗಳಲ್ಲಿ 1,000 ಹಾರ್ಲೆ ಬೈಕ್ ಮಾರಾಟಗೊಂಡಿದೆ. 

27

ಜುಲೈ 2023 ರಲ್ಲಿ ಬಿಡುಗಡೆಯಾದಾಗಿನಿಂದಲೂ ಹಾರ್ಲೆ-ಡೇವಿಡ್ಸನ್ X440, ಭಾರತದಾದ್ಯಂತ ಪ್ರೀಮಿಯಂ ವಿಭಾಗದ ಗ್ರಾಹಕರನ್ನು ಆಕರ್ಷಿಸಿದ್ದು ಅದರ ಪ್ರದರ್ಶನದ ಕೇವಲ ಒಂದು ತಿಂಗಳೊಳಗೆ 25,000+ ಬುಕಿಂಗ್‌ಗಳನ್ನು ಪಡೆದುಕೊಂಡಿದೆ.  

37

ಹಾರ್ಲೆ-ಡೇವಿಡ್ಸನ್ X440, ಉತ್ತರ ಭಾರತದ ರಾಜಸ್ಥಾನದ ನೀಮ್ರಾನಾ ದಲ್ಲಿರುವ ಹೀರೋ ಮೋಟೋಕಾರ್ಪ್‌ನ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತದೆ - ಇದನ್ನು ಗಾರ್ಡನ್ ಫ್ಯಾಕ್ಟರಿ ಎಂದು ಕರೆಯಲಾಗುತ್ತದೆ.

47

ಹೊಸ ಗ್ರಾಹಕರು ಈಗ ಹಾರ್ಲೆ-ಡೇವಿಡ್ಸನ್ X440 ಟೆಸ್ಟ್ ರೈಡ್ ಮಾಡಲು ಅವಕಾಶ ನೀಡಿದೆ. ಎಲ್ಲ ಹಾರ್ಲೆ-ಡೇವಿಡ್ಸನ್ ಡೀಲರ್‌ಶಿಪ್‌ಗಳಲ್ಲಿ ವಾಹನವನ್ನು ಬುಕ್ ಮಾಡಬಹುದು 

57

ಮೋಟಾರ್‌ಸೈಕಲ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ - ಡೆನಿಮ್, ವಿವಿಡ್ ಮತ್ತು ಎಸ್. ಇವುಗಳ ಬೆಲೆಗಳು(ಎಕ್ಸ್ ಶೋ ರೂಂ) ಕ್ರಮವಾಗಿ: 2,39,500/- ರೂಗಳು (ಡೆನಿಮ್) , INR 2,59,500/- ರೂಗಳು (ವಿವಿಡ್) ಮತ್ತು INR 2,79,500/- ರೂಗಳು (S).

67

ನಾವು ಹಬ್ಬದ ಋತುವಿನ ಮೊದಲ ದಿನ ಡೆಲಿವರಿ ಪ್ರಾರಂಭಿಸಿದಾಗ ನಮ್ಮ ಗ್ರಾಹಕರ ಮುಖದಲ್ಲಿನ ಆನಂದ ಮತ್ತು ಉತ್ಸಾಹಗಳನ್ನು ಕಂಡು ಬಹಳ ಸಂತೋಷಪಟ್ಟಿದ್ದೇವೆ. ಮುಂದಿನ 4-5 ತಿಂಗಳುಗಳಲ್ಲಿ ಎಲ್ಲಾ ಡೆಲಿವರಿಗಳನ್ನೂ ಪೂರೈಸಬೇಕೆಂಬ ಪ್ರಯತ್ನ ನಮ್ಮದು. ನಮ್ಮ ಪೂರೈಕೆ ಸರಪಳಿ ಈಗಾಗಲೇ ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿದೆ. ಏಕೆಂದರೆ, ಹಾರ್ಲೆ ಡೇವಿಡ್‌ಸನ್ ಪಡೆಯಲು ಬಯಸುವ ಗ್ರಾಹಕರು ಹೆಚ್ಚು ಕಾಯಬಾರದು ಎಂಬುದೇ ನಮ್ಮ ಇಚ್ಛೆ ಎಂದು ಹೀರೋ ಮೋಟೋಕಾರ್ಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿರಂಜನ್ ಗುಪ್ತಾ ಹೇಳಿದ್ದಾರೆ.

77

ಹಾರ್ಲೆ-ಡೇವಿಡ್‌ಸನ್ ಮೋಟಾರ್‌ಸೈಕಲ್‌ಗಳು ತರುವ ರೋಮಾಂಚನ ಶ್ರೇಣಿ II ನಗರಗಳು ಮತ್ತು ಸಣ್ಣ ಪಟ್ಟಣಗಳು ಸೇರಿದಂತೆ ದೇಶದಾದ್ಯಂತ ಮೋಟಾರಿಂಗ್ ಉತ್ಸಾಹಿಗಳಿಗೆ ದೊರೆಯಬೇಕೆಂಬ ತವಕ ನಮ್ಮದು. ಈ ಗಮನಾರ್ಹ ಸಾಧನೆಯನ್ನು ಸಾಧಿಸುವಲ್ಲಿ ಸಂಪೂರ್ಣ ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ-ಡೇವಿಡ್ಸನ್ ಕುಟುಂಬದ ಅಚಲವಾದ ಸಮರ್ಪಣಾ ಭಾವ ಮತ್ತು ದಣಿವರಿಯದ ಪ್ರಯತ್ನಗಳನ್ನು ಪ್ರಶಂಸಿಸಲೇಬೇಕು ಎಂದಿದ್ದಾರೆ

Read more Photos on
click me!

Recommended Stories