30 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ಹೋಂಡಾ WN7 ಬೈಕ್: ಏನಿದರ ವಿಶೇಷ? ಇಲ್ಲಿದೆ ಸಂಪೂರ್ಣ ಮಾಹಿತಿ

Published : Mar 25, 2026, 10:21 PM IST

ಪ್ರಸಿದ್ಧ ಹೋಂಡಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ WN7, 'ಗೋಲ್ಡ್ iF ಡಿಸೈನ್' ಪ್ರಶಸ್ತಿಯನ್ನು ಗೆದ್ದಿದೆ. ಇದರ ವಿಶಿಷ್ಟ ವಿನ್ಯಾಸದಲ್ಲಿ ಬ್ಯಾಟರಿಯೇ ಫ್ರೇಮ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ ರೇಂಜ್ ನೀಡುತ್ತದೆ. 

PREV
16
ಹೋಂಡಾದ WN7 ಬೈಕ್

ಪ್ರಸಿದ್ಧ ಆಟೋಮೊಬೈಲ್ ಕಂಪನಿ ಹೋಂಡಾದ ಹೊಸ ಎಲೆಕ್ಟ್ರಿಕಲ್ ಬೈಕ್ WN7 ಪ್ರಸ್ತುತ ಭಾರೀ ಚರ್ಚೆಯಲ್ಲಿದೆ. ಈ ಬೈಕ್ ಪ್ರತಿಷ್ಠಿತ 'ಗೋಲ್ಡ್ iF ಡಿಸೈನ್' ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆದರೆ, ಇದು ಕೇವಲ ಪ್ರಶಸ್ತಿಗಾಗಿ ಮಾತ್ರವಲ್ಲ, ತನ್ನ ವಿಶಿಷ್ಟ ವಿನ್ಯಾಸ ಮತ್ತು ಕಾರ್ಯಕ್ಷಮತೆಯಿಂದಲೂ ವಿಶೇಷವಾಗಿ ಗುರುತಿಸಿಕೊಂಡಿದೆ. ಹೋಂಡಾ WN7 ಬೈಕ್‌ ವಿನ್ಯಾಸ ಇತರ ಬೈಕ್‌ಗಳಿಗಿಂತ ಭಿನ್ನವಾಗಿದ್ದು, ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಸಿಂಗಲ್ ಚಾರ್ಜ್‌ನಲ್ಲಿ 140 ಕಿಲೋಮೀಟರ್‌ವರೆಗೆ ರೇಂಜ್ ನೀಡುತ್ತದೆ. ದಿನನಿತ್ಯದ ಬಳಕೆ ಹಾಗೂ ಹೈ-ಸ್ಪೀಡ್ ಇಷ್ಟಪಡುವವರಿಗೆ ಇದು ಸೂಕ್ತವಾಗಿದೆ. ಭವಿಷ್ಯದ ಎಲೆಕ್ಟ್ರಿಕ್ ಬೈಕ್‌ಗಳು ಹೇಗಿರಲಿವೆ ಎಂಬುದಕ್ಕೆ ಇದು ಒಂದು ಝಲಕ್ ನೀಡುತ್ತದೆ. ಹೋಂಡಾ WN7 ನ ಫೀಚರ್‌ಗಳ ವಿವರ ಇಲ್ಲಿದೆ.

26
ಬೈಕ್‌ನ ಆಕರ್ಷಕ ವಿನ್ಯಾಸ

ಹೆಚ್ಚಿನ ಎಲೆಕ್ಟ್ರಿಕ್ ಬೈಕ್‌ಗಳು ಒಂದೋ ವಿಚಿತ್ರವಾಗಿ ಕಾಣುತ್ತವೆ ಅಥವಾ ಪೆಟ್ರೋಲ್ ಬೈಕ್‌ಗಳ ನಕಲಿ ವಿನ್ಯಾಸದಂತೆ ಇರುತ್ತವೆ. ಆದರೆ, ಈ ಬೈಕಿನ ವಿಷಯದಲ್ಲಿ ಹಾಗಲ್ಲ. ಹೋಂಡಾ ಈ ಬೈಕ್ ಅನ್ನು ಅತ್ಯಂತ ಸರಳ ಮತ್ತು ಆಕರ್ಷಕವಾಗಿ ರೂಪಿಸಿದೆ. ಯಾವುದೇ ವಿಚಿತ್ರ ವಿನ್ಯಾಸ ಅಥವಾ ಅನಗತ್ಯ ಅಬ್ಬರವಿಲ್ಲದೆ ಆಧುನಿಕ 'ಓಪನ್ ಸ್ಪೋರ್ಟ್' ಮಾದರಿಯಲ್ಲಿದೆ. ಇದು ಹೋಂಡಾದ ಪ್ರಸಿದ್ಧ 'ಸಿಬಿ (CB)' ಸರಣಿಯಂತೆಯೇ ಕಾಣಲಿದ್ದು, ಚಾಲನೆಗೆ ತುಂಬಾ ಆರಾಮದಾಯಕವಾಗಿದೆ.

36
ಬೈಕ್‌ಗೆ ಇಲ್ಲ ಹೆವಿ ಫ್ರೇಮ್‌

ಈ ಬೈಕಿನ ದೊಡ್ಡ ವಿಶೇಷತೆಯೆಂದರೆ ಇದರಲ್ಲಿ ಪ್ರತ್ಯೇಕವಾದ ಹೆವಿ ಫ್ರೇಮ್ ಇಲ್ಲ. ಬೈಕಿನ ಬ್ಯಾಟರಿಯನ್ನು ಬಚ್ಚಿಡುವ ಬದಲಿಗೆ, ಅದನ್ನು ಮಧ್ಯಭಾಗದಲ್ಲಿ ಮುಖ್ಯ ಅಂಗವಾಗಿ ಬಳಸಲಾಗಿದೆ. ಬ್ಯಾಟರಿಯೇ ಬೈಕಿನ ಫ್ರೇಮ್‌ನಂತೆ ಕೆಲಸ ಮಾಡುವುದರಿಂದ ಬೈಕಿನ ತೂಕ ಕಡಿಮೆಯಾಗಿದ್ದು, ನೋಡಲು ಅತ್ಯಂತ ಅಚ್ಚುಕಟ್ಟಾಗಿ ಕಾಣುತ್ತದೆ.

46
ಬೈಕ್‌ನ ಕಾರ್ಯಕ್ಷಮತೆ

ಹೋಂಡಾದ ಈ ಎಲೆಕ್ಟ್ರಿಕ್ ಬೈಕ್ ವಿನ್ಯಾಸದಲ್ಲಿ ಮಾತ್ರವಲ್ಲದೆ ಪರ್ಫಾರ್ಮೆನ್ಸ್‌ನಲ್ಲೂ ಅದ್ಭುತವಾಗಿದೆ. ಈ ಬೈಕ್ ಸುಮಾರು 67 ಹಾರ್ಸ್‌ಪವರ್ ಮತ್ತು 100 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಪಿಕಪ್ ಅದ್ಭುತವಾಗಿದ್ದು, ಅತ್ಯಂತ ವೇಗವಾಗಿ ಚಲಿಸಬಲ್ಲದು. ನಗರ ಪ್ರದೇಶದ ದೈನಂದಿನ ಬಳಕೆ ಹಾಗೂ ವಾರಾಂತ್ಯದ ಲಾಂಗ್ ಡ್ರೈವ್ ಇಷ್ಟಪಡುವ ವೇಗದ ಪ್ರೇಮಿಗಳಿಗೆ ಇದು ಹೇಳಿಮಾಡಿಸಿದಂತಿದೆ.

56
ರೇಂಜ್ ಮತ್ತು ಚಾರ್ಜಿಂಗ್

ಈ ಎಲೆಕ್ಟ್ರಿಕ್ ಬೈಕ್‌ನಲ್ಲಿ 9.3 kWh ಲೀಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದೆ. ರೇಂಜ್ ಬಗ್ಗೆ ಹೇಳುವುದಾದರೆ, ಒಮ್ಮೆ ಫುಲ್ ಚಾರ್ಜ್ ಮಾಡಿದರೆ ನಗರ ಪ್ರದೇಶದಲ್ಲಿ ಸುಮಾರು 130 ರಿಂದ 140 ಕಿಲೋಮೀಟರ್ ಚಲಿಸಬಹುದು. ಅಲ್ಲದೆ, ಈ ಬೈಕ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಫಾಸ್ಟ್ ಚಾರ್ಜರ್ ಸಹಾಯದಿಂದ ಕೇವಲ 30 ನಿಮಿಷಗಳಲ್ಲಿ ಶೇ. 20 ರಿಂದ ಶೇ. 80 ರವರೆಗೆ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

66
ಬೆಲೆ ಎಷ್ಟು? (Price)

ಈ ಬೈಕಿನ ಬೆಲೆಯ ಬಗ್ಗೆ ನೋಡುವುದಾದರೆ, ಇದು ಸುಮಾರು 17,000 ಅಮೆರಿಕನ್ ಡಾಲರ್ ಹೊಂದಿದೆ (ಭಾರತೀಯ ರೂಪಾಯಿಗಳಲ್ಲಿ ಅಂದಾಜು 15 ಲಕ್ಷ ರೂಪಾಯಿಗಿಂತಲೂ ಅಧಿಕ). ಯುರೋಪಿನ ಕೆಲವು ಭಾಗಗಳಲ್ಲಿ ಇದರ ಮಾರಾಟ ಈಗಾಗಲೇ ಆರಂಭವಾಗಿದೆ. ಇದರ ಬೆಲೆ ಸ್ವಲ್ಪ ಹೆಚ್ಚೆನಿಸಿದರೂ, ಭವಿಷ್ಯದ ಎಲೆಕ್ಟ್ರಿಕ್ ಬೈಕ್‌ಗಳ ವಿನ್ಯಾಸ ಮತ್ತು ತಂತ್ರಜ್ಞಾನಕ್ಕೆ ಹೋಂಡಾದ ಈ ಬೈಕ್ ದಾರಿದೀಪವಾಗಿದೆ.

Read more Photos on
click me!

Recommended Stories