ಬರೋಬ್ಬರಿ 60 ಕಿ.ಮೀ ಮೈಲೇಜ್, ಬರುತ್ತಿದೆ ಹೊಸ ಹೊಂಡಾ ಆ್ಯಕ್ಟಿವಾ 7ಜಿ ಸ್ಕೂಟರ್!

First Published Oct 15, 2024, 6:20 PM IST

ಬರೋಬ್ಬರಿ 60 ಕಿ.ಮಿ ಮೈಲೇಜ್. ಸ್ಕೂಟರ್ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲು ಹೊಂಡಾ ಸಜ್ಜಾಗಿದೆ. ಇದೀಗ ಹೊಂಡಾ ಆ್ಯಕ್ಟೀವಾ 7ಜಿ ಸ್ಕೂಟರ್ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಅತ್ಯಾಧುನಿಕ ಫೀಚರ್ ಜೊತೆಗೆ 1 ಲೀಟರ್ ಪೆಟ್ರೋಲ್‌ಗೆ 60 ಕಿ.ಮಿ ಮೈಲೇಜ್ ನೀಡಲಿದೆ. ಇದರ ಬೆಲೆ, ಇತರ ಕುತೂಹಲ ಮಾಹಿತಿ ಇಲ್ಲಿದೆ. 

ಹೋಂಡಾ ಆಕ್ಟಿವಾ 7G

ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.  ಇದೀಗ ಹೊಂಡಾ ಆಕ್ಟಿವಾ 7G ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ.  ಹೊಸ ಸ್ಕೂಟರ್ ಹಲವು ವಿಶೇಷತೆ ಹೊಂದಿದೆ. ಆಧುನಿಕ ತಂತ್ರಜ್ಞಾನ ಇದರಲ್ಲಿದೆ. ಎಲ್ಲಕ್ಕಿಂತ ಮಖ್ಯವಾಗಿ ಇದರ ಮೈಲೇಜ್ ಎಲ್ಲರ ಹುಬ್ಬೇರಿಸಿದೆ.

ಹೋಂಡಾ ಸ್ಕೂಟರ್

ಯುವಕರು ಸಹ ಸ್ಕೂಟರ್‌ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.. ಸ್ಕೂಟರ್ ವಿಭಾಗದಲ್ಲಿ ಹೋಂಡಾ ತನ್ನದೇ ಆದ ಛಾಪು ಮೂಡಿಸಿದೆ. ಹೋಂಡಾ ಆಕ್ಟಿವಾ ಸ್ಕೂಟರ್‌ನ ಜನಪ್ರಿಯತೆಯೇ ಇದಕ್ಕೆ ಸಾಕ್ಷಿ. ಈ ಸಾಲಿನಲ್ಲಿ ಹೋಂಡಾದಿಂದ ಆಕ್ಟಿವಾ 7G ಮಾರುಕಟ್ಟೆಗೆ ಬರುತ್ತಿದೆ. 7G ಸುಧಾರಿತ ತಂತ್ರಜ್ಞಾನದ ಸ್ಕೂಟರ್ ಆಗಿದೆ.  ಇದರ ಭಾಗವಾಗಿ ಡಿಜಿಟಲ್ ಸ್ಕ್ರೀನ್, ಮೊಬೈಲ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಚಾರ್ಜರ್ ಫೀಚರ್ ಇದರಲ್ಲಿದೆ.

Latest Videos


ಆಕ್ಟಿವಾ 7G ವೈಶಿಷ್ಟ್ಯಗಳು

ಈ ಸ್ಕೂಟರ್‌ನಲ್ಲಿ ಎಲ್‌ಇಡಿ ಲೈಟ್‌ಗಳನ್ನು ಪರಿಚಯಿಸಲಾಗುತ್ತಿದೆ. ಕಾರುಗಳಲ್ಲಿರುವ ಪುಶ್ ಬಟನ್ ಸ್ಟಾರ್ಟ್  ಫೀಚರ್ ಈ ಸ್ಕೂಟರ್‌ನಲ್ಲಿರಲಿದೆ. ಇದಲ್ಲದೆ, ಈ ಸ್ಕೂಟರ್‌ನಲ್ಲಿ ಸೈಲೆಂಟ್ ಸ್ಟಾರ್ಟ್‌ನಂತಹ ಸುಧಾರಿತ ವೈಶಿಷ್ಟ್ಯವನ್ನು ಒದಗಿಸುವ ಸಾಧ್ಯತೆಯಿದೆ. ಈ ಸ್ಕೂಟರ್ ಅಲಾಯ್ ವೀಲ್‌ ಹೊಂದಿದೆ. ಮೈಲೇಜ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಸ್ಕೂಟರ್ ಲೀಟರ್‌ಗೆ 55 ರಿಂದ 60 ಕಿಮೀ ಮೈಲೇಜ್ ನೀಡಲಿದೆ ಎಂದು ವರದಿಯಾಗಿದೆ.

ನೂತನ ಸ್ಕೂಟರ್  ಬೆಲೆ 80 ರಿಂದ 90 ಸಾವಿರದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಕೂಟಿಯ ಕುರಿತು ಕಂಪನಿಯು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ಈ ಸ್ಕೂಟರ್ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ಆಕ್ಟಿವಾ 7G ಸ್ಕೂಟರ್ ಅನ್ನು 1 ಲೀಟರ್ ಪೆಟ್ರೋಲ್‌ನಲ್ಲಿ 55 ರಿಂದ 60 ಕಿಮೀ ವರೆಗೆ ಸುಲಭವಾಗಿ ಚಲಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸ್ಕೂಟರ್‌ನಲ್ಲಿ ಗ್ರಾಹಕರು ಡಿಜಿಟಲ್ ಸ್ಕ್ರೀನ್, ಮೊಬೈಲ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಚಾರ್ಜರ್ ಪಡೆಯುವ ಸಾಧ್ಯತೆಯಿದೆ.

ಹೊಸ ವಿನ್ಯಾಸ, ಹೊಸತನ, ಹೊಸ ತಂತ್ರಜ್ಞಾನಗಳಿಂದ ಆ್ಯಕ್ಟೀವಾ 7ಜಿ ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಆ್ಯಕ್ಚೀವಾ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಸ್ಕೂಟರ್ ವಿಭಾಗದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಆ್ಯಕ್ಟೀವಾ ಇದೀಗ ಮೈಲೇಜ್ ವಿಚಾರದಲ್ಲೂ ದಾಖಲೆ ಬರೆಯಲಿದೆ.  ಮುಂದಿನ ವರ್ಷ ಈ ಸ್ಕೂಟರ್ ಬಿಡುಗಡೆಯಾಗಲಿದೆ.

click me!