ಹಬ್ಬದ ಡಿಸ್ಕೌಂಟ್ ಆಫರ್, TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 30,000 ರೂ ರಿಯಾಯಿತಿ!

First Published | Oct 11, 2024, 1:14 PM IST

ಹಬ್ಬದ ಸಂಭ್ರಮ ಡಬಲ್ ಮಾಡಲು ಟಿವಿಎಸ್ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 30,000 ರೂಪಾಯಿ ರಿಯಾಯಿತಿ ಆಫರ್ ನೀಡಿದೆ. ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಅತ್ಯಾಕರ್ಷಕ ಟಿವಿಎಸ್ ಆಫರ್ ಇಲ್ಲಿದೆ.

ದಸರಾ, ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಬ್ಬದ ವೇಳೆ ವಾಹನ ಖರೀದಿಗೆ ಸೂಕ್ತ ಸಮಯ. ಹಲವು ಕಂಪನಿಗಳು ಈಗಾಗಲೇ ಡಿಸ್ಕೌಂಟ್ ಆಫರ್ ನೀಡಿದೆ. ಇದೀಗ ಟಿವಿಎಸ್ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 30,000 ರೂಪಾಯಿ ರಿಯಾಯಿತಿ ನೀಡಿದೆ. ಈ ನಿಯಮಿತ ಅವಧಿಯ ಆಫರ್ ಅಕ್ಟೋಬರ್ 31ರ ವರೆಗೆ ಲಭ್ಯವಿದೆ. ಇದರಿಂದ ಜನಪ್ರಿಯ ಟಿವಿಎಸ್ ಐಕ್ಯೂಬ್ ಸ್ಕೂಟರ್ 89,999 ರೂಪಾಯಿಗೆ ಲಭ್ಯವಾಗುತ್ತಿದೆ.

ಟಿವಿಎಸ್ ಐಕ್ಯೂಬ್ ಎಸ್ ವೇರಿಯೆಂಟ್ ಖರೀದಿಸುವ ಕೇರಳ, ತಮಿಳುನಾಡು, ಪುದುಚೇರಿ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಒರಿಸ್ಸಾ ಮತ್ತು ಮಹಾರಾಷ್ಟ್ರದ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ  5,999 ರೂಪಾಯಿ ಮೌಲ್ಯದ 5 ವರ್ಷ /70000 ಕಿಮೀಗಳ ವಿಸ್ತೃತ ವಾರಂಟಿ ಲಭ್ಯವಿದೆ.

Tap to resize

ಜೊತೆಗೆ ಆಕರ್ಷಕ ಕ್ಯಾಶ್ ಬ್ಯಾಕ್ ಆಫರ್ ಗಳು ಲಭ್ಯವಿದ್ದು, ಆಯ್ದ ರಾಜ್ಯಗಳ ಗ್ರಾಹಕರು ಟಿವಿಎಸ್ ಐಕ್ಯೂಬ್ 2.2 ಕೆಡಬ್ಲ್ಯೂಎಚ್ ವೇರಿಯೆಂಟ್ ಮೇಲೆ ₹17,300 ವರೆಗಿನ ಕ್ಯಾಶ್ ಬ್ಯಾಕ್ ಮತ್ತು 3.4 ಕೆಡಬ್ಲ್ಯೂಎಚ್ ವೇರಿಯೆಂಟ್ ಮೇಲೆ ₹20,000 ವರೆಗಿನ ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. ಜುಲೈ 15, 2022ರ ಮೊದಲು ಟಿವಿಎಸ್ ಐಕ್ಯೂಬ್ ಎಸ್ ಟಿ ವೇರಿಯೆಂಟ್ ಅನ್ನು ಮುಂಗಡವಾಗಿ ಬುಕ್ ಮಾಡಿದ ಗ್ರಾಹಕರು, 5.1 ಕೆಡಬ್ಲ್ಯೂಎಚ್ ಅಥವಾ 3.4 ಕೆಡಬ್ಲ್ಯೂಎಚ್ ಎಸ್ ಟಿ ವೇರಿಯೆಂಟ್ ಅನ್ನು ಖರೀದಿಸುವಾಗ ₹10,000 ಲಾಯಲ್ಟಿ ಬೋನಸ್ ಪ್ರಯೋಜನ ಪಡೆಯಬಹುದು.

ಇವೆಲ್ಲದರ ಜೊತೆಗೆ ಆಯ್ದ ಬ್ಯಾಂಕ್ ಕಾರ್ಡ್ ಗಳ ಮೇಲೆ ₹10,000 ವರೆಗಿನ ಕ್ಯಾಶ್ಬ್ಯಾಕ್ ಲಭ್ಯವಿದೆ. ಜೊತೆಗೆ ರಿಟೇಲ್ ಫೈನಾನ್ಸ್ ಆಫರ್ ಗಳು ದೊರೆಯುತ್ತದೆ. ₹2,399 ರಿಂದ ಪ್ರಾರಂಭವಾಗುವ ಸುಲಭ ಇಎಂಐ ಸೌಲಭ್ಯ, ₹7,999ರಷ್ಟು ಕಡಿಮೆ ಡೌನ್ ಪೇಮೆಂಟ್ ಮಾಡಬಹುದಾದ ಸೌಲಭ್ಯ ಕೂಡ ಲಭ್ಯವಿದೆ. ಈ ಎಲ್ಲಾ ಆಫರ್ ಗಳು ಸೇರಿ ಈ ಹಬ್ಬದ ಸೀಸನ್ ನಲ್ಲಿ ಟಿವಿಎಸ್ ಐಕ್ಯೂಬ್ ಅನ್ನು ತಮ್ಮದಾಗಿಸಿಕೊಳ್ಳುವ ಗ್ರಾಹಕರ ಆಸೆ ಪೂರೈಸಲಿದೆ. 

ಟಿವಿಎಸ್ ಐಕ್ಯೂಬ್ ಒಂದು ಬಾರಿ ಚಾರ್ಜ್ ಮಾಡಿದರೆ 100 ರಿಂದ 150 ಕಿ.ಮೀ ಮೈಲೇಜ್ ನೀಡಲಿದೆ. ಗರಿಷ್ಠ ವೇಗ 82 ರಿಂದ 86 ಕಿ.ಮಿ ಪ್ರತಿ ಗಂಟೆಗೆ ನೀಡಲಿದೆ. ಮನೆಯ 650W ಚಾರ್ಚಿಂಗ್ ಸಾಕೆಟ್ ಮೂಲಕ ಸ್ಕೂಟರ್ ಚಾರ್ಜ್ ಮಾಡಿದರೆ ಟಿವಿಎಸ್ ಐಕ್ಯೂಬ್ ಶೇಕಡಾ 80 ರಷ್ಟು ಚಾರ್ಜ್ ಆಗಲು 4 ಗಂಟೆ 30 ನಿಮಿಷ ಸಮಯ ತೆಗೆದುಕೊಳ್ಳಲಿದೆ.

Latest Videos

click me!