ಕೇವಲ 73 ಸಾವಿರ ರೂ, ಹೀರೋ ಹೆಎಫ್ ಡಿಲಕ್ಸ್ ಪ್ರೋ ಬೈಕ್ ಬಿಡುಗಡೆ

Published : Jul 24, 2025, 03:21 PM IST

ಹೀರೋ ಇದೀಗ ಹೊಚ್ಚ ಹೊಸ ಹೀರೋ ಹೆಎಫ್ ಡಿಲಕ್ಸ್ ಪ್ರೋ ಬೈಕ್ ಬಿಡುಗಡೆ ಮಾಡಿದೆ. ಕೈಗೆಟೆಕುವ ದರ ಜೊತೆಗೆ ಹೈಟೆಕ್ ಬೈಕ್ ಇದಾಗಿದೆ. ಈ ಬೈಕ್ ವಿಶೇಷತೆ ಏನು?

PREV
16

ಹೀರೋ ಮೋಟೋಕಾರ್ಪ್ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹಲವು ಕ್ರಾಂತಿ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ಮೈಲೇಜ್, ಅತ್ಯುತ್ತಮ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಬೈಕ್ ನೀಡುತ್ತಾ ಬಂದಿದೆ. ಹೀಗಾಗಿ ಹೀರೋ ಡಿಲಕ್ಸ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹೀರೋ ಇದೀಗ ಹೆಎಫ್ ಡಿಲಕ್ಸ್ ಪ್ರೋ ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ 73,550 ರೂಪಾಯಿ (ಎಕ್ಸ್ ಶೋ ರೂಂ).

26

ಆಕರ್ಷಕ ವಿನ್ಯಾಸ ಹಾಗೂ ಅತ್ಯುತ್ಕೃಷ್ಟ ಇಂಧನ ಸಾಮರ್ಥ್ಯದೊಂದಿಗೆ ಹೊಸ HF Deluxe Pro ಮೋಟಾರುಸೈಕಲ್ ಮಾರುಕ್ಟಟೆ ಪ್ರವೇಶಿಸಿದೆ. i3S (Idle Stop-Start System), ಕಡಿಮೆ-ಘರ್ಷಣೆಯ ಇಂಜಿನ್, ವಿಶೇಷವಾಗಿ ಇಂಜಿನಿಯರ್ ಮಾಡಲಾಗಿರುವ ಟೈರ್ಗಳು ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳ ಶಕ್ತಿ ಹೊಂದಿರುವ ಅದು ವರ್ಗದಲ್ಲೇ ಅತ್ಯುತ್ತಮವಾದ ಮೈಲೇಜ್ ಒದಗಿಸುತ್ತದೆ. ಅನಾಯಾಸ ದಿನನಿತ್ಯದ ರೈಡ್‌ಗಳು ಮತ್ತು ಸರಿಸಾಟಿಯಿಲ್ಲದ ಮೌಲ್ಯಕ್ಕಾಗಿಯೇ HF Deluxe Pro ನಿರ್ಮಾಣ ಮಾಡಲಾಗಿದೆ.

36

ದಿಟ್ಟವಾದ ಹೊಸ ವಿನ್ಯಾಸ

HF Deluxe Pro, ತನ್ನ ಒಟ್ಟಾರೆ ಸಿಲ್ಹೂಟ್‌ಗೆ ಕ್ರಿಯಾಶೀಲತೆ ಮತ್ತು ಸಹಜಶಕ್ತಿಯನ್ನು ಸೇರಿಸವ ಹೊಸ ಬಾಡಿ ಗ್ರಾಫಿಕ್ಸ್‌ನೊಂದಿಗೆ ಒಂದು ದಿಟ್ಟವಾದ ಹೊಸ ನೋಟ ಹೊಂದಿದೆ. ಇದು ಕಿರೀಟ-ಆಕಾರದ ಅಧಕ ತೀವ್ರತೆಯ ಪೊಸಿಶನ್ ಲ್ಯಾಂಪ್ ಇರುವ ವರ್ಗ-ಪ್ರಪ್ರಥಮ LED ಹೆಡ್‌ಲ್ಯಾಂಪ್ ಹೊಂದಿ ಗೋಚರತೆ ಮತ್ತು ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ. ಮೊನಚಾದ ಮತ್ತು ಚುರುಕಾದ ಗ್ರಾಫಿಕ್ಸ್ ತತ್ಕಾಲೀನ ಸೌಂದರ್ಯ ಒದಗಿಸಿದರೆ, ಕ್ರೋಮ್ ಆಕ್ಸೆಂಟ್ಸ್ ಅದರ ಪ್ರೀಮಿಯಮ್ ಭಾವವನ್ನು ಹೆಚ್ಚಿಸಿ, HF Deluxe Pro ಗೆ ಆತ್ಮವಿಶ್ವಾಸದ, ಆಧುನಿಕ ಹಾಗೂ ಪ್ರತ್ಯೇಕ ಆಕರ್ಷಣೆ ಒದಗಿಸುತ್ತದೆ.

46

ಹೊರೈಜನ್ ಡಿಜಿಟಲ್ ಕನ್ಸೋಲ್(Horizon Digital Console )

ಅತ್ಯಾಧುನಿಕ ಡಿಜಿಟಲ್ ಸ್ಪೀಡೋಮೀಟರ್, HF Deluxe Proಗೆ ಆಧುನಿಕತೆಯ ಸ್ಪರ್ಶ ನೀಡಿ, ಸ್ಪಷ್ಟತೆ ಮತ್ತು ನಿಖರತೆಯೊಂದಿಗೆ ವಾಸ್ತವ-ಸಮಯ ರೈಡಿಂಗ್ ಡೇಟಾ ಒದಗಿಸುತ್ತದೆ. ಲೋ ಫ್ಯುಯೆಲ್ ಇಂಡಿಕಟರ್ (LFI)ನೊಂದಿಗೆ ಸಂಯೋಜಿತಗೊಂಡಿರುವ ಅದು ಸವಾರರು ಇಂಧನ ನಿಲುಗಡೆಗಳನ್ನು ಸಮರ್ಥವಾಗಿ ಯೋಜಿಸಲು ನೆರವಾಗುವ ಮೂಲಕ ಪ್ರತಿದಿನದ ವಾಸ್ತವತೆಯನ್ನು ಹೆಚ್ಚಿಸಿ ಪ್ರತಿ ಪ್ರಯಾಣವನ್ನೂ ಚಿಂತೆ-ಮುಕ್ತಗೊಳಿಸುತ್ತದೆ.

56

ವರ್ಧಿತ ಸುರಕ್ಷತೆ, ಹೆಚ್ಚಿನ ಆರಾಮ

ಸುರಕ್ಷತೆಯನ್ನು ತನ್ನ ಮೂಲದಲ್ಲಿ ಇರಿಸಿಕೊಂಡ HF Deluxe Pro, ಸುಧಾರಿತ ಸ್ಥಿರತೆ ಮತ್ತು ಸವಾರಿಯ ಆರಾಮಕ್ಕಾಗಿ ಟ್ಯೂಬ್‌ಲೆಸ್ ಟೈರ್ ಇರುವ ದೊಡ್ಡ 18” ವ್ಯಾಸದ ಮುಂಬದಿ ಮತ್ತು ಹಿಂಬದಿ ಚಕ್ರಗಳನ್ನು ಹೊಂದಿದೆ. 130mm ವ್ಯಾಸದ ಹಿಂಬದಿಯ ಬ್ರೇಕ್ ಡ್ರಮ್ ಹೆಚ್ಚು ಪ್ರಬಲವಾದ ಬ್ರೇಕಿಂಗ್ ಕಾರ್ಯಕ್ಷಮತೆ ಮತ್ತು ಇನ್ನೂ ಉತ್ತಮವಾದ ನಿಯಂತ್ರಣ ಖಾತರಿಪಡಿಸುತ್ತದೆ. ಪ್ರಬಲವಾದ 2-ಹೆಜ್ಜೆ ಸರಿಪಡಿಸಬಹುದಾದ ಹಿಂಬದಿ ಸಸ್ಪೆನ್ಶನ್ ಸೆಟ್‌ಅಪ್‌ನೊಂದಿಗೆ ಬಾಳಿಕಗಾಗಿಯೇ ಇಂಜಿನಿಯರ್ ಮಾಡಲಾಗಿರುವ ಇದು ಯಾವುದೇ ರಸ್ತೆ ಪರಿಸ್ಥಿತಿಗಳಿಗೂ ನಿಖವಾಗಿ ಸೂಕ್ತವಾದ ವೈವಿಧ್ಯಮಯ ಟೆರೇನ್‌ಗಳಲ್ಲಿ ಸ್ಥಿರವಾದ ನಿರ್ವಹಣೆಯನ್ನು ಖಾತರಿಪಡಿಸುತ್ತದೆ.

66

ಅತ್ಯುತ್ಕೃಷ್ಟ ಮೈಲೇಜ್ ಮತ್ತು ಕಾರ್ಯಕ್ಷಮತೆ

HF Deluxe Pro, 7.9 bhp at 8000 RPM ಔಟ್‌ಪುಟ್ ಮತ್ತು 6000 RPM ನಲ್ಲಿ 8.05 Nm ಟಾರ್ಕ್‌ನ ಬಲಿಷ್ಟ ಕಾರ್ಯಕ್ಷತೆ ಒದಗಿಸುವ ವಿಶ್ವಸನೀಯ 97.2cc ಇಂಜಿನ್‌ನ ಶಕ್ತಿ ಹೊಂದಿದೆ i3S (Idle Stop-Start System), ತಂತ್ರಜ್ಞಾನ, ಲೋ-ಫ್ರಿಕ್ಷನ್ ಇಂಜಿನ್ ಮತ್ತು ಲೋ ರೋಲಿಂಗ್ ರೆಸಿಸ್ಟೆನ್ಸ್ ಟೈರ್ಗಳೊಂದಿಗೆ ಅದು ಸಲಿಲವಾದ ವೇಗವರ್ಧನೆ ಖಾತರಿಪಡಿಸುವ ಸಮಯದಲ್ಲೇ ಅತ್ಯುತ್ಕೃಷ್ಟ ಮೈಲೇಜ್ ಸಾಧಿಸುತ್ತದೆ.

Read more Photos on
click me!

Recommended Stories