AMO ಎಲೆಕ್ಟ್ರಿಕ್ ಬೈಕ್ ಇನ್ಸ್‌ಪೈರರ್ EV ಬೈಕ್ ಸುಮಾರು ₹68,000 ಕ್ಕೆ ಮಾರಾಟವಾಗುತ್ತಿದ್ದು, ಈ ಅಮೆಜಾನ್ ಸೇಲ್‌ನಲ್ಲಿ ಸುಮಾರು 26% ರಿಯಾಯಿತಿಯೊಂದಿಗೆ ಕೇವಲ ₹49,890 ಕ್ಕೆ ಮಾರಾಟವಾಗುತ್ತಿದೆ. EMI (ತಿಂಗಳಿಗೆ ₹2,500) ಮತ್ತು ಇತರ ಮೂಲಭೂತ ಕೊಡುಗೆಗಳೂ ಇವೆ.
ದೂರು, ವಿವಾದಗಳ ನಡುವೆಯೂ OLA S1 Pro ಎಲೆಕ್ಟ್ರಿಕ್ ಸ್ಕೂಟರ್, ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಈ OLA S1 Pro ಈಗ ₹1.3 ಲಕ್ಷಕ್ಕೆ ಮಾರಾಟವಾಗುತ್ತಿದ್ದು, ಅಮೆಜಾನ್‌ನಲ್ಲಿ ಸುಮಾರು ₹1.2 ಲಕ್ಷಕ್ಕೆ ಮಾರಾಟವಾಗುತ್ತಿದೆ.
Green Invicta ಎಲೆಕ್ಟ್ರಿಕ್ ಸ್ಕೂಟರ್, ಈಗಷ್ಟೆ ಇವಿ ಮಾರುಕಟ್ಟೆಯಲ್ಲಿ ಹೆಜ್ಜೆ ಇಡುತ್ತಿದೆ. ಗ್ರೀನ್ ಇನ್ವಿಕ್ಟಾ ಕಂಪನಿಯು ತನ್ನ ಇವಿ ಸ್ಕೂಟರ್‌ಗಳಿಗೆ ಅಮೆಜಾನ್ ಮೂಲಕ ಭಾರಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದೆ. 60 ಕಿ.ಮೀ. ರೇಂಜ್ ಹೊಂದಿರುವ, ₹95,000 ಬೆಲೆಯ Green Invicta ಎಲೆಕ್ಟ್ರಿಕ್ ಸ್ಕೂಟರ್ ಈಗ ₹44,999 ಕ್ಕೆ ಮಾರಾಟವಾಗುತ್ತಿದೆ.