ತನ್ನ ಬಳಗಕ್ಕೆ ಮೂವರು ಹೊಚ್ಚ ಹೊಸ ಹಾಗೂ ಅತ್ಯದ್ಭುತ ಸದಸ್ಯರನ್ನು ಸೇರ್ಪಡೆ ಗೊಳಿಸಿಕೊಳ್ಳುವ ಮೂಲಕ ಜಾವಾ 42 ಕುಟುಂಬವು ಜಾವಾ 2.1ರ ಅದ್ಧೂರಿ ಪ್ರವೇಶವನ್ನು ಘೋಷಿಸಿದೆ. ದೇಶದಲ್ಲಿನ ತಮ್ಮ ಮೋಟಾರ್‍ಸೈಕಲ್‍ಗಳ ಮಾಡೆಗಳ ಸಾಲಿಗೆ ಹೊಸ ಸೇರ್ಪಡೆ ಆಗುತ್ತಿರುವುದನ್ನು ಘೋಷಿಸಲು ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯು ಹೆಮ್ಮೆ ಪಡುತ್ತದೆ. ಹಾಗೇ ಈ ಹೊಸ ಮೋಟಾರ್‍ಸೈಕಲ್‍ಗಳು ದೇಶದಾದ್ಯಂತ ಇರುವ ಎಲ್ಲ ಕ್ಲಾಸಿಕ್ ಲೆಜೆಂಡ್ಸ್ ಜಾವಾ ಡೀಲರ್‍ಷಿಪ್‍ಗಳಲ್ಲಿ ಲಭ್ಯವಿರಲಿವೆ.
undefined
2018ರಲ್ಲಿ ಅನಾವರಂಗೊಳಿಸಲಾದ ಜಾವಾ 42 ಮೋಟಾರ್‍ಸೈಕಲ್ ‘ರೆಟ್ರೋ ಕೂಲ್’ ಕ್ರಾಂತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಅದಕ್ಕೆ ಕ್ಲಾಸಿಕ್ ಸ್ಪೋಟ್ರ್ಸ್ ಲುಕ್ ನೀಡಲಾಗಿದೆ. ಈ ಮೋಟಾರ್‍ಸೈಕಲ್‍ನ ದೆಹಲಿ ಎಕ್ಸ್-ಶೋರೂಮ್ ಬೆಲೆ 1,83,942 ರೂಪಾಯಿ.
undefined
ಹೊರಗಿನಿಂದ ನೋಡುವುದಾದರೆ ಮೋಟಾರ್‍ಸೈಕಲ್‍ಗಳಿಗೆ ‘ಸ್ಪೋರ್ಟಿ ಕ್ಲಾಸಿಕ್’ ಪೆರ್ಸೋನಾ ಲುಕ್ ದೊರೆತಿದೆ. ಇಲ್ಲಿ ಹೊಸ ಕಲರ್ ಸ್ಕೀಂಗಳು ಗ್ರಾಹಕರ ಕಣ್ಣುಗಳನ್ನು ಕೋರೈಸಲಿವೆ. ಮೋಟಾರ್‍ಸೈಕಲ್‍ನ ಮೆಕ್ಯಾನಿಕಲ್ ಭಾಗಗಳಾದ್ಯಂದ ಹರಡಿರುವ ಆಲ್-ಬ್ಲಾಕ್ ಥೀಮ್ ಜೊತೆಗೆ ಈ ಮೂರು ಅತ್ಯಾಕರ್ಷಕ ಬಣ್ಣಗಳು ಗ್ರಾಹಕರನ್ನು ತಮ್ಮತ್ತ ಆಕರ್ಷಿಸುತ್ತವೆ. ಹೊಸ ಬಣ್ಣಗಳಾಗಿರುವ ಓರಿಯನ್ ರೆಡ್, ಸಿರಿಯಸ್ ವೈಟ್ ಮತ್ತು ಆಲ್‍ಸ್ಟಾರ್ ಬ್ಲಾಕ್ ಬಣ್ಣಗಳಲ್ಲಿ ತಮ್ಮ ಮನಸಿಗೆ ಇಷ್ಟವಾಗುವ ಕಲರ್ ಅನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. 42 ಮೋಟಾರ್‍ಸೈಕಲ್‍ನ ಡಿಎನ್‍ಎ ಆಗಿರುವ ಮೋಟಾರ್‍ಸೈಕಲ್‍ನ ಉದ್ದಕ್ಕೂ ಇರುವ ಸ್ಪೋಟ್ರ್ಸ್ ಸ್ಟ್ರಿಪ್‍ಗಳನ್ನು ಈ ಹೊಸ ಮಾದರಿಗಳಲ್ಲಿ ಕಾಣಬಹುದಾಗಿದೆ
undefined
ಜಾವಾ 42ಗೆ 13-ಸ್ಪೋಕ್ ಅಲೋಯ್ ವ್ಹೀಲ್‍ಗಳಿದ್ದು, ಇವುಗಳನ್ನು 42ಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಟ್ಯೂಬ್‍ಲೆಸ್ ಟೈರ್‍ಗಳು ಇದರಲ್ಲಿವೆ. ಸಂಪೂರ್ಣ ಕಪ್ಪು ಬಣ್ಣದ ಫಿನಿಷ್ ಹೊಂದಿರುವ ಬಾರ್ ಎಂಡ್ ಮಿರರ್‍ಗಳು ಕ್ಲಾಸಿಕ್ ಸ್ಪೋಟ್ಸ್ ಪರ್ಸೋನಾದ ಪ್ರಮುಖ ಅಂಶಗಳಾಗಿವೆ. ಇದರೊಂದಿಗೆ ಮೋಟಾರ್‍ಸೈಕಲ್‍ಗಳು ಟ್ರಿಪ್ ಮೀಟರ್ ಅನ್ನು ಕೂಡ ಹೊಂದಿರಲಿವೆ.
undefined
ರೈಡರ್‍ಗಳಿಗೆ ಮತ್ತಷ್ಟು ಕಂಫರ್ಟ್ ಒದಗಿಸುವ ನಿಟ್ಟಿನಲ್ಲಿ ಸೀಟ್‍ಗಳ ಶೈಲಿಯಂಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಮರುವಿನ್ಯಾಸಗೊಳಿಸಿರುವ ಸೀಟ್ ಪ್ಯಾನ್ ಮತ್ತು ರೈಡರ್‍ಗಳ ರೈಢ್‍ನ ಮೋಜನ್ನು ಇಮ್ಮಡಿಗೊಳಿಸುವ ಕುಷನಿಂಗ್ ಇದರಲ್ಲಿದೆ. ಉತ್ತಮ ಗ್ರೌಂಡ್ ಕ್ಲಿಯರೆನ್ಸ್‍ಗಾಗಿ ಸಸ್ಪೆನ್ಷನ್ ಮತ್ತು ಫ್ರೇಮ್ ಸೆಟ್-ಅಪ್ ಅನ್ನು ರೀ-ಟ್ಯೂನ್ ಮಾಡಲಾಗಿದೆ ಮತ್ತು ಇದರಿಂದಾಗಿ ರೈಡ್ ಮಾಡುವಾಗ 42 ವಾಹನವನ್ನು ನಿರ್ವಹಿಸುವುದು ಮಾಡುವುದು ಹಿಂದೆಂದಿಗಿಂತಲೂ ಮೋಜಿನಿಂದ ಕೂಡಿರಲಿದೆ. ಇದರೊಂದಿಗೆ ರೈಡಿಂಗ್‍ನ ಉತ್ತಮ ಅನುಭೂತಿಗಾಗಿ ಟ್ವಿನ್ ಎಕ್ಸಾಸ್ಟ್‍ಗಳನ್ನು ಮತ್ತಷ್ಟು ಡೀಪ್ ಹಾಗೂ ಟ್ಯೂನ್ ಮಾಡಲಾಗಿದೆ.
undefined
ಎಂದಿನಂತೆ ಕಾಂಟಿನೆಂಟಲ್ ಅಭಿವೃದ್ಧಿಪಡಿಸಿರುವ ಎಬಿಎಸ್ ಬ್ರೇಕಿಂಗ್ ವ್ಯವಸ್ಥೆಯು ಎಲ್ಲ ಜಾವಾ ಮೋಟಾರ್‍ಸೈಕಲ್‍ಗಳ ಅಂಗವಾಗಿದ್ದು, ಇದರಿಂದಾಗಿ ಮೋಟಾರ್‍ಸೈಕಲ್ ಅನ್ನು ಹ್ಯಾಂಡಲ್ ಮಾಡುವುದು ಸುಲಭವಾಗುತ್ತದೆ. ಈ ಎಲ್ಲಾ ವಿಷೇಷತೆಗಳನ್ನು ಪ್ರಸ್ತುತ ಇಲರುವ ಜಾವಾ ಮತ್ತು 42 ಮೋಟಾರ್‍ಸೈಕಲ್ ಶ್ರೇಣಿಗಳಿಗೆ ಸೇರ್ಪಡೆಗೊಳಿಸಲಾಗಿದೆ.
undefined
293ಸಿಸಿ ಲಿಕ್ವಿಡ್ ಕೂಲ್ಡ್ ಮತ್ತು ಇಂಜಿಕ್ಟೆಡ್ ಎಂಜಿನ್ ಅನ್ನು 27.33 ಪಿಎಸ್‍ನಷ್ಟು ಪವರ್ ಮತ್ತು 27.02 ಎನ್‍ಎಂ ನಷ್ಟು ಟಾರ್ಕ್ ನೀಡುವ ರೀತಿಯಲ್ಲಿ ಉತ್ತಮಪಡಿಸಲಾಗಿದೆ. ಕ್ರಾಸ್ ಪೋರ್ಟ್ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಮೊಟ್ಟಮೊದಲ ಸಿಂಗಲ್ ಸಿಲಿಂಡರ್ ಎಂಜಿನ್ ಇದಾಗಿದೆ. ಇದರಿಂದ ಎಂಜಿನ್‍ನ ವಾಲ್ಯೂಮ್ಯಾಟ್ರಿಕ್ ದಕ್ಷತೆಯು ಹೆಚ್ಚುವುದಲ್ಲದೆ, ಚಾರ್ಜ್ ಮತ್ತು ಎಕ್ಸಾಸ್ಟ್ ಗ್ಯಾಸಸ್‍ನ ಉತ್ತಮ ಹರಿವು ಉತ್ತಮಗೊಳ್ಳುತ್ತದೆ. ಇದರಿಂದ ಹಿಂದೆಂದಿಗಿಂತ ಉತ್ತಮವಾಗಿರುವ ಪವರ್ ಮತ್ತು ಟಾರ್ಕ್ ದೊರೆಯುತ್ತದೆ.
undefined
ಪ್ರಸ್ತುತ ಎಂಜಿನ್‍ನಲ್ಲಿ ಮರುಸ್ಥಾಪಿತ ಲ್ಯಾಂಬ್ಡಾ ಸೆನ್ಸಾರ್ ವಿಷೇಷತೆಯನ್ನು ಕಾಣಬಹುದಾಗಿದೆ. ಇದು ಎಂಜಿನ್‍ನ ಹೊರಗಿನ ಮತ್ತು ಒಳಭಾಗದಲ್ಲಿನ ಏರಿಳಿತಗಳನ್ನು ಹೆಚ್ಚು ದಕ್ಷತೆಯಿಂದ ನಿರ್ವಹಿಸುವುದಷ್ಟೇ ಅಲ್ಲದೆ, ಎಂಥದ್ದೇ ರಸ್ತೆಗಳಲ್ಲೂ ಸ್ಥಿರವಾಗಿರುವ ಪ್ರದರ್ಶನ ಹಾಗೂ ಶುಭ್ರ ಎಮಿಷನ್‍ಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಇವೆಲ್ಲವುಗಳ ಪರಿಣಾಮವಾಗಿ ಎಲ್ಲ ಶ್ರೇಣಿಯ ಮೋಟಾರ್‍ಸೈಕಲ್‍ಗಳ ಪರದರ್ಶನ ಉತ್ತಮಗೊಂಡಿದ್ದು, ಮಿಡ್‍ರೇಂಜ್‍ನಲ್ಲಿ ಗಮನಿಸಬಹುದಾಗಿರುವ ಪಂಚ್‍ನ ಪರಿಣಾಮವಾಗಿ ಸ್ಟ್ರಾಂಗರ್ ಆಕ್ಸೆಲರೇಷನ್ ಸಿಗುತ್ತದೆ.
undefined
ಮೋಟಾರ್‍ಸೈಕಲ್ ಅನ್ನು ಕಸ್ಟಮೈಸ್ ಮಾಡಿಕೊಳ್ಳುವವರಿಗೆ ಅನುಕೂಲವಾಗುವಂತೆ ಫ್ಲೈ-ಸ್ಕ್ರೀನ್, ಹೆಡ್ ಲ್ಯಾಂಪ್ ಗ್ರಿಲ್‍ಗಳನ್ನು ಪರಿಚಯಿಸಿರುವ ಕ್ಲಾಸಿಕ್ ಲೆಜೆಂಡ್ಸ್, ಅವುಗಳನ್ನು ಎನ್ನೆಲ್ಲಾ ಡೀಲರ್‍ಷಿಪ್‍ಗಳಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುತ್ತಿದೆ. 42ನಲ್ಲಿ ಬರುವ ಅಲೋಯ್ ವ್ಹೀಲ್‍ಗಳನ್ನು ಸಹ ಎಲ್ಲ ಡೀಲರ್‍ಷಿಪ್‍ಗಳಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುಲಾಗುತ್ತದೆ. ಗ್ರಾಹಕರು ತಮ್ಮ ಬಳಿ ಈಗಾಗಲೇ ಇರುವ ಮೋಟಾರ್‍ಸೈಕಲ್‍ಗಳಿಗೆ ಈ ಅಲೋಯ್ ವ್ಹೀಲ್‍ಗಳನ್ನು ಹಾಕಿಸಿಕೊಳ್ಳಬಹುದಾಗಿದೆ.
undefined
ಕಳೆದ ವರ್ಷ ನಾವು ಬಿಎಸ್6 ಮಾದರಿಗಳೊಂದಿಗೆ ನಾವು ಮಾರುಕಟ್ಟೆಗೆ ಬಂದಿದ್ದನ್ನು ನಈವು ನೋಡಿದ್ದೀರಿ. ಅದೇ ರೀತಿ ನಮ್ಮ ಮೋಟಾರ್‍ಸೈಕಲ್‍ಗಳ ಪ್ರದರ್ಶನ ಮಟ್ಟ ಹಾಗೂ ಫೀಲ್ ಅನ್ನು ಹಿಂದೆಂದಿಗಿಂತಲೂ ಇನ್ನಷ್ಟು ಉತ್ತಮಪಡಿಸಿದ್ದೇವೆ. ಈ ಸುಧಾರಿತ ಮಾದರಿಗಳನ್ನು 2.1 ಎಂದು ಕರೆದಿದ್ದೇವೆ. ಉತ್ತಮ ಫೀಲ್ ನೀಡುವ ಉದ್ದೇಶದಿಂದ ಎಕ್ಸಾಸ್ಟ್, ಸೀಟ್ ಅನ್ನು ಮತ್ತಷ್ಟು ಉತ್ತಮಪಡಿಸಿದ್ದು, ಹೆಚ್ಚುವರಿ ಪಂಚ್ ನೀಡುವ ಉದ್ದೇಶದಿಂದ ಎಂಜಿನ್ ಅನ್ನು ಫೈನ್ ಟ್ಯೂನ್ ಮಾಡಿದ್ದೇವೆ ಎಂದು ಹೊಸ ಮೋಟಾರ್‍ಸೈಕಲ್‍ಗಳನ್ನು ಪರಿಚಯಿಸಿದ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯ ಸಿಇಒ ಆಶಿಷ್ ಸಿಂಗ್ ಜೋಷಿ ಹೇಳಿದರು
undefined