ದೀಪಾವಳಿ ಹಬ್ಬದ ಬಂಪರ್, ಹೋಂಡಾ ಆ್ಯಕ್ಟೀವಾಗೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್!

First Published | Oct 31, 2024, 11:13 AM IST

ದೀಪಾವಳಿ ಹಬ್ಬದ ಕೊಡುಗೆ ಘೋಷಣೆಯಾಗಿದೆ. ಇದೀಗ ಹೋಂಡಾ ಆ್ಯಕ್ಟೀವಾ 6ಜಿ ಹಾಗೂ 125 ಸ್ಕೂಟರ್ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಈ ಮೂಲಕ ಕೈಗೆಟುಕುವ ದರದಲ್ಲಿ ಸ್ಕೂಟರ್ ಖರೀದಿಸಲು ಸಾಧ್ಯವಾಗಲಿದೆ. 
 

ದೀಪಾವಳಿ ಹಬ್ಬದ ಪ್ರಯುಕ್ತ ಹಲವು ಉತ್ಪನ್ನ, ಸ್ಕೂಟರ್, ಕಾರು ಸೇರಿದಂತೆ ವಾಹನಗಳ ಮೇಲೆ ಹಲವು ಕಂಪನಿಗಳು ಆಫರ್ ಘೋಷಣೆ ಮಾಡಿದೆ. ಇದೀಗ ಹೋಂಡಾ ಆ್ಯಕ್ಟೀವಾ 6ಜಿ ಹಾಗೂ ಆ್ಯಕ್ಟೀವಾ 125 ಸ್ಕೂಟರ್ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಘೋಷಣೆ ಮಾಡಲಾಗಿದೆ. ಬಜಾಜ್ ಮಾಲ್ ಮೂಲಕ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಾಗಲಿದೆ. ಈ ಆಫರ್‌ನಿಂದ ಇದೀಗ ಕೈಗೆಟುಕುವ ದರದಲ್ಲಿ ಹೋಂಡಾ ಆ್ಯಕ್ಟೀವಾ ಸ್ಕೂಟರ್ ಖರೀದಿ ಸಾಧ್ಯವಾಗಲಿದೆ.

ಬಜಾಜ್ ಮಾಲ್‌ನಲ್ಲಿ ಇಎಂಐ ಮೂಲಕ ಹೋಂಡಾ ಆ್ಯಕ್ಟೀವಾ 6ಜಿ ಹಾಗೂ 125 ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಆಫರ್ ಸಿಗಲಿದೆ. 5,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಘೋಷಣೆ ಮಾಡಲಾಗಿದೆ. ವಿಶೇಷ ಅಂದರೆ ಅತೀ ಕಡಿಮೆ ಡೌನ್‌ಪೇಮೆಂಟ್, ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಬಜಾಜ್ ಫಿನ್‌ಸರ್ವ್ ನೀಡಲಿದೆ.

Tap to resize

 ಈ ದೀಪಾವಳಿ ಹಬ್ಬಕ್ಕೆ ಆ್ಯಕ್ಟೀವ್ ಸ್ಕೂಟರ್ ಮನೆಗೆ ತರವು ಆಲೋಚನೆ ಇದ್ದರೆ, ಈ ಆಯ್ಕೆ ಉತ್ತಮವಾಗಿದೆ. ಕಾರಣ ಸ್ಕೂಟರ್ ಒಟ್ಟು ಮೊತ್ತದ ಮೇಲೆ 5,000 ರೂಪಾಯಿ ಕಡಿತಗೊಳ್ಳಲಿದೆ. ಬಜಾಜ್ ಮಾಲ್ ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಿದರೆ ಈ ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದು. ಇದರಿಂದ ಸ್ಕೂಟರ್ ಖರೀದಿ ನನಸು ನನಸಾಗಿಸಬಹುದು. ಪ್ರಮುಖವಾಗಿ 2 ಸ್ಕೂಟರ್ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. 

ಹೋಂಡಾ ಆ್ಯಕ್ಟೀವಾ 125 ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 79,935 ರೂಪಾಯಿ, ಇನ್ನು ಆ್ಯಕ್ಟೀವಾ 6ಜಿ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 89,422 ರೂಪಾಯಿ. 6ಜಿ ಸ್ಕೂಟರ್ 109.51 cc ಎಂಜಿನ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 47 kmpl ಮೈಲೇಜ್ ನೀಡಲಿದೆ.  5.3 ಇಂಧನ ಸಾಮರ್ಥ್ಯ ಹೊಂದಿದೆ. 7.73 bhp ಪವರ್ ಹೊಂದಿರುವ ಆ್ಯಕ್ಟೀವಾ 6ಜಿ ಸ್ಕೂಟರ್ ಗರಿಷ್ಠ ವೇಗ 85 ಕಿ.ಮಿ ಪ್ರತಿಗಂಟೆಗೆ.

ಹೋಂಡಾ 125 ಸ್ಕೂಟರ್ 124 cc ಎಂಜಿನ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 47 ಕಿ.ಮಿ ಮೈಲೇಜ್ ನೀಡಲಿದೆ. ವಿಶೇಷ ಅಂದರೆ 8.19 bhp ಪವರ್ ಹೊಂದಿದೆ.  BS6 ಎಮಿಶನ್ ಎಂಜಿನ್ ಉತ್ತಮ ರೋಡ್ ಗ್ರಿಪ್ ಸೇರಿದಂತೆ ಆರಾಮದಾಯಕ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಸ್ಕೂಟರ್ ಪೈಕಿ ಹೋಂಡಾ ಆ್ಯಕ್ಟೀವಾ ಮುಂಚೂಣಿಯಲ್ಲಿದೆ.

Latest Videos

click me!