ಫ್ಯಾನ್ 10, ಕೋಲ್ಡ್ ವಾಟರ್ 12 ರೂ, ಚಾರ್ಜಿಂಗ್ ಫ್ರಿ, ಬೆಂಗಳೂರಿನ ಪ್ರಿಮಿಯಂ ಆಟೋ ವೈರಲ್, ಬೆಂಗಳೂರಲ್ಲಿ ಹಲವರು ಆಟೋ ಪ್ರಯಾಣ ನೆಚ್ಚಿಕೊಂಡಿದ್ದಾರೆ. ಹಲವು ಬಾರಿ ಅನಿವಾರ್ಯ. ಪ್ರಯಾಣದ ಜೊತೆ ಪ್ರಿಮಿಯಂ ಸೇವೆ ನೀಡೋ ಆಟೋ ಭಾರಿ ಸದ್ದು ಮಾಡುತ್ತಿದೆ.
ಪ್ರೀತಿ ದಿನ ಪೀಕ್ ಬೆಂಗಳೂರು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತದೆ. ಹಲವು ಬಾರಿ ಅಚ್ಚರಿಗೂ ಕಾರಣವಾಗಿದೆ. ಇದೀಗ ಬೆಂಗಳೂರಿನ ಪ್ರೀಮಿಯಂ ಆಟೋ ಸೇವೆಯೊಂದು ವೈರಲ್ ಆಗಿದೆ. ಓಲಾ, ಉಬರ್ ಸೇರಿದಂತೆ ಆನ್‌ಲೈನ್ ಮೂಲಕ ಬುಕಿಂಗ್ ಮಾಡುವಾಗ ಪ್ರಿಮಿಯಂ ಕ್ಯಾಬ್ ಸೇರಿದಂತೆ ಹಲವು ಆಯ್ಕೆಗಳು ಲಭ್ಯವಿರುತ್ತೆ. ಇದೀಗ ಬೆಂಗಳೂರಲ್ಲಿ ಆಟೋದಲ್ಲಿ ಪ್ರಿಮಿಯಂ ಸರ್ವೀಸ್ ಲಭ್ಯವಿದೆ.
25
ಪ್ರಯಾಣಿಕರಿಗೆ ವಿಶೇಷ ಸೌಲಭ್ಯ
ಈ ಪ್ರಿಮಿಯಂ ಆಟೋ ಹತ್ತಿದರೆ ಪ್ರಯಾಣಿಕರಿಗೆ ಕೆಲ ವಿಶೇಷ ಸೌಲಭ್ಯಗಳು ಲಭ್ಯವಿದೆ. ನಿಮ್ಮ ಪ್ರಯಾಣ ನಾರ್ಮಲ್‌ನಿಂದ ಅಪ್‌ಗ್ರೇಡ್ ಮಾಡಿ ಪ್ರಿಮಿಯಂ ಮಾಡಲು ಇಚ್ಚಿಸಿದರೆ ಜಸ್ಟ್ ಒಕೆ ಎಂದರೆ ಸಾಕು, ನಿಮ್ಮ ಪ್ರಯಾಣ ಪ್ರಿಮಿಯಂ ದರ್ಜೆಗೆ ಎರಲಿದೆ. ಇದಕ್ಕೆ ತುಸು ಹೆಚ್ಚು ಪಾವತಿಸಬೇಕು ಅಷ್ಟೆ.
35
ಆಟೋದಲ್ಲಿರುವ ಸೌಲಭ್ಯಗಳೇನು
ಪ್ರಿಮಿಯಂ ಆಟೋದಲ್ಲಿ ಪ್ರಯಾಣದ ಅನುಭವ ಬೇಕಾದರೆ ಕೆಲ ಸೌಲಭ್ಯಗಳಿಗೆ ಪಾವತಿ ಮಾಡಬೇಕು. ಈ ಕುರಿತು ಪಟ್ಟಿಯನ್ನೇ ಆಟೋದಲ್ಲಿ ನೀಡಲಾಗಿದೆ
ಪ್ರಯಾಣದ ಅವಧಿಯಲ್ಲಿ 30 ನಿಮಿಷಗಳ ಕಾಲ ಫ್ಯಾನ್ ಸೌಲಭ್ಯಕ್ಕೆ 30 ರೂಪಾಯಿ
ಈ ಆಟೋದಲ್ಲಿ ಪ್ರಿಮಿಯಂ ಸೌಲಭ್ಯದ ಮೂಲಕ ಪ್ರಯಾಣ ಮಾಡಿದ ಯುವತಿ ಶಾಗುನ್ ಒಹ್ರಿ ಈ ಅನುಭವವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಹಲವರು ವಿನೂನತ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ತೀವ್ರ ಸ್ಪರ್ಧ ನಡುವೆ ಆಟೋ ಚಾಲಕ ಕೂಡ ಪ್ರಿಮಿಯಂ ಸರ್ವೀಸ್ ಮೂಲಕ ಜನರ ಗಮನಸೆಳೆದಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
55
ಸ್ಮಾರ್ಟ್ ಕೆಲಸ
ಬೇಸಿಗೆ ಉರಿ ಬಿಸಿಲಿನಲ್ಲಿ ಈ ಆಟೋ ನೀಡುವ ಪ್ರಿಮಿಯಂ ಸರ್ವೀಸ್ ಬೇಕೆ ಬೇಕು. ಫ್ಯಾನ್ ಹಾಗೂ ಕೋಲ್ಡ್ ವಾಟರ್ ಎರಡೂ ಅತ್ಯವಶ್ಯಕ. ಜನರ ನಾಡಿಮಿಡಿತ ಅರಿತಿರುವ ಆಟೋ ಚಾಲಕ ಸ್ಮಾರ್ಟ್ ಕೆಲಸ ಮಾಡುತ್ತಿದ್ದಾನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.