Entrepreneur Couple: Bengaluru ನಮ್ಮನ್ನು ಕೊಲ್ತಿದೆ, ನೀವೂ ದ್ವೇಷಿಸಿದ್ರೂ OK, ಈ ಊರು ಬಿಟ್ಟೋಗ್ತೀವಿ: ದಂಪತಿ ವಿಡಿಯೋ ವೈರಲ್

Published : Jun 22, 2025, 02:10 PM IST

ವಿವಿಧ ಕಾರಣಕ್ಕೆ ಬೆಂಗಳೂರಿನಲ್ಲಿ ಇರಬೇಕು ಅಂತ ಜನರು ಬಯಸ್ತಾರೆ. ಬೆಂಗಳೂರಿನ ಜನಸಂಖ್ಯೆ ಜಾಸ್ತಿ ಇದೆ. ಇಲ್ಲೋರ್ವ ದಂಪತಿ ತಮ್ಮ ಆರೋಗ್ಯದ ದೃಷ್ಟಿಯಿಂದ ಬೆಂಗಳೂರು ತೊರೆಯುವ ನಿರ್ಧಾರ ಮಾಡಿದ್ದಾರೆ.  

PREV
15

ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ವಾಸ ಮಾಡಿದ ಬಳಿಕ ಅಶ್ವಿನ್ ಮತ್ತು ಅಪರ್ಣ‌ ಅವರು ಇಲ್ಲಿಂದ ಹೊರಗೆ ಹೋಗೋಕೆ ನಿರ್ಧಾರ ಮಾಡಿದ್ದಾರೆ. ನಮಗೆ ಬೆಂಗಳೂರು ನಗರದ ವಾತಾವರಣ, ಹವಾಮಾನ, ಜನರು ಇಷ್ಟವಾಯಿತು. ಆದರೆ ಈಗ ಬೆಂಗಳೂರನ್ನು ತೊರೆಯಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಬೆಂಗಳೂರಿನ ಕ್ಷೀಣಿಸುತ್ತಿರುವ ವಾಯು ಗುಣಮಟ್ಟವೇ ಇದಕ್ಕೆ ಕಾರಣ ಆಗಿದ್ದು, ಇದರಿಂದಾಗಿ ಇಬ್ಬರೂ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರಂತೆ.

25

2 ದಿನಗಳ ಹಿಂದೆ ಹಂಚಿಕೊಂಡ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಯಾಕೆ ಬೆಂಗಳೂರು ಬಿಡ್ತಿದ್ದೀವಿ ಎಂದು ನಿರ್ಧಾರ ಮಾಡಿರೋದಾಗಿ ಅವರು ವಿವರವಾಗಿ ತಿಳಿಸಿದ್ದಾರೆ. ಅಶ್ವಿನ್ ಮತ್ತು ಅಪರ್ಣ ಇಬ್ಬರಿಗೂ ಈಗ 27 ವರ್ಷ. ಇವರಿಬ್ಬರೂ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಬ್ಯುಸಿನೆಸ್‌ ಕೂಡ ಇದೆ. ಈ ಜೋಡಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿದೆ.

35

“ಬೆಂಗಳೂರು ನಮ್ಮನ್ನು ಧೀರ್ಘವಾಗಿ ಕೊಲ್ಲುತ್ತಿದೆ. ಈ ವಿಷಯಕ್ಕೆ ನೀವು ನಮ್ಮನ್ನು ದ್ವೇಷಿಸಬಹುದು” ಎಂಬ ಹೇಳುತ್ತ ಪ್ರಾರಂಭವಾದ ವೀಡಿಯೊದಲ್ಲಿ, ಈ ದಂಪತಿ ಭಾರತದ ಸಿಲಿಕಾನ್ ವ್ಯಾಲಿಯನ್ನು ತೊರೆಯುವ ತಮ್ಮ ನಿರ್ಧಾರವನ್ನು ವಿವರಿಸಿದ್ದಾರೆ. ಬೆಂಗಳೂರಿನ ಹವಾಮಾನ, ವಾತಾವರಣ, ಜನರನ್ನು ತಾವು ಪ್ರೀತಿಸುತ್ತೇವೆ. ಆದರೆ ಕಾಲಾನಂತರದಲ್ಲಿ, ತಾವು ಆಗಾಗ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದೇವೆ ಎಂದಿದ್ದಾರೆ.

45

“ನಾವು ಆಗಾಗ ರೋಗಕ್ಕೆ ತುತ್ತಾದೆವು. ನನಗೆ ಉಸಿರಾಟದ ತೊಂದರೆ, ಅಲರ್ಜಿಗಳು ಶುರುವಾಯ್ತು. ಯಾವಾಗಲೂ ಶೀತ ಆಗದಿದ್ದ ನನಗೆ ಈಗ ಯಾವಾಗಲೂ ಕೆಮ್ಮು, ಸೀನು” ಎಂದು ಅಪರ್ಣಾ ಹೇಳಿದ್ದಾರೆ.

ಈ ದಂಪತಿಗಳು ತಮ್ಮ ಜೀವನಶೈಲಿಯನ್ನು ಸರಿ ಮಾಡಿಕೊಳ್ಳಬೇಕು ಎಂದು ಆರೋಗ್ಯಕರ ಆಹಾರ ಸೇವನೆ ಮಾಡುತ್ತ, ದೈನಂದಿನ ವ್ಯಾಯಾಮ ಶುರು ಮಾಡಿಕೊಂಡರು. ಬೆಂಗಳೂರಿನ ವಾಯು ಗುಣಮಟ್ಟದಿಂದಲೇ ಅನಾರೋಗ್ಯ ಆಗ್ತಿದೆ ಎಂದು ಅವರಿಗೆ ಅರ್ಥ ಆಗಿತ್ತು.

55

“ಬೆಂಗಳೂರಿನಲ್ಲಿ ತಾಜಾ ಗಾಳಿ, ಉತ್ತಮ ಹವಾಮಾನವಿದೆ ಅಂತ ಜನರು ಹೇಳುತ್ತಾರೆ, ಆದರೆ ನಿಜವಾಗಿಯೂ ಇದೆಯೇ?” ಎಂದು ಅಪರ್ಣಾ ಅವರು ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ. ಫೆಬ್ರವರಿಯಲ್ಲಿ ಅವರು AQI (ವಾಯು ಗುಣಮಟ್ಟ ಸೂಚ್ಯಂಕ) ಪರಿಶೀಲಿಸಿದಾಗ, ಅದು 297 ರಷ್ಟಿತ್ತು ಎಂದು ಗೊತ್ತಾಗಿತ್ತು. ಇದರಿಂದಲೇ ಬೆಂಗಳೂರು ಅಪಾಯಕಾರಿ ಎಂದಿದ್ದಾರೆ. ಅಷ್ಟೇ ಅಲ್ಲದೆ ಹಸಿರಾದ ಮತ್ತು ಶುದ್ಧವಾದ ಸ್ಥಳಕ್ಕೆ ಹೋಗಬೇಕು ಅಂತ ಈ ಜೋಡಿ ಫಿಕ್ಸ್‌ ಆಗಿದೆಯಂತೆ.

Read more Photos on
click me!

Recommended Stories