ಬೆಂಗಳೂರು ಸಂಚಾರ ನಿಯಂತ್ರಣಕ್ಕಾಗಿ ಡ್ರೋನ್‌ಗಳ ಕಣ್ಗಾವಲು

Published : May 18, 2025, 11:09 AM IST

ಬೆಂಗಳೂರಿನಲ್ಲಿ ಸಂಚಾರ ನಿಯಂತ್ರಣಕ್ಕೆ 10 ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಹೆಚ್ಚು ವಾಹನ ದಟ್ಟಣೆಯಿರುವ ಪ್ರದೇಶಗಳಲ್ಲಿ ಡ್ರೋನ್‌ಗಳು ನೈಜ ಸಮಯದ ಮಾಹಿತಿ ನೀಡಲಿವೆ. ಜೂನ್ 2023ರಲ್ಲಿ ಪ್ರಾಯೋಗಿಕವಾಗಿ ಬಳಸಿದ್ದು, ಜನವರಿ 2024ರಿಂದ ಅಧಿಕೃತವಾಗಿ ಬಳಕೆ ಶುರುವಾಗಿದೆ.

PREV
16
ಬೆಂಗಳೂರು ಸಂಚಾರ ನಿಯಂತ್ರಣಕ್ಕಾಗಿ ಡ್ರೋನ್‌ಗಳ ಕಣ್ಗಾವಲು

ರಾಜಧಾನಿ ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕಾಗಿ ಡ್ರೋನ್‌ಗಳನ್ನು ಕರೆತರಲಾಗಿದೆ. ಡ್ರೋನ್‌ ಕಣ್ಗಾವಲಿನಲ್ಲಿ ಸಂಚಾರ ನಿಯಂತ್ರಣಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಬೆಂಗಳೂರು ಬಹುತೇಕ ರಸ್ತೆಗಳಲ್ಲಿ AI ತಂತ್ರಜ್ಞಾನ ಆಧರಿತ ಟ್ರಾಫಿಕ್ ಸಿಗ್ನಲ್ ಮತ್ತು ಕ್ಯಾಮೆರಾಗಳನ್ನು ಅಳಡಿಸಲಾಗಿದೆ. ಇದೀಗ 10 ಡ್ರೋನ್‌ಗಳನ್ನು ಪರಿಚಯಿಸಲಾಗಿದೆ. 

26

ಹೆಚ್ಚು ವಾಹನದಟ್ಟಣೆವಿರುವ ಸಮಯದಲ್ಲಿ ಈ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತದೆ. ವಿಷುಯಲ್ ಏರಿಯಲ್ ನೆಟ್‌ವರ್ಕ್ ಫಾರ್ ನಾಲೆಡೇಬಲ್ ಇನ್‌ಸೈಟ್ಸ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಪೊಲೀಸರು ಇವುಗಳನ್ನು VANKi ಎಂದು ಕರೆಯುತ್ತಾರೆ. 

36

ಬೆಂಗಳೂರು ನಗರದ ಪ್ರಮುಖ ರಸ್ತೆ, ಜಂಕ್ಷನ್‌ಗಳನ್ನು ಸಂಚಾರ ಮೇಲ್ವಿಚಾರಣೆಗಾಗಿ 10 ಡ್ರೋನ್‌ಳನ್ನು ಬಳಸಲಾಗುತ್ತದೆ. ಈ ಡ್ರೋನ್‌ಗಳ ಸಹಾಯದಿಂದ ಯಾವ ಭಾಗದಲ್ಲಿ ಹೆಚ್ಚು ಟ್ರಾಫಿಕ್ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಜೂನ್-2023ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಹೆಬ್ಬಾಳ ಮತ್ತು ಮಾರತಹಳ್ಳಿ ಭಾಗಗಳಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿತ್ತು. ಜನವರಿ-2024ರಲ್ಲಿ ಅಧಿಕೃತವಾಗಿ ಡ್ರೋನ್‌ಗಳನ್ನು ಬಳಕೆ ಮಾಡಲು ಪ್ರಾರಂಭಿಸಲಾಗಿ

46

ಎಲ್ಲೆಲ್ಲಿ ಹಾರಲಿವೆ ಡ್ರೋನ್‌ಗಳು?

ಇದೀಗ 10 ಡ್ರೋನ್‌ಗಳುನ್ನು ಪೊಲೀಸ್ ಉಪವಿಭಾಗಗಳಾದ ಉತ್ತರ, ಈಶಾನ್ಯ, ಮಧ್ಯ, ಆಗ್ನೇಯ, ದಕ್ಷಿಣ, ಪೂರ್ವ, ಪಶ್ಚಿಮ, ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್ ಮತ್ತು ವಿಜಯನಗರಗಳಲ್ಲಿ ವಿತರಿಸಲಾಗಿದೆ. ಪ್ರತಿಯೊಂದು ಡ್ರೋನ್ ಅದರ ನಿಯೋಜಿತ ಪ್ರದೇಶದೊಳಗೆ ಹಲವಾರು ಜಂಕ್ಷನ್‌ಗಳು ಮತ್ತು ಪ್ರಮುಖ ರಸ್ತೆಗಳನ್ನು ಒಳಗೊಂಡಿದೆ.

56

ವಾಹನ ದಟ್ಟನೆಯ ನೈಜ ಸಮಯವನ್ನು ತಿಳಿದುಕೊಳ್ಳಲು ಈ ಡ್ರೋನ್ ಸಹಾಯಕವಾಗುತ್ತವೆ. ನಗರದಲ್ಲಿ ಕ್ರಿಕೆಟ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಡ್ರೋನ್‌ಗಳು ಸಿಬ್ಬಂದಿಗೆ ಟ್ರಾಫಿಕ್ ಮಾಹಿತಿಯನ್ನು ನೀಡಲಿವ. ವಾಹನ ಸಂಚಾರ ಹೆಚ್ಚಿರುವ ಸಂದರ್ಭದಲ್ಲಿಯೂ ಇವುಗಳನ್ನು ಬಳಕೆ ಮಾಡಲಾಗುತ್ತದೆ ಎಂದು  ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್  ಹೇಳುತ್ತಾರೆ.

66

ಡ್ರೋನ್ ಹಾರಾಟದ ಸಾಮರ್ಥ್ಯ

ಡ್ರೋನ್‌ಗಳು ಗರಿಷ್ಠ 120 ಮೀಟರ್ ಎತ್ತರದಲ್ಲಿ 1.5 ಕಿ.ಮೀ ದೂರದವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳ ವೈಮಾನಿಕ ಶ್ರೇಣಿಯು ದೂರದಿಂದ ಸಂಚಾರ ದಟ್ಟಣೆಯ ವ್ಯಾಪ್ತಿಯ ಮಾಹಿತಿ ನೀಡುತ್ತವೆ. ಮಳೆಯ ಸಮಯದಲ್ಲಿ ಡ್ರೋನ್‌ಗಳನ್ನು ಹಾರಿಸಲು ಸಾಧ್ಯವಿಲ್ಲ. ಈ ಡ್ರೋನ್‌ಗಳು ವಾಟರ್ ಪ್ರೂಫ್ ವ್ಯವಸ್ಥೆಯನ್ನು ಒಳಗೊಂಡಿಲ್ಲ.

Read more Photos on
click me!

Recommended Stories