College Holiday: ಫೆಬ್ರವರಿ 13 ಮತ್ತು 14 ರಂದು ಬೆಂಗಳೂರಿನ ಕೆಲವು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಿಗೆ ಈ ಆದೇಶ ಅನ್ವಯಿಸುತ್ತದೆ.
ಬೆಂಗಳೂರಿನ ಈ ಭಾಗದ ಕಾಲೇಜುಗಳಿಗೆ ಫೆಬ್ರವರಿ ತಿಂಗಳಲ್ಲಿ ಎರಡು ದಿನ ರಜೆ ಘೋಷಿಸಿ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ. ಜನವರಿ 28, 2025ರಂಂದು ಈ ಆದೇಶ ಪ್ರಕಟಿಸಲಾಗಿದೆ.
25
2025ರ ಫೆಬ್ರವರಿ ತಿಂಗಳ 13 ಮತ್ತು 14ನೇ ತಾರೀಖಿನಂದು ಸರ್ಕಾರಿ ಪ್ರಥಮ ದರ್ಜೆ, ಖಾಸಗಿ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳ ತರಗತಿಗಳನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಶಿಕ್ಷಣ ಇಲಾಖೆ ಆದೇಶ ಹೊರಪಡಿಸಿದೆ. ಈ ಆದೇಶ ಬೆಂಗಳೂರಿನ ಕೆಲವು ಭಾಗಗಳಿಗೆ ಮಾತ್ರ ಅನ್ವಯವಾಗಲಿದೆ.
35
ಯಾಕೆ ರಜೆ?
ಫೆಬ್ರವರಿ 13 ಮತ್ತು 14ರಂದು ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದೆ. ಈ ಏರ್ ಶೋ ವೀಕ್ಷಿಸಲು ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಗಣ್ಯರು ಆಗಮಿಸುತ್ತಾರೆ.
45
ಏರ್ ಶೋ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸರ್ಕಾರಿ ಪ್ರಥಮ ದರ್ಜೆ, ಖಾಸಗಿ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳ ತರಗತಿಗಳನ್ನು ರದ್ದುಪಡಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಲಾಗಿದೆ.
55
ಯಾವ ಭಾಗದ ಕಾಲೇಜುಗಳಿಗೆ ರಜೆ?
ಏರ್ ಫೋರ್ಸ್ ಸ್ಟೇಶನ್ ಮತ್ತು ಯಲಹಂಕದ ಸುತ್ತಮುತ್ತಲಿನ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗಲಿದೆ. ಪ್ರಕಟಣೆಯಲ್ಲಿ ಪ್ರತ್ಯೇಕವಾಗಿ ಕಾಲೇಜುಗಳ ಹೆಸರನ್ನು ಸೂಚಿಸಿಲ್ಲ. ಏರ್ ಶೋನಲ್ಲಿನ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದಲು ಜನರು ಆಗಮಿಸುತ್ತಾರೆ.