Physical Harassment to Daughter: 'ಗಂಡನ ಜೊತೆ ದೈಹಿಕ ಸಂಬಂಧ ಬೆಳೆಸೋದು ಹೇಳಿಕೊಡ್ತೀನಿ'-ಮಗಳ ಮೇಲೆಯೇ ಬೆಂಗಳೂರಿನ ತಾಯಿ ದೌರ್ಜನ್ಯ!

Published : Jun 29, 2025, 02:39 PM IST

ಸ್ವಂತ ಮಗಳಿಗೆ ತಾಯಿಯೇ ದೈಹಿಕವಾಗಿ ದೌರ್ಜನ್ಯ ಮಾಡಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ ಮಗಳು ಕೌನ್ಸೆಲರ್‌ ಬಳಿ ಹೇಳಿದ್ದೇನು?

PREV
15

ಬೆಂಗಳೂರು: ನಗರದ ಆರ್‌ಟಿ ನಗರದಲ್ಲಿ 45 ವರ್ಷದ ಮಹಿಳೆಯು ಮಗಳಿಗೆ ದೈಹಿಕ ಕಿರುಕುಳ ನೀಡುತ್ತಿದ್ದಳು ಎಂದು ದೂರು ದಾಖಲಿಸಿದ್ದಾರೆ. ಹದಿಹರೆಯದ ಮಗಳಿಗೆ ಹಲವು ವರ್ಷಗಳಿಂದ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. POCSO ಕಾಯಿದೆ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.

25

ಕಳೆದ ಶುಕ್ರವಾರದಂದು ಸ್ಥಳೀಯ ಖಾಸಗಿ ಶಾಲೆಯ ಕೌನ್ಸೆಲರ್‌ ಒಬ್ಬರು ಔಪಚಾರಿಕವಾಗಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಆಮೇಲೆ ಈ ಪ್ರಕರಣವನ್ನು ಅಧಿಕೃತವಾಗಿ ದೂರು ದಾಖಲಿಸಲಾಗಿದೆ. 9ನೇ ತರಗತಿ ವಿದ್ಯಾರ್ಥಿನಿಗೆ ಈಗ 15 ವರ್ಷ ವಯಸ್ಸು. ಶಾಲಾ ಕೌನ್ಸೆಲರ್‌ಗೆ ಈ ಸಂತ್ರಸ್ತೆಯು ತನ್ನ ತಾಯಿಯಿಂದ ನಡೆಯುತ್ತಿರುವ ದೈಹಿಕ ಕಿರುಕುಳದ ಬಗ್ಗೆ ಹೇಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.

35

ಸಂತ್ರಸ್ತೆಯು ದೂರಿನಲ್ಲಿ "ನನ್ನ ತಾಯಿ ನನಗೆ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಳು. ಮದುವೆಯಾದ ಬಳಿಕ ನಾನು ನನ್ನ ಗಂಡನ ಜೊತೆ ಹೇಗೆ ಬಿಹೇವ್‌ ಮಾಡ್ಬೇಕು ಅಂತ ತಾಯಿ ಹೇಳಿಕೊಡ್ತೀನಿ ಅಂತ ಹೇಳಿದ್ದಳು” ಎಂದು ತಿಳಿಸಿದ್ದಾರೆ.

45

ಕಳೆದ ಆರು ವರ್ಷಗಳಿಂದ ಈ ತಾಯಿಯು ಮಗಳಿಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಸಂತ್ರಸ್ತೆಯು ಆರೋಪಿಸಿದ್ದಾಳೆ. ಆ ತಾಯಿಯು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅಷ್ಟೇ ಅಲ್ಲದೆ ಆ ಮಹಿಳೆಯು ತನ್ನ ಪತಿಯಿಂದ ದೂರವಿದ್ದಾಳೆ. ಅಂದಹಾಗೆ ಅವರ ಮಗಳು ಮನೆಯ ಸಮೀಪದ ಶಾಲೆಯಲ್ಲಿ ಓದುತ್ತಿದ್ದಾಳೆ.

55

ಅಧಿಕಾರಿಯೊಬ್ಬರು ಈ ಬೆಳವಣಿಗೆ ನಡೆದಿರೋದು ಸತ್ಯ ಎಂದು ದೃಢಪಡಿಸಿದ್ದಾರೆ. "ಕೌನ್ಸೆಲರ್‌ನಿಂದ ಈ ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು, ಹೀಗಾಗಿ ಪ್ರಕರಣ ದಾಖಲಾಗಿದೆ” ಎಂದಿದ್ದಾರೆ. ಆರೋಪಿಯನ್ನು ಬಂಧಿಸದೆ, ವಿಚಾರಣೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ಕೌನ್ಸಿಲರ್‌ರನ್ನು ಕೂಡ ವಿಚಾರಣೆ ಮಾಡಲಾಗ್ತಿದೆ ಎನ್ನಲಾಗಿದೆ.

Read more Photos on
click me!

Recommended Stories