ರಾಯಲ್ ಚೈನ್ ಹೋಟೆಲ್ :
ಇಲ್ಲಿ ಸುಮಾರು 50 ಕೆಜಿ ಬಾತುಕೋಳಿ ಮಾಂಸ (Duck Meat) ಹಾಗೂ 5 ಕೆಜಿ ಮೀನನ್ನು ಸರಿಯಾಗಿ ಫ್ರೋಜ್ ಮಾಡದೆ ಹಾಳಾದ ಸ್ಥಿತಿಯಲ್ಲಿ ಇಡಲಾಗಿತ್ತು. ಒಟ್ಟು 55 ಕೆಜಿ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.
ಟಸ್ಕಾನೋ ಮತ್ತು ಮಡ್ರಾಸ್ ಕಿಚನ್:
ಇಲ್ಲಿ ಬಳಕೆ ಸೂಕ್ತವಲ್ಲದ 5 ಕೆಜಿ ಮಶ್ರೂಮ್ (Mushroom) ಹಾಗೂ 5 ಕೆಜಿ ಹಸಿರು ಬಟಾಣಿಯನ್ನು ಜಪ್ತಿ ಮಾಡಲಾಗಿದೆ.
ಸೆನ್ಸೆಝ್ ಹೋಟೆಲ್ :
3 ಕೆಜಿ ಫಿಶ್, 7 ಕೆಜಿ ಕೇಕ್ ಹಾಗೂ ಆಲೂಗಡ್ಡೆ ಮತ್ತು 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸೀಜ್ ಮಾಡಲಾಗಿದೆ.
ಒಟ್ಟಾರೆಯಾಗಿ ಯುಬಿ ಸಿಟಿಯ ವಿವಿಧ ಹೋಟೆಲ್‌ಗಳಿಂದ 132 ಕೆಜಿ ಅಪಾಯಕಾರಿ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.