Bengaluru: ಕಾಲ್ಗೆಜ್ಜೆ ಸದ್ದು, ಉಲ್ಟಾ ಆಗಿ ಕಾಣುವ ಮಹಿಳೆಯ ನೆರಳು..ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ‘ಮಹಿಳೆ’ ಯಾರು?

Published : Jun 16, 2026, 12:46 PM IST

ಬೆಂಗಳೂರಿನಿಂದ 31 ಕಿಲೋಮೀಟರ್ ದೂರದಲ್ಲಿರುವ ಹೊಸಕೋಟೆ ಎಂದರೆ ಮೊದಲು ನೆನಪಾಗುವುದು ಫೆಮಸ್‌ ಬಿರಿಯಾನಿ. ಆದರೆ ಇದೇ ಹೊಸಕೋಟೆಯ ಕೆಲವು ರಸ್ತೆಗಳು ಭಯಾನಕ ಕಥೆಗಳನ್ನು ಹೊಂದಿರುತ್ತದೆ.  

PREV
14
ಕರ್ನಾಟಕದ ಮೋಸ್ಟ್ ಹಾಂಟೆಡ್ ರೋಡ್

ಗೂಗಲ್‌ನಲ್ಲಿ "ಕರ್ನಾಟಕದ ಮೋಸ್ಟ್ ಹಾಂಟೆಡ್ ರೋಡ್" ಎಂದು ಹುಡುಕಿದರೆ ಹೊಸಕೋಟೆ ಸುತ್ತಮುತ್ತಲಿನ ಕೆಲವು ರಸ್ತೆಗಳ ಹೆಸರು ಕಾಣಿಸಿಕೊಳ್ಳುತ್ತದೆ. ಸ್ಥಳೀಯರು ಇದನ್ನು ಸುಳ್ಳು ಎಂದರು, ರಾತ್ರಿ ವೇಳೆ ಅಲ್ಲಿ ಸಂಚರಿಸಿದ ಕೆಲವರು ಹೇಳುವ ಅನುಭವಗಳು ಭಯ ಹುಟ್ಟಿಸುತ್ತದೆ.

24
ಮೊದಲ ಘಟನೆ ಆಟೋ ಚಾಲಕ ಅಶೋಕ್ ಅವರದ್ದು

ಮೊದಲ ಘಟನೆ ಆಟೋ ಚಾಲಕ ಅಶೋಕ್ ಅವರದ್ದು. ರಾತ್ರಿ 11 ಗಂಟೆ ಸುಮಾರಿಗೆ ಬಾಡಿಗೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಲಗೇಜ್ ಹಿಡಿದು ನಿಂತಿದ್ದ ಮಹಿಳೆ ಕಾಣಿಸಿಕೊಂಡಿದ್ದಾಳೆ. ಆಕೆಯನ್ನು ಆಟೋದಲ್ಲಿ ಕೂರಿಸಿಕೊಳ್ಳಲು ಮುಂದಾದಾಗ, ಚಾಲಕನನ್ನು ಹೊರಗೆ ಬರುವಂತೆ ಕೇಳಿದ್ದಾಳೆ. ಅನುಮಾನಗೊಂಡ ಅಶೋಕ್ ಅಲ್ಲಿಂದ ಹೊರಟು ಹೋಗಿದ್ದಾರೆ. ಸ್ವಲ್ಪ ದೂರ ಹೋಗಿ ಹಿಂದಿರುಗಿ ನೋಡಿದಾಗ, ಅದೇ ಮಹಿಳೆ ರಕ್ತಸಿಕ್ತ ಮುಖದೊಂದಿಗೆ ರಸ್ತೆಯ ಮಧ್ಯದಲ್ಲಿ ಕುಳಿತಿದ್ದಾಳೆ ಎನ್ನಲಾಗಿದೆ.

34
ಮತ್ತೊಂದು ಕ್ಯಾಬ್ ಚಾಲಕನ ಅನುಭವ

ಮತ್ತೊಂದು ಕ್ಯಾಬ್ ಚಾಲಕನ ಅನುಭವವೂ ಅಷ್ಟೇ ವಿಚಿತ್ರ. ರಾತ್ರಿ ವೇಳೆ ರಸ್ತೆಯಲ್ಲಿ ನಿಂತಿದ್ದ ಮಹಿಳೆಯನ್ನು ಪ್ರಯಾಣಿಕರೆಂದು ಭಾವಿಸಿ ವಾಹನ ನಿಲ್ಲಿಸಿದಾಗ, ನಿಜವಾದ ಬುಕ್ಕಿಂಗ್ ನೀಡಿದ್ದ ವ್ಯಕ್ತಿ ಮುಂದೆ ಕಾಯುತ್ತಿರುವುದು ತಿಳಿದುಬಂದಿದೆ. ಅಲ್ಲಿಂದ ಹೊರಟ ಕೆಲವೇ ಕ್ಷಣಗಳಲ್ಲಿ, ಅದೇ ಮಹಿಳೆ ಮತ್ತೆ ಮುಂದೆ ಕಾಣಿಸಿಕೊಂಡಿದ್ದಾಳೆ ಎನ್ನಲಾಗಿದೆ.

ಆದರೆ ವಿಚಿತ್ರ ಸಂಗತಿ ಏನೆಂದರೆ, ಹೊಸಕೋಟೆಯ ಸ್ಥಳೀಯರು ಈ ಎಲ್ಲ ಕಥೆಗಳನ್ನು ಒಪ್ಪುವುದಿಲ್ಲ. "ನಮ್ಮ ಊರಿನಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ. ಕಾಟೇರಮ್ಮನ ಆಶೀರ್ವಾದ ಇರುವ ಸ್ಥಳ ಇದು" ಎಂದು ಅವರು ಹೇಳುತ್ತಾರೆ. ಹಾಗಾದರೆ ಈ ಅನುಭವಗಳು ಕೇವಲ ಭ್ರಮೆಯೇ? ರಾತ್ರಿ ಸಮಯದ ಮಾನಸಿಕ ಒತ್ತಡದಿಂದ ಉಂಟಾಗುವ ಭಾವನೆಗಳೇ? ಅಥವಾ ನಿಜವಾಗಿಯೂ ಅರ್ಥವಾಗದ ಯಾವುದೋ ಶಕ್ತಿ ಅಲ್ಲಿ ಅಡಗಿದೆಯೇ? ಎಂಬ ಪ್ರಶ್ನೆಗೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

44
ಇನ್ನೊಂದು ಘಟನೆ ಕ್ಯಾಬ್ ಚಾಲಕ

ಇನ್ನೊಂದು ಘಟನೆಯಲ್ಲಿ, ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಬಿಟ್ಟು ಬರುತ್ತಿದ್ದ ಕ್ಯಾಬ್ ಚಾಲಕನ ಕಾರು ಏಕಾಏಕಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ತಿರುಗಿದೆ. ನಂತರ ಗ್ಯಾರೇಜ್‌ನಲ್ಲಿ ವಿಚಾರಿಸಿದಾಗ, ಇದೇ ರಸ್ತೆಯಲ್ಲಿ ಅನೇಕರು ವಿಚಿತ್ರ ಅನುಭವಗಳನ್ನು ಎದುರಿಸಿರುವ ಬಗ್ಗೆ ಮಾಹಿತಿ ಸಿಕ್ಕಿತಂತೆ.

2023ರಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಕೋಲಾರದಿಂದ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಗಾಯಗೊಂಡಂತೆ ಕಂಡ ಬೆಕ್ಕನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಬೆಕ್ಕಿನ ಕಣ್ಣುಗಳು ವಿಚಿತ್ರವಾಗಿ ಕಾಣಿಸಿಕೊಂಡಿವೆ. ಅದೇ ಸಮಯದಲ್ಲಿ ಬೈಕ್ ಮೇಲೆ ಕುಳಿತಿದ್ದ ಅವರ ಮಗಳ ಮುಖದ ಮೇಲೆ ಯಾರೋ ಗೀಳಿದಂತೆ ಗುರುತು ಮೂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಕ್ಕು ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿದೆ.

Read more Photos on
click me!

Recommended Stories