ಬೆಳಗಾವಿ: ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ, ಶಿವಲಿಂಗದಂತೆ ಕಾಣುವ 300 ವರ್ಷ ಹಿಂದಿನ ಮೆಟ್ಟಿಲುಬಾವಿಗೆ ಮರುಜೀವ!

Published : Jul 03, 2026, 02:30 PM IST

ಬೆಳಗಾವಿಯಲ್ಲಿ ಕಸ, ಮಣ್ಣಿನಿಂದ ಮುಚ್ಚಿಹೋಗಿದ್ದ 300 ವರ್ಷಗಳಷ್ಟು ಹಳೆಯ, ಆದಿಲ್‌ ಶಾಹಿ ಕಾಲದ ಮೆಟ್ಟಿಲುಬಾವಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಶಿವಲಿಂಗದ ಆಕಾರದಲ್ಲಿರುವ ಈ ಐತಿಹಾಸಿಕ ಬಾವಿಯು 80 ಅಡಿ ಆಳವಿದ್ದು, ಪ್ಯಾಸ್‌ ಫೌಂಡೇಷನ್‌ ಮತ್ತು ಸ್ವಯಂಸೇವಕರ ಶ್ರಮದಿಂದ ಮತ್ತೆ ಬೆಳಕಿಗೆ ಬಂದಿದೆ.

PREV
15
300 ವರ್ಷದ ಹಿಂದಿನ ಮೆಟ್ಟಿಲುಬಾವಿ

ಕಸ, ಮಣ್ಣು ಹಾಗೂ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ 300 ವರ್ಷಗಳ ಹಿಂದಿನ ಪುರಾತನ ಮೆಟ್ಟಿಲುಬಾವಿಯನ್ನು ಬೆಳಗಾವಿಯಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಸುಮಾರು 80 ಅಡಿ ಆಳದ ಮೆಟ್ಟಿಲು ಬಾವಿ ಇದಾಗಿದೆ. ಇದು ಬೆಳಗಾವಿ ಜಿಲ್ಲೆಯ ಐತಿಹಾಸಿಕ ಪರಂಪರೆಯ ಅಮೂಲ್ಯ ಹೆಗ್ಗುರುತು ಎನಿಸಿಕೊಂಡಿದೆ.

25
ಆದಿಲ್‌ ಶಾಹಿ ಆಡಳಿತದಲ್ಲಿ ನಿರ್ಮಾಣ

ಅಂದಾಜಿನ ಪ್ರಕಾರ 15 ಹಾಗೂ 17ನೇ ಶತಮಾನದ ನಡುವೆ ಆದಿಲ್‌ಶಾಹಿ ಅಡಳಿತದ ಕಾಲದಲ್ಲಿ ನಿರ್ಮಾಣವಾದ ಬಾವಿ ಇದಾಗಿರಬಹುದು ಎಂದು ಹೇಳಲಾಗಿದೆ. ಬೆಳಗಾವಿ ಮೂಲದ ಪ್ಯಾಸ್‌ ಫೌಂಡೇಷನ್‌, ಎನ್‌ಎಸ್‌ಎಸ್‌ ಸ್ವಯಂಸೇವಕರು ಹಾಗೂ ಸ್ಥಳೀಯ ನಿವಾಸಿಗಳ ಸಹಾಯದಿಂದ ಇದನ್ನು ಪುನರುಜ್ಜೀವನಗೊಳಿಸಲಾಗಿದೆ.

35
ಶಿವಲಿಂಗದಂತೆ ಕಾಣುವ ಬಾವಿ

ಈ ಮೆಟ್ಟಿಲುಬಾವಿಗೆ ಒಟ್ಟು 53 ಮೆಟ್ಟಿಲುಗಳಿವೆ. ಇದರ ವಿಶೇಷ ವಿನ್ಯಾಸ ಹೇಗಿದೆಯೆಂದರೆ, ಮೇಲಿನಿಂದ ನೋಡಿದರೆ, ಇಡೀ ಬಾವಿಯ ಆಕೃತಿ ಶಿವಲಿಂಗದಂತೆ ಕಾಣುತ್ತದೆ.

45
ನೀರಿನ ಪ್ರಮುಖ ಮೂಲವಾಗಿದ್ದ ಬಾವಿ

ಹಿಂದಿನ ಕಾಲದಲ್ಲಿ ಗ್ರಾಮಸ್ಥರು, ದನಕರುಗಳು ಹಾಗೂ ಪ್ರಯಾಣಿಕರಿಗೆ ಈ ಮೆಟ್ಟಿಲುಬಾವಿ ನೀರಿನ ಪ್ರಮುಖ ಮೂಲವಾಗಿತ್ತು. ಈ ಬಾವಿಯನ್ನು ಈಗ ಮರುಸ್ಥಾಪನೆ ಮಾಡಿರುವ ಕಾರಣಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

55
ಶ್ರಮದಾಯಕ ಕೆಲಸವಾಗಿತ್ತು

ಈ ಬಾವಿಯಲ್ಲಿ ಹಲವು ವರ್ಷಗಳಿಂದ ಕಸ, ಮಣ್ಣು, ಅವಶೇಷಗಳು ಸಂಗ್ರಹವಾಗಿತ್ತು. ಅದಲ್ಲದೆ, ಗಿಡಗಂಟಿಗಳು ದಟ್ಟವಾಗಿ ಬೆಳೆದಿದ್ದರಿಂದ ಈ ಕೆಲಸ ಸಾಕಷ್ಟು ಶ್ರಮದಾಯವಾಗಿತ್ತು ಎಂದು ಸ್ವಯಂಸೇವಕರೊಬ್ಬರು ಹೇಳಿದ್ದಾರೆ.

Read more Photos on
click me!

Recommended Stories