ಇಟಲಿ ಮೂಲದ ಪಗಾನಿ ಹೊಯ್ರಾ ರೋಡ್‌ಸ್ಟರ್ ಬಿಸಿ ಕಾರಿನ ಬೆಲೆ 4.6 ಮಿಲಿಯನ್ ಅಮೆರಿಕನ್ ಡಾಲರ್. ಇದನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದರೆ ಇದರ ಬೆಲೆ 34.60 ಕೋಟಿ . ಕೇವಲ 3 ಸೆಕೆಂಡ್‌ಗಳಲ್ಲಿ 96 ಕಿ.ಮೀ ವೇಗ ತಲುಪಲಿದೆ.
6.5 ಲೀಟರ್ V-12 ಎಂಜಿನ್ ಹಾಗೂ 10,500 RPM ಹೊಂದಿರುವ ಆಸ್ಟನ್ ಮಾರ್ಟಿನ್ ವಾಲ್ಕರಿ ಕಾರು 1,130 HP ಪವರ್ ಹೊಂದಿದೆ. ಈ ಕಾರಿನ ಬೆಲೆ 3.0 ಮಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 22.56 ಕೋಟಿ.
ಸ್ವೀಡನ್ ಮೂಲಕ ಕೊನಿಗ್ಸೆಗ್ ಲಿಮಿಟೆಡ್ ಎಡಿಶನ್ ಜೆಸ್ಕೋ ಕಾರನ್ನು ಹೊರತಂದಿದೆ. ಇದರ ಬೆಲೆ ಭಾರತೀ ರೂಪಾಯಿಗಳಲ್ಲಿ 30.83 ಕೋಟಿ. ಈ ಕಾರು 5.0 ಲೀಟರ್ V8 ಎಂಜಿನ್ ಹೊಂದಿದೆ.
ಫ್ರೆಂಚ್ ಆಟೋಮೇಕರ್ ಬುಗಾಟಿ ಸೂಪರ್ ಕಾರು ದುಬಾರಿ ಕಾರುಗಳಲ್ಲಿ ಒಂದು. ಅದರಲ್ಲಿ ಬುಗಾಟಿ ಚಿರೋನ್ ಕಾರಿನ ಬೆಲೆ 35.34 ಕೋಟಿ ರೂಪಾಯಿ. 8.0 ಲೀಟರ್ ಹಾಗೂ 16 ಸಿಲಿಂಡರ್ ಎಂಜಿನ್ ಹೊಂದಿದೆ.
ಮರ್ಸಿಡೀಸ್ ಬೆಂಜ್ ಕಂಪನಿಯ AMG ಒನ್ ಸೂಪರ್ ಕಾರಿನ ಬೆಲೆ 27.83 ಕೋಟಿ ರೂಪಾಯಿ. 1.6 ಲೀಟರ್ ಹೈಬ್ರಿಡ್ V6 ಎಂಜಿನ್ ಹಾಗೂ 1,000 ಸ್ಟ್ರೀಟ್ ಲೀಗರ್ ಹಾರ್ಸ್‌ಪವರ್ ಹೊಂದಿದೆ.
F1 ಸೂಪರ್ ಕಾರು ದಿಗ್ಗದ ಮೆಕ್ಲೆರೆನ್ ಬಿಡುಗಡೆ ಮಾಡಿದ ಸ್ಪೀಡ್‌ಟೈಲ್ ಕಾರಿನ ಬೆಲೆ 22.56 ಕೋಟಿ ರೂಪಾಯಿ
ಇಂಗ್ಲೀಷ್ ಅಟೋಮೇಕರ್ ಲೋಟಸ್ ಕಂಪನಿ ಇವಿಜಾ ಸೂಪರ್ ಕಾರು ಬಿಡುಗಡೆ ಮಾಡಿದೆ. ಇದರ ಬೆಲೆ 22.56 ಕೋಟಿ ರೂಪಾಯಿ
ಬುಗಾಟಿ ಲಾ ವಯ್ಚಿರ್ ನೊಯ್ರ್ ಕಾರು ವಿಶ್ವದ ಅತ್ಯಂತ ದುಬಾರಿ ಕಾರು. ಇದು ಲಿಮಿಟೆಡ್ ಎಡಿಶನ್ ಕಾರಾಗಿದೆ. ಈ ಕಾರು ಆರ್ಡರ್ ಇದ್ದರೆ ಮಾತ್ರ ಪ್ರೊಡಕ್ಷನ್. ಹೀಗಿದ್ದರೂ ಈ ಕಾರಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇದರ ಬೆಲೆ 25.3 ಮಿಲಿಯನ್ ಕೆನಡಿಯನ್ ಡಾಲರ್. ಇದು ಭಾರತದ ರೂಪಾಯಿಗಳಲ್ಲಿ 139 ಕೋಟಿ ರೂಪಾಯಿ