ಆಗಸ್ಟ್ ತಿಂಗಳ ಮಾರಾಟ ನೋಡಿ ಆಟೋಮೇಕರ್ಸ್‌ಗೆ ಸಮಾಧಾನ. ಕೊರೋನಾದಿಂದ ಕಂಗೆಟ್ಟಿದ್ದ ಕಂಪನಿಗಳಿಗೆ ಹೊಸ ಭರವಸೆ ಮೂಡಿಸಿದ ಆಗಸ್ಟ್ ತಿಂಗಳ ಮರಾಟ ವಿವರ.
ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಒಟ್ಟು 2,34,142 ವಾಹನ ಮಾರಾಟವಾಗಿದೆ. 2019ರ ಆಗಸ್ಟ್ ತಿಂಗಳಿಗ ಹೊಲಿಸಿದರೆ ಶೇಕಡಾ 19.6 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಭಾರತದ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣುತ್ತಿದೆ ಅನ್ನೋ ಸೂಚನೆ ಸಿಕ್ಕಿದೆ.
ಆಗಸ್ಟ್ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆಗಸ್ಟ್ ತಿಂಗಳಲ್ಲಿ ಮಾರುತು ಸುಜುಕಿ 1,13,033 ವಾಹನ ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 21.3ರಷ್ಟು ಅಧಿಕವಾಗಿದೆ.
ಗರಿಷ್ಠ ಮಾರಾಟವಾದ ಮಾರುತಿ ಕಾರುಗಳ ಪೈಕಿ ಮಾರುತಿ ಸ್ಪಿಫ್ಟ್ ಮೊದಲ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಆಲ್ಟೋ, ವ್ಯಾಗನ್ಆರ್, ಡಿಸೈರ್, ಎರ್ಟಿಗಾ, ಇಕೋ ಕಾರುಗಳು ಸ್ಥಾನ ಪಡೆದಿದೆ.
ಮಾರುತಿ ಮೊದಲ ಸ್ಥಾನದಲ್ಲಿದ್ದರೆ ಹ್ಯುಂಡೈ ಇಂಡಿಯಾ 2ನೇ ಸ್ಥಾನದಲ್ಲಿದೆ. ಆಗಸ್ಟ್ ತಿಂಗಳಲ್ಲಿ ಹ್ಯುಂಡೈ 45,809 ಕಾರುಗಳನ್ನು ಮಾರಾಟ ಮಾಡಿದೆ.
ಆಗಸ್ಟ್ ತಿಂಗಳ ವಾಹನ ಮಾರಾಟದಲ್ಲಿ ಮೂರನೇ ಸ್ಥಾನವನ್ನು ಟಾಟಾ ಮೋಟಾರ್ಸ್ ಅಲಂಕರಿಸಿದೆ. ಆಗಸ್ಟ್ 2020ರ ತಿಂಗಳಲ್ಲಿ ಟಾಟಾ ಮೋಟಾರ್ಸ್ 18,583 ವಾಹನ ಮಾರಾಟ ಮಾಡಿದೆ. 2019ರ ಆಗಸ್ಟ್ ತಿಂಗಳಲ್ಲಿ ಟಾಟಾ ಮೋಟಾರ್ಸ್ 7,316 ವಾಹನ ಮಾರಾಟ ಮಾಡಿತ್ತು. ಈ ಮೂಲಕ ಬರೋಬ್ಬರಿ ಶೇಕಡಾ 154 ರಷ್ಟು ಏರಿಕೆ ಕಂಡಿದೆ.
ಟಾಟಾದ ನಂತರದ ಮಹೀಂದ್ರ ಕಂಪನಿ ಸ್ಥಾನ ಪಡೆದಿದೆ. ನಾಲ್ಕನೇ ಸ್ಥಾನದಲ್ಲಿರುವ ಮಹೀಂದ್ರ ಆಗಸ್ಟ್ ತಿಂಗಳಲ್ಲಿ 13,407 ವಾಹನ ಮಾರಾಟ ಮಾಡಿದೆ. ಕಳೆದವರ್ಷದ ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೇವಲ 2% ಏರಿಕೆ ಕಂಡಿದೆ.