SUV ಮಾರಾಟದಲ್ಲಿ ಬ್ರೆಜಾ, ನೆಕ್ಸಾನ್ ಹಿಂದಿಕ್ಕಿದ ವೆನ್ಯೂ; ಮೊದಲ ಸ್ಥಾನಕ್ಕೆ ಹ್ಯುಂಡೈ!

First Published | Sep 5, 2020, 10:11 PM IST

ಪ್ರತಿ ಆಟೋಮೊಬೈಲ್ ಕಂಪನಿಗಳು ಹೊಸ ಮಾದರಿ, ಹೊಸ ವಿನ್ಯಾಸದಲ್ಲಿ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ಕಾರಣ ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300 ಕಾರುಗಳನ್ನು ಹಿಂದಿಕ್ಕಿದ ಹ್ಯುಂಡೈ ವೆನ್ಯೂ ಇದೀಗ ಭಾರತದ ನಂ.1 SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಹಲವು ಕಾರುಗಳು ಭಾರತದಲ್ಲಿ ಲಭ್ಯವಿದೆ.
undefined
ಭಾರತದ SUV ಕಾರುಗಳ ಪೈಕಿ ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಹ್ಯುಂಡೈ ವೆನ್ಯೂ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಮಾರುತಿ ಬ್ರೆಜಾ ಹಿಂದಿಕ್ಕಿದೆ.
undefined

Latest Videos


ಆಗಸ್ಟ್ ತಿಂಗಳಲ್ಲಿ ಹ್ಯುಂಡೈ ವೆನ್ಯೂ 8,267 ಕಾರುಗಳನ್ನು ಮಾರಾಟ ಮಾಡಿದೆ. ಪ್ರತಿಸ್ಪರ್ಧಿ ಮಾರುತಿ ಬ್ರೆಜಾ 6,903 ಕಾರುಗಳು ಮಾರಾಟವಾಗಿದೆ.
undefined
ಕೊರೋನಾ ಸಮಯದಲ್ಲಿ ಎಲ್ಲಾ ಕಾರುಗಳು ಮಾರಾಟ ಕುಸಿತಗೊಂಡಿತ್ತು. ಈ ವೇಳೆ ಹ್ಯುಂಡೈ ತೀವ್ರ ಹಿನ್ನಡೆ ಅನುಭವಿಸಿತ್ತು. ಅನ್‌ಲಾಕ್ ಆರಂಭದ ಬಳಿಕ ಹ್ಯುಂಡೈ ವಾಹನ ಮಾರಾಟದಲ್ಲಿ ಚೇತರಿಕೆ ಕಂಡಿತ್ತು.
undefined
SUV ಕಾರುಗಳ ಪೈಕಿ ಮಾರುತಿ ಬ್ರೆಜಾ ಅಗ್ರಸ್ಥಾನದಲ್ಲಿ ಮುಂದುವರಿದಿತ್ತು. ಇದೀಗ ಹ್ಯುಂಡೈ ವೆನ್ಯೂ ಬ್ರೆಜಾ ಕಾರನ್ನು ಹಿಂದಿಕ್ಕಿ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ.
undefined
ಹ್ಯುಂಡೈ ವೆನ್ಯೂ ಕಾರಿಲ್ಲಿ ಡೀಸೆಲ್, ಪೆಟ್ರೋಲ್ ಹಾಗೂ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇದರಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್ ಕಾರುಗಳಿಗೆ ಭಾರಿ ಬೇಡಿಕೆ ಇದೆ.
undefined
SUV ಕಂಪಾಕ್ಟ್ ಕಾರುಗಳ ಪೈಕಿ ಹ್ಯುಂಡೈ ವೆನ್ಯೂ ಅತೀ ಕಡಿಮೆ ಬೆಲೆಯ ಕಾರಾಗಿದೆ. ವೆನ್ಯೂ ಕಾರಿನ ಬೆಲೆ 6.70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತದೆ.
undefined
ವೆನ್ಯೂ ಟಾಪ್ ಎಂಡ್ ಕಾರಿನ ಬೆಲೆ 11.58 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹ್ಯುಂಡೈ ವೆನ್ಯೂ ಕಾರಿನಲ್ಲಿ iMT ಟ್ರಾನ್ಸ್‌ಮಿಶನ್ ಟೆಕ್ನಾಲಜಿಯನ್ನು ಬಳಸಲಾಗಿದೆ.
undefined
click me!