ಟ್ರಂಪ್ ಪ್ರವಾಸಕ್ಕೂ ಮುನ್ನ ಹರ್ಕ್ಯೂಲಸ್ ವಿಮಾನ ಅಹಮದಾಬಾದ್ ತಲುಪುತ್ತಿದ್ದಂತೆಯೇ ಎಲ್ಲರ ದೃಷ್ಟಿ ಅದರ ಮೇಲೆ ನೆಟ್ಟಿತ್ತು. ಈ ವಿಮಾನದ ಮೂಲಕ ಟ್ರಂಪ್ ಬೆಂಗಾಲು ಪಡೆಯ ಕಾರು, ರಹಸ್ಯ ಕ್ಯಾಮೆರಾಗಳು, ಫೈಯರ್ ಸೇಫ್ಟಿ ಸಿಸ್ಟಂನಂತಹ ಅಗತ್ಯ ಉಪಕರಣಗಳೂ ತರಲಾಗಿವೆ.
ಇವುಗಳಲ್ಲಿ ಅತ್ಯಂತ ವಿಶೇಷ ವಸ್ತುವೆಂದರೆ ರೋಡ್ ರನ್ನರ್ ಕಾರು. ಈ ಕಾರು ಟ್ರಂಪ್ ಪ್ರತಿ ಪ್ರವಾಸದ ವೇಳೆ ಭದ್ರತೆಯ ಭಾಗವಾಗಿರುತ್ತದೆ. ಇದು ಅಮೆರಿಕಾ ಅಧ್ಯಕ್ಷರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಕಾರು ವಿಶೇಷವಾಗಿ ನಿರ್ಮಿಸಲಾಗಿದೆ. ಇದನ್ನು ತಯಾರಿಸಲು ಟ್ಯಾಂಕ್ ಪ್ಲೇಟ್ ಬಳಸಲಾಗಿದೆ. ಈ ಕಾರು ಮೊಬೈಲ್ ಕಮಾಂಡ್ ಹಾಗೂ ಕಂಟ್ರೋಲ್ ವ್ಹೀಕಲ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಈ ವಿಶೇಷ ಕಾರಿನ ಮೂಲಕವೇ ಅಮೆರಿಕಾ ಅಧ್ಯಕ್ಷರ ಭದ್ರತಾ ಸಿಬ್ಬಂದಿ ಹಾಗೂ ರಕ್ಷಣಾ ಇಲಾಖೆ ನಡುವೆ ಸಂವಹನ ನಡೆಯುತ್ತದೆ. ಈ ಕಾರು ಮೂಲಕವೇ ಟ್ರಂಪ್ ಪ್ರವಾಸದ ವಿಡಿಯೋ ಸ್ಟ್ರೀಮಿಂಗ್ ನಡೆಯುತ್ತದೆ. ಇದು ಉಪಗ್ರಹದ ಮೂಲಕ ನೇರವಾಗಿ ರಕ್ಷಣಾ ಇಲಾಖೆಗೆ ರವಾನೆಯಾಗುತ್ತದೆ.
ಈ ಕಾರಿನಲ್ಲಿ ಡ್ಯೂಪ್ಲೆಕ್ಸ್ ರೇಡಿಯೋ ಇಂಟರ್ನೆಟ್ ನಂತಹ ಸೌಲಭ್ಯಗಳೂ ಇವೆ. ಕಾರು ಯಾವಾಗಲೂ ಶ್ವೇತ ಭವನದ ಸಂಪರ್ಕದಲ್ಲಿರುತ್ತದೆ. ಹೀಗಾಗಿ ಈ ಕಾರು ಯಾವತ್ತೂ ಟ್ರಂಪ್ ಭದ್ರತೆಯಲ್ಲಿ ನೋಡಬಹುದು.
ಇದನ್ನು ಹೊರತುಪಡಿಸಿ ಟ್ರಂಪ್ ಅವರ ವಿಸೇಷ ಭದ್ರತಾ ಪಡೆಯೂ ಅಹಮದಾಬಾದ್ ತಲುಪಿದೆ. ಇದಕ್ಕೂ ಮೊದಲು ಅಮೆರಿಕಾದ ಸೀಕ್ರೆಟ್ ಏಜೆನ್ಸಿಯ ಅಧಿಕಾರಿಗಳು ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಟ್ರಂಪ್ ಪ್ರವಾಸದ ವೇಳೆ ಸುಮಾರು 200 ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೆಲ್ಲರೂ ಭಾರತದ ರಕ್ಷಣಾ ಪಡೆಯೊಂದಿಗೆ ಸಂಪರ್ಕದಲ್ಲಿರಲಿದ್ದಾರೆ.
ಭಾರತ ಪ್ರವಾಸದ ವೇಳೆ ಟ್ರಂಪ್ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮಕ್ಕೆ ತೆರಳಿ, ಅಲ್ಲಿಂದ ಇಂಡಿಯಾ ರೋಡ್ ಶೋ ಮೂಲಕ ಮೊಟೇರೋ ಸ್ಟೇಡಿಯಂ ತಲುಪಲಿದ್ದಾರೆ. ಬಳಿಕ ಟ್ರಂಪ್ ಹಾಗೂ ಮೋದಿ 'ನಮಸ್ತೆ ಟ್ರಂಪ್' ಕಾರ್ಯಕ್ರಮ ಉದ್ದೇಶಿಸಿ ಭಾಷಣ ನಡೆಸಲಿದ್ದಾರೆ.