ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ಕ್ರಾಸ್ಓವರ್ ಕಾರು; ಟಾಟಾ HBX ಮೇಲೆ ಎಲ್ಲರ ಚಿತ್ತ!
First Published | Apr 24, 2020, 2:43 PM ISTಕೊರೋನಾ ವೈರಸ್ ಹಾವಳಿಯಿಂದ ಬಹುತೇಕಾ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿದೆ. ಅದರಲ್ಲಿ ಆಟೋಮೊಬೈಲ್ ಇಂಡಸ್ಟ್ರಿಗೆ ಹೆಚ್ಚಿನ ಹೊಡೆತ ಬಿದ್ದಿದೆ. ಕಾರಣ ವುಹಾನ್‌ನಲ್ಲಿ ವೈರಸ್ ಹುಟ್ಟಿಕೊಂಡಾಗಲೇ ಇತರ ದೇಶಗಳಿಗೆ ವಾಹನ ಬಿಡಿ ಭಾಗಗಳ ರವಾನೆ ಸ್ಥಗಿತಗೊಂಡಿತ್ತು. ಇದೀಗ ಲಾಕ್‌ಡೌನ್ ತೆರವಾಗಿ ಜೀವನ ಸಹಜ ಸ್ಥಿತಿಗೆ ಬರಲು ಆಟೋಮೊಬೈಲ್ ಕಂಪನಿ ಕಾಯುತ್ತಿದೆ. ಲಾಕ್‌ಡೌನ್ ಮೇ ಅಥವಾ ಜೂನ್‌ನಲ್ಲಿ ತೆರವಾದರೂ, ಸಂಪೂರ್ಣ ರಿಲೀಫ್ ಸಿಗುವುದಿಲ್ಲ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ನವೆಂಬರ್ ಅಥವಾ ಡಿಸೆಂಬರ್ ವೇಳೆ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ರಾಸ್ ಓವರ್ ಕಾರುಗಳ ವಿವರ ಇಲ್ಲಿದೆ