ಭಾರತದಲ್ಲಿ suv ಕಾರುಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಎಲ್ಲಾ ಆಟೋಮೊಬೈಲ್ ಕಂಪನಿಗಳು suv ಕಾರು ಬಿಡುಗಡೆ ಮಾಡತ್ತಿದೆ. ಅದರಲ್ಲೂ ಸಬ್ ಕಾಂಪಾಕ್ಟ್ suvಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿಯೇ ಮಾರುತಿ ಬ್ರೆಜ್ಜಾ, ಟಾಟಾ ನೆಕ್ಸಾನ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ ಸೇರಿದಂತೆ ಹಲವು ಕಾರುಗಳು ಭಾರತದಲ್ಲಿ ದಾಖಲೆ ಬರೆಯುತ್ತಲೇ ಇದೆ. ಇದೀಗ ಟೊಯೋಟಾ ಸೆಡಾನ್ ಯಾರಿಸ್ ಕಾರಿನ ಕ್ರಾಸ್ ಓವರ್ ಕಾರನ್ನು ಅನಾವರಣ ಮಾಡಿದೆ. ಆದರೆ ಈ ಬಾರಿ ಕ್ರಾಸ್ ಓವರ್ suv ರೂಪದಲ್ಲಿ ಅನಾವರಣಗೊಂಡಿದೆ. ನೂತನ ಕಾರಿನ ವಿವರ ಇಲ್ಲಿದೆ.