ಕೊರೋನಾ ವೈರಸ್ ಕಾರಣ ಬಿಡುಗಡೆಯಾಗಬೇಕಿದ್ದ ಹಲವು ಕಾರು ಬೈಕ್ ಇದೀಗ ತಾತ್ಕಾಲಿಕ ಸ್ಥಗಿತಗೊಂಡಿದೆ. ಎಲ್ಲಾ ಕಂಪನಿಗಳು ಉತ್ಪಾದನೆ ನಿಲ್ಲಿಸಿದೆ. ಇದೀಗ ಎಲ್ಲರೂ ಕೊರೋನಾ ಹತೋಟಿಗೆ ಬಂದು ಜೀವನ ಸಹಜ ಸ್ಥಿತಿಗೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇತ್ತ ಆಟೋಮೊಬೈಲ್ ಕಂಪನಿಗಳು ಈಗಾಗಲೇ ರೆಡಿಯಾಗಿರುವ ವಾಹನ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೀಗೆ ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ದುಬಾರಿ ಬೈಕ್ ವಿವರ ಇಲ್ಲಿದೆ.