ಟಾಟಾ ಮೋಟಾರ್ಸ್ ವಾಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ನೆಕ್ಸಾನ್ ಕಾರು ಮಾರಾಟದಲ್ಲಿ ಶೇಕಡಾ 100 ರಷ್ಟು ಏರಿಕೆ ಕಂಡಿದೆ. ಆಗಸ್ಟ್ 2020ರಲ್ಲಿ ಟಾಟಾ ನೆಕ್ಸಾನ್ ಕಾರು 5,179 ಕಾರುಗಳು ಮಾರಾಟವಾಗಿದೆ.
undefined
2019ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಟಾಟಾ ನೆಕ್ಸಾನ್ ಕಾರು ಮಾರಾಟ ದ್ವಿಗುಣಗೊಂಡಿದೆ. 2019ರ ಆಗಸ್ಟ್ ತಿಂಗಳಲ್ಲಿ 2,275 ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಿತ್ತು.
undefined
ಪ್ರತಿಸ್ಪರ್ಧಿಯಾಗಿರುವ ಮಾರುತಿ ಬ್ರೆಜಾ 6,903 ಕಾರುಗಳು ಮಾರಾಟವಾಗಿದೆ. ಈ ಮೂಲಕ ಟಾಟಾ ನೆಕ್ಸಾನ್ ಹಾಗೂ ಮಾರುತಿ ಸುಜುಜಿ ಬ್ರೆಜಾ ಕಾರಿನ ನಡವಿನ ಅಂತರ ಕಡಿಮೆಯಾಗಿದೆ.
undefined
ಟಾಟಾ ನೆಕ್ಸಾನ್ ಕಾರು ಭಾರತದಲ್ಲಿ ಕಾರಿನ ಸುರಕ್ಷತೆಗೆ ಹೊಸ ಭಾಷ್ಯ ಬರೆದ ಕಾರಾಗಿದೆ. ಕೈಗೆಟುಕುವ ದರದಲ್ಲಿ ಗರಿಷ್ಠ ಸುರಕ್ಷತೆಯನ್ನು ಟಾಟಾ ನೆಕ್ಸಾನ್ ನೀಡುತ್ತಿದೆ.
undefined
ಭಾರತದ ಮೊಟ್ಟ ಮೊದಲ 5 ಸ್ಟಾರ್ ಸೇಫ್ಟಿ ರೇಟಿಂಗ್ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಸಬ್ ಕಾಂಪಾಕ್ಟ್ SUV ಕಾರು ಪಾತ್ರವಾಗಿದೆ
undefined
ನೆಕ್ಸಾನ್ ಇತ್ತೀಚೆಗೆ XM(S) ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರು ಈ ಕಾರಿನ ಬೆಲೆ 8.36 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
undefined
ಎಲೆಕ್ಟ್ರಿಕ್ ಸನ್ ರೂಫ್ ಹೊಂದಿರುವ ಟಾಟಾ ನೆಕ್ಸಾನ್ XM(S) ವೇರಿಯೆಂಟ್ ಕಾರು ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸನ್‌ರೂಫ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
undefined