Published : Dec 04, 2020, 03:02 PM ISTUpdated : Dec 04, 2020, 03:04 PM IST
ಸ್ಯಾಂಡಲ್‌ವುಡ್ ನಟ ದರ್ಶನ್ ಕಾರು ಕ್ರೇಝ್ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ದರ್ಶನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಫಾರ್ಮ್ ಹೌಸ್, ಪ್ರಾಣಿಗಳಲ್ಲಿ ಎಷ್ಟು ಪ್ರೀತಿ ಇದೆಯೋ ಅದೇ ರೀತಿ ಕಾರುಗಳ ಮೇಲೆ ದರ್ಶನ್‌ಗೆ ವಿಶೇಷ ಒಲವಿದೆ. ಹೀಗಾಗಿ ಹೊಸ ಹೊಸ, ಐಷಾರಾಮಿ ದುಬಾರಿ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಕೆಲ ಕಾರುಗಳನ್ನು ಅಪ್‌ಗ್ರೇಡ್ ಮಾಡುತ್ತಿರುತ್ತಾರೆ. ಇದೀಗ ದರ್ಶನ್ ಹೊಚ್ಚ ಹೊಸ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.