ದೀಪಾವಳಿಗೆ ಮಹೀಂದ್ರ ಥಾರ್ ಮತ್ತೊಂದು ಸಾಧನೆ; ಬೆಳಕಿನ ಹಬ್ಬ ಮತ್ತಷ್ಟು ಸಿಹಿ!

First Published | Nov 13, 2020, 7:40 PM IST

ಮಹೀಂದ್ರ ಥಾರ್ ಬಿಡುಗಡೆಯಾದ ಬಳಿಕ ಹೆಜ್ಜೆ ಹೆಜ್ಜೆಯಲ್ಲೂ ದಾಖಲೆ ಬರೆಯುತ್ತಿದೆ. ಆಕರ್ಷಕ ವಿನ್ಯಾಸ, ದಕ್ಷ ಹಾಗೂ ಬಲಿಷ್ಠ ಎಂಜಿನ್, ಹಲವು ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಥಾರ್‌ನಲ್ಲಿದೆ.  ಬಿಡುಗಡೆಯಾದ ಒಂದೇ ತಿಂಗಳಿಗೆ 2,000 ಥಾರ್ ಬುಕಿಂಗ್ ದಾಖಲೆ ಬರೆದಿತ್ತು. ಇದೀಗ ದೀಪಾವಳಿ ಹಬ್ಬಕ್ಕೆ ಥಾರ್ ಮತ್ತೊಂದು ಸಾಧನೆ ಮಾಡಿದೆ.

ಮಹೀಂದ್ರ ಥಾರ್ ಹೊಚ್ಚ ವಿನ್ಯಾಸ, ಹಲವು ಬದಲಾವಣೆಯೊಂದಿಗೆ ಬಿಡುಗಡೆಯಾಗಿದ್ದು, ಸೆಲೆಬ್ರೆಟಿಗಳು ಸೇರಿದಂತೆ ಹಲವರು ನೂತನ ಥಾರ್ ವಾಹನಕ್ಕೆ ಮನಸೋತಿದ್ದಾರೆ.
ಬಿಡುಗಡೆಯಾದ ಒಂದೇ ತಿಂಗಳಿಗ 2,000 ಥಾರ್ ಬುಕಿಂಗ್ ಆಗೋ ಮೂಲಕ ದಾಖಲೆ ಬರೆದಿದ್ದ ಮಹೀಂಂದ್ರ, ಇದೀಗ ದೀಪಾವಳಿ ಹಬ್ಬಕ್ಕೆ 1000 ಥಾರ್ ಜೀಪ್ ವಿತರಣೆ ಮಾಡಲು ಸಜ್ಜಾಗಿದೆ.
Tap to resize

ಬುಕಿಂಗ್ ಆದ್ಯತೆಯ ಮೇಲೆ ದೀಪಾವಳಿ ಹಬ್ಬಕ್ಕೆ 1000 ಥಾರ್ ವಾಹನ ಡೆಲಿವರಿ ಮಾಡಲು ಮಹೀಂದ್ರ ಸಿದ್ದತೆ ಮಾಡಿಕೊಂಡಿದೆ. ಈ ಮೂಲಕ ಹಬ್ಬದ ವೇಳೆ ಗ್ರಾಹಕರ ಕಾಯುವಿಕೆ ಅಂತ್ಯಗೊಳಿಸಲು ಮಹೀಂದ್ರ ಮುಂದಾಗಿದೆ.
ನವೆಂಬರ್ 1 ರಿಂದ ಮಹೀಂದ್ ಥಾರ್ ವಿತರಣೆ ಆರಂಭಿಸಿದೆ. ಈಗಾಗಲೇ 500 ಮಹೀಂದ್ರ ಥಾರ್ ವಿತರಣೆ ಮಾಡಲಾಗಿದೆ. ಹಬ್ಬದ ಕಾರಣ ವಿತರಣೆಯಲ್ಲಿ ಮತ್ತಷ್ಟು ಚುರುಕುತನ ತರಲು ಮಹೀಂದ್ರ ಮುಂದಾಗಿದೆ.
ಪ್ರತಿ ತಿಂಗಳು 2,000 ಮಹೀಂದ್ರ ಥಾರ್ ಉತ್ಪಾದನೆಯಾಗುತ್ತಿತ್ತು. ಇದೀಗ ಈ ಸಂಖ್ಯೆನ್ನು 3,000ಕ್ಕೆ ಏರಿಸಲು ಮಹೀಂದ್ರ ಮುಂದಾಗಿದೆ.
ಮಹೀಂದ್ರ ಥಾರ್ ಬೆಲೆ 9.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭವಾಗಲಿದೆ. ಗರಿಷ್ಠ ಬೆಲೆ 13.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಆಗಸ್ಟ್ 15 ರಂದು ಮಹೀಂದ್ರ ಥಾರ್ ಅನಾವರಣಗೊಂಡಿದ್ದರೆ, ಅಕ್ಟೋಬರ್ 2ರಂದು ಮಹೀಂದ್ರ ಥಾರ್ ಬಿಡುಗಡೆಯಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಮಲಯಾಳಂ ನಟ ಪೃಥ್ವಿರಾಜ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಥಾರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Latest Videos

click me!