ತಮಿಳು ಸ್ಟಾರ್ ನಟ ವಿಜಯ್ ಅವರ ರೇಂಜ್ ರೋವರ್ ಕಾರಿಗೆ ದಂಡ ವಿಧಿಸಲಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬೆಂಗಳೂರು ಪೊಲೀಸರು ದಂಡ ಹಾಕಿದ್ದಾರೆ
undefined
ನಟ ವಿಜಯ್ ಅವರ ರೇಂಜ್ ರೋವರ್ ಕಾರಿನ ಟಿಂಟೆಡ್ ಗ್ಲಾಸ್ ಅಳವಡಿಸಿದ ಆರೋಪಕ್ಕೆ ದಂಡ ವಿಧಿಸಲಾಗಿದೆ. ಕೆ.ಆರ್.ಪುರ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಮಹಮದ್ ರವರಿಂದ ಕಾರು ಚಾಲಕನಿಗೆ ದಂಡ ವಿಧಿಸಿದ್ದಾರೆ.
undefined
ನಟ ವಿಜಯ್ ತಮ್ಮ ನೆಚ್ಚಿನ ರೇಂಜ್ ರೋವರ್ ಕಾರನ್ನು ಬೆಂಗಳೂರಿನ ವಕೀಲ ಅನೀಶ್ ಖರೀದಿಸಿದ್ದರು. ಬಿಳಿ ಬಣ್ಣದ ರೇಂಜ್ ರೋವರ್ ಕಾರು ಇದಾಗಿದ್ದು, ವಿಜಯ್ ಫ್ಯಾಂಟಸಿ ನಂಬರ್ 0123 ರಿಜಿಸ್ಟ್ರೇಶನ್ ಹೊಂದಿದೆ.
undefined
ಕೆ.ಆರ್.ಪುರ ರೈಲ್ವೆ ನಿಲ್ದಾಣದ ಬಳಿ ಪ್ರತ್ಯಕ್ಷವಾದ ರೇಂಜ್ ರೋವರ್ ಕಾರು ತಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿದದ ಕಾರಣಕ್ಕೆ 500 ರೂಪಾಯಿ ದಂಡ ಹಾಕಿದ ಪೊಲೀಸರು
undefined
ವಿಜಯ್ ಕಾರು ಖರೀದಿಸಿದರೂ ಟಿಂಟೆಡ್ ಗ್ಲಾಸ್ ತೆರವು ಮಾಡದ ವಕೀಲ ಅನೀಶ್, ಹಲವು ಬಾರಿ ನಗರದಲ್ಲಿ ಕಾರು ಚಲಾಯಿಸಿದ್ದಾರೆ.
undefined
ನಿಯಮದ ಪ್ರಕಾರ 500 ರೂಪಾಯಿ ದಂಡ ವಿಧಿಸಿದ ಪೊಲೀಸರು ಕಾರಿನ ಟಿಂಟೆಡ್ ಗ್ಲಾಸ್ ತೆರವು ಮಾಡಲು ಎಚ್ಚರಿಕೆ ನೀಡಿದ್ದಾರೆ.
undefined
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಭಾರತದಲ್ಲಿ ಯಾವುದೇ ವಾಹನ ಟಿಂಟೆಡ್ ಗ್ಲಾಸ್ ಬಳಸುವಂತಿಲ್ಲ. ಕಾರಿನ ವಿಂಡೋ ಹಾಗೂ ಹಿಂಬದಿ ಗಾಜುಗಳಿಗೆ ಕಪ್ಪು ಬಣ್ಣದ ಕೂಲಿಂಗ್ ಬಳಸಲು(ಟಿಂಟೆಡ್ ಗ್ಲಾಸ್) ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ.
undefined
ಕಾರಿನಲ್ಲಿ ಟಿಂಟೆಡ್ ಗ್ಲಾಸ್ ಬಳಸಿದ್ದರೆ ವಾಹನ ಕಳ್ಳಸಾಗಣೆ, ಅಪಹರಣ, ಕಾರಿನೊಳಗೆ ಕಳ್ಳರಿದ್ದಾರಯೇ ಎಂಬುದು ಪೊಲೀಸರಿಗೆ ತಿಳಿಯುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ 2012ರಲ್ಲಿ ಟಿಂಟೆಡ್ ಗ್ಲಾಸ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
undefined